ETV Bharat / state

'ಖಾಸಗಿ ಬಸ್​ ಸಂಸ್ಥೆಗಳಿಗೆ ಇನ್ನಾರು ತಿಂಗಳು ತೆರಿಗೆ ವಿನಾಯಿತಿ ನೀಡಿ'

ಲಕ್ಷಾಂತರ ಚಾಲಕರು ಹಾಗೂ ಬಸ್​ಗಳ ಮಾಲೀಕರು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರದ ಮೊರಾಟೋರಿಯಂ ಅವಧಿ ಆಗಸ್ಟ್​ ತಿಂಗಳಿಗೆ ಕೊನೆಯಾಗಲಿದ್ದು, ಅದನ್ನು ಇನ್ನಷ್ಟು ತಿಂಗಳು ಮುಂದುವರೆಸಬೇಕು ಎಂದು ನಟರಾಜ ಶರ್ಮಾ ಒತ್ತಾಯಿಸಿದರು.

author img

By

Published : Aug 19, 2020, 10:13 PM IST

private bus owners fight against govt in bangalore
ಖಾಸಗಿ ವಾಹನಗಳ ನಿಲುಗಡೆ

ಬೆಂಗಳೂರು: ಕೊರೊನಾ ಸೋಂಕಿನಿಂದ ಖಾಸಗಿ ಬಸ್ ಸಂಸ್ಥೆಗಳಿಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಆದ್ದರಿಂದ ಇನ್ನೂ 6 ತಿಂಗಳು ತೆರಿಗೆ ವಿನಾಯಿತಿ ನೀಡಬೇಕು. ನಂತರದ 6 ತಿಂಗಳು ಶೇಕಡಾ 50ರಷ್ಟು ತೆರಿಗೆ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಅಪರೇಟರ್ಸ್ ಸಂಘದ ಅಧ್ಯಕ್ಷ ನಟರಾಜ ಶರ್ಮಾ ಸರ್ಕಾರಕ್ಕೆ ಒತ್ತಾಯಿಸಿದರು.

ಅಧ್ಯಕ್ಷ ನಟರಾಜ್ ಶರ್ಮ

ಅಂದಾಜು 3.5 ಸಾವಿರ ಕೋಟಿ ರೂಪಾಯಿ ತೆರಿಗೆ ಭರಿಸುತ್ತಿರುವ ಖಾಸಗಿ ಸಾರಿಗೆ ವಲಯದ ಸಮಸ್ಯೆಗಳಿಗೆ ಸರ್ಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಈಗಾಗಲೇ 5 ಬಾರಿ ಮನವಿ ಮಾಡಲಾಗಿದೆ. ಲಕ್ಷಾಂತರ ಚಾಲಕರು ಹಾಗೂ ಬಸ್​ಗಳ ಮಾಲೀಕರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರದ ಮೊರಾಟೋರಿಯಂ ಅವಧಿ ಆಗಸ್ಟ್​ ತಿಂಗಳಿಗೆ ಕೊನೆಯಾಗಲಿದ್ದು, ಅದನ್ನು ಇನ್ನಷ್ಟು ತಿಂಗಳು ಮುಂದುವರೆಸಬೇಕು ಎಂದು ಶರ್ಮಾ ಒತ್ತಾಯಿಸಿದರು.

ಬೇಡಿಕೆಗಳು:

1. 6 ತಿಂಗಳು ತೆರಿಗೆ ವಿನಾಯಿತಿ

2. ನಂತರದ 6 ತಿಂಗಳು ಶೇ.50 ತೆರಿಗೆ ವಿನಾಯಿತಿ

3. ಖಾಸಗಿ ಬಸ್​ಗಳಿಗೆ ಬಸ್​ ನಿಲ್ದಾಣ ನಿರ್ಮಾಣ

4. ಮೊರಾಟೋರಿಯಂ ಅವಧಿ ವಿಸ್ತರಣೆ

5. ಟೋಲ್ ಶುಲ್ಕ ವಿನಾಯಿತಿ

6. ಡೀಸಲ್ ತೆರಿಗೆ ಕಡಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.