ಬೆಂಗಳೂರು: ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಈಗಾಗಲೇ ರಾಜ್ಯ ಸರ್ಕಾರ ಪ್ರೌಢಶಾಲಾ ತರಗತಿಗಳನ್ನು ಆರಂಭಿಸಿದೆ. ಈ ಬೆನ್ನಲ್ಲೇ ಪ್ರಾಥಮಿಕ ಶಾಲೆಗಳನ್ನೂ ನಡೆಸುವಂತೆ ಒತ್ತಡ ಬಂದಿದ್ದು ನಾಳೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.
1 ರಿಂದ 8ನೇ ತರಗತಿ ಆರಂಭಿಸುವ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಶೇ. 2ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಪ್ರಾಥಮಿಕ ತರಗತಿ ಆರಂಭಕ್ಕೆ ಈಗಾಗಲೇ ಚಿಂತನೆ ನಡೆದಿದೆ. ಶಾಲಾರಂಭಕ್ಕೆ ತಾಂತ್ರಿಕ ಸಲಹಾ ತಜ್ಞರ ಜೊತೆಗೆ ಚರ್ಚೆ ನಡೆಯಲಿದ್ದು, ಗ್ರೀನ್ ಸಿಗ್ನಲ್ ಕೊಟ್ಟರೆ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಶಾಲೆ ಆರಂಭವಾಗಲಿದೆ.
ಯಾವ್ಯಾವ ಜಿಲ್ಲೆಯಲ್ಲಿ ಹೇಗಿದೆ ಪಾಸಿಟಿವಿಟಿ ರೇಟ್ (ಶೇ.1ರಿಂದ 3ರೊಳಗೆ)
- ದಕ್ಷಿಣ ಕನ್ನಡ- 2.69%
- ಉಡುಪಿ - 1.73%
- ಕೊಡಗು- 1.67%
- ಹಾಸನ - 1.61%
- ಮೈಸೂರು- 1.19%
- ಶಿವಮೊಗ್ಗ - 1.01%
ಶೇ.1 ರೊಳಗೆ - ಚಿಕ್ಕಮಗಳೂರು-0.91%
- ಉತ್ತರಕನ್ನಡ - 0.77%
- ತುಮಕೂರು - 0.65%
- ಬೆಂಗಳೂರು ಗ್ರಾಮಾಂತರ - 0.54%
- ದಾವಣಗೆರೆ -0.52%
- ಮಂಡ್ಯ- 0.51%
- ಚಿತ್ರದುರ್ಗ - 0.45%
- ಬೆಳಗಾವಿ- 0.45%
- ಕಲಬುರಗಿ -0.44%
- ಚಾಮರಾಜನಗರ- 0.40%
- ಕೋಲಾರ - 0.39%
- ಬೆಂಗಳೂರು ನಗರ - 0.29%
- ಧಾರವಾಡ - 0.17%
- ರಾಮನಗರ- 0.15%
- ಯಾದಗಿರಿ- 0.14%
- ಬೆಳಗಾವಿ- 0.12%
- ಕೊಪ್ಪಳ - 0.12%
- ವಿಜಯಪುರ- 0.12%
- ಗದಗ- 0.08%
- ಹಾವೇರಿ - 0.07%
- ಚಿಕ್ಬಳ್ಳಾಪುರ- 0.07%
- ಬೀದರ್ - 0.06%
- ಬಾಗಲಕೋಟೆ- 0.05%
- ರಾಯಚೂರು- 0.04%
24 ಜಿಲ್ಲೆಗಳಲ್ಲಿ ಪಾಸಿಟಿವಿ ದರ ಶೇಕಡಾ ಒಂದಕ್ಕಿಂತ ಕಡಿಮೆ ಇದ್ದರೆ, 6 ಜಿಲ್ಲೆಗಳಲ್ಲಿ ಶೇಕಡಾ 1 ರಿಂದ 3ರವರೆಗೆ ಪಾಸಿಟಿವಿಟಿ ದರವಿದೆ.