ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಗಳ ಪದಕಕ್ಕೆ ಕರ್ನಾಟಕದ 19 ಪೊಲೀಸರು ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಆರಕ್ಷಕರಿಗೆ ನಾಳೆ ಪದಕ ಪ್ರದಾನ ಮಾಡಲಾಗುತ್ತದೆ. ಒಟ್ಟು 946 ಪೊಲೀಸರು ಈ ಸಲದ ರಾಷ್ಟ್ರಪತಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ. ಈ ಪೈಕಿ 89 ಮಂದಿ ವಿಶಿಷ್ಟ ಸೇವಾ ಪದಕ ಗಳಿಸಿದ್ದಾರೆ.
ರಾಜ್ಯ ಬೇಹುಗಾರಿಕೆ ದಳ ಐ.ಜಿ.ಪಿ ಡಾ.ಎ.ಸುಬ್ರಮಣೇಶ್ವರರಾವ್ ಸೇರಿ ಕರ್ನಾಟಕದಿಂದ 19 ಪೊಲೀಸ್ ಅಧಿಕಾರಿಗಳಿಗೆ ಈ ವರ್ಷದ ಗಣರಾಜ್ಯೋತ್ಸವದ ಶೌರ್ಯ ಪದಕ ದೊರೆತಿದೆ. ಉಳಿದಂತೆ ಬಿ.ಎಸ್. ನೇಮಗೌಡ (ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಕಾರಿ), ಬಿ.ರಾಮಚಂದ್ರ (ಬೆಂಗಳೂರು ಸಿಐಡಿ ಡಿವೈಎಸ್‌ಪಿ), ಡಿ.ಅಶೋಕ (ಬೆಂಗಳೂರು ರೈಲ್ವೆ ಉಪವಿಭಾಗ ಡಿವೈಎಸ್‌ಪಿ), ಸಿ. ಬಾಲಕೃಷ್ಣ (ಬೆಂಗಳೂರು ಜಾಗೃತ ದಳ ಡಿವೈಎಸ್‌ಪಿ), ವಿ.ಕೆ.ವಾಸುದೇವ್ (ಬೆಂಗಳೂರು ಅಪರಾಧ ವಿಭಾಗ ಡಿವೈಎಸ್‌ಪಿ), ಬಿ.ಪುಟ್ಟಸ್ವಾಮಿ (ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್), ಎಸ್. ಬಾಲಚಂದ್ರ ನಾಯ್ಕ್ (ಚಿತ್ರದುರ್ಗ ನಗರ ಸರ್ಕಲ್ ಇನ್‌ಸ್ಪೆಕ್ಟರ್), ಪ್ರಕಾಶ್ (ಉಡುಪಿ ಜಿಲ್ಲೆಯ ಡಿ.ಸಿ.ಆರ್.ಬಿ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್), ಈಶ್ವರಯ್ಯ ಎಚ್ (ಬೆಂಗಳೂರು ಬೇಹುಗಾರಿಕೆ ದಳ ಎ.ಎಸ್.ಐ) ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದವರಾಗಿದ್ದಾರೆ.
ಎಂ.ವೆಂಕಟೇಶ್, ಮೋಹನರಾಜ ಕುರದಗಿ, ಸಿ.ವೆಂಕಟಸ್ವಾಮಿ (ಬೆಂಗಳೂರು ಕೆ.ಎಸ್.ಆರ್.ಪಿ), ಶಶಿಕುಮಾರ್ (ಬೆಂಗಳೂರು ಬೇಹುಗಾರಿಕೆ ದಳದ ಎ.ಆರ್.ಎಸ್.ಐ), ಕೆ.ಆರ್.ಜಿತೇಂದ್ರ ರೈ (ಕೊಡಗು ಜಿಲ್ಲೆಯ ಡಿ.ಎಆರ್.ನ ಎ.ಆರ್.ಎಸ್.ಐ), ಆರ್.ಲೋಕೇಶ್ (ಮೈಸೂರು ಜಿಲ್ಲೆಯ ಡಿ.ಎ.ಆರ್ ಎ.ಎಚ್.ಸಿ-51), ಉಸ್ಮಾನ್ ಸಾಬ್ (ತಿಪಟೂರು ಪೊಲೀಸ್ ಠಾಣೆಯ ಸಿ.ಎಚ್.ಸಿ), ಕೆ.ವಿ. ಸತೀಶ್ (ಬೆಂಗಳೂರು ಸಿ.ಐ.ಡಿ ಎಚ್.ಸಿ), ಎಸ್. ಪ್ರಕಾಶ್ (ಮಂಗಳೂರು ಕೆ.ಎಸ್.ಆರ್.ಪಿ) ರಾಷ್ಟ್ರಪತಿ ಪದಕಕ್ಕೆ ಪಾತ್ರರಾಗಿದ್ದಾರೆ.
ಓದಿ: ಆರೋಗ್ಯ ಸೇತು ಆ್ಯಪ್ನಲ್ಲಿ ಬಳಕೆದಾರರ ಮಾಹಿತಿ ಹಂಚಿಕೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ
ಅಗ್ನಿಶಾಮಕ ದಳ, ನಾಗರಿಕ ರಕ್ಷಣೆ ಹಾಗೂ ಹೋಂ ಗಾರ್ಡ್ ಸೇವೆಯಲ್ಲಿರುವ ಒಟ್ಟು 73 ಮಂದಿಗೂ ರಾಷ್ಟ್ರಪತಿ ಪದಕ ದೊರೆತಿದೆ. ಅಗ್ನಿಶಾಮಕ ದಳದ 8 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಪ್ರಕಟಗೊಂಡಿದೆ. 52 ಜೈಲು ಸಿಬ್ಬಂದಿಯೂ ರಾಷ್ಟ್ರಪತಿ ಪದಕ ಪಡೆದಿದ್ದಾರೆ.