ETV Bharat / state

ರಾಜ್ಯದಲ್ಲಿ ಇಂದು ಕೊರೊನಾ 144ಕ್ಕೆ ಏರಿಕೆ; ಈವರೆಗೆ 4 ಸಾವು,11 ಮಂದಿ‌ ಡಿಸ್ಚಾರ್ಜ್.. - ರಾಜ್ಯದಲ್ಲಿ ಹೆಚ್ಚಿದ ಸೋಂಕಿತರ ಸಂಖ್ಯೆ

ನಾಳೆಯಿಂದ ರಾಜ್ಯದ ಎಲ್ಲಾ ಖಾಸಗಿ ಕ್ಲಿನಿಕ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಅಲ್ಲದೇ ನಾನಾ ಆರೋಗ್ಯ ಸಮಸ್ಯೆಗಳನ್ನು ಜನ ಎದುರಿಸುತ್ತಿರಬಹುದು. ಹಾಗಾಗಿ ಖಾಸಗಿ ಕ್ಲಿನಿಕ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಕೋವಿಡ್-19
coronavirus
author img

By

Published : Apr 4, 2020, 7:36 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ವೈರಸ್​ಗೆ ಈವರೆಗೂ ನಾಲ್ವರು ಬಲಿಯಾಗಿದ್ದಾರೆ. ಕೊರೊನಾದಿಂದ 11 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಂದೇ ದಿನ ಮೈಸೂರಿನಲ್ಲಿ 7 ಕೊರೊನಾ ಪ್ರಕರಣ ಪತ್ತೆಯಾಗಿವೆ. ಇದರಲ್ಲಿ 6 ಸೋಂಕಿತರು ದೆಹಲಿಗೆ ಪ್ರಯಾಣ ಮಾಡಿದ್ದರು. ಮತ್ತೊಬ್ಬರಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ಪಾಸಿಟಿವ್​ ಬಂದಿದೆ.

ನಾಳೆಯಿಂದ ಖಾಸಗಿ ಕ್ಲಿನಿಕ್ ತೆರೆಯಲು ಅವಕಾಶ : ನಾಳೆಯಿಂದ ರಾಜ್ಯದ ಎಲ್ಲಾ ಖಾಸಗಿ ಕ್ಲಿನಿಕ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಅಲ್ಲದೇ ನಾನಾ ಆರೋಗ್ಯ ಸಮಸ್ಯೆಗಳನ್ನು ಜನ ಎದುರಿಸುತ್ತಿರಬಹುದು. ಹಾಗಾಗಿ ಖಾಸಗಿ ಕ್ಲಿನಿಕ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕರ್ನಾಟಕದಲ್ಲಿ N95 18.33 ಲಕ್ಷ ಮಾಸ್ಕ್‌ಗಳನ್ನು ಕೊಳ್ಳಲು ಆದೇಶ ಹೊರಡಿಸಲಾಗಿದೆ. 4.13 ಲಕ್ಷ ಮಾಸ್ಕ್​ಗಳನ್ನ ಈಗ ಪಡೆಯಲಾಗಿದೆ. ಈವರಗೆ ಕೋವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 106 ಕೋಟಿ ರೂಪಾಯಿ ನೆರವು ಬಂದಿದೆ. ಇವತ್ತು ಒಂದೇ ದಿನ 19,04,76,000 ರೂ. ದೇಣಿಗೆ ಸಂಗ್ರಹವಾಗಿದೆ. ಕೆಪಿಟಿಸಿಎಲ್ ನೌಕರರ ಎರಡು ದಿನದ ಸಂಬಳ ಒಟ್ಟು 18 ಕೋಟಿ ರೂ. ನೀಡಿದ್ದಾರೆ.

ಸೋಂಕಿತರ‌ ಟ್ರಾವೆಲ್ ಹಿಸ್ಟರಿ ಹೀಗಿದೆ :

*ರೋಗಿ-129*: ಬೆಂಗಳೂರಿನ 21 ವರ್ಷದ ಯುವಕನಲ್ಲಿ ಸೋಂಕು ಪತ್ತೆ.. ಕೇಸ್ 58ರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ. ಕೇಸ್ 58ರಿಂದ ಯುವಕನಿಗೆ ಕೊರೊನಾ ಸೋಂಕು

*ರೋಗಿ-130*: ಬೆಂಗಳೂರಿನ 57 ವರ್ಷದ ವ್ಯಕ್ತಿಗೆ ಸೋಂಕು ಪತ್ತೆ.. ಕೇಸ್ 58ರ ತಂದೆಯಾಗಿರುವ ವ್ಯಕ್ತಿ. ಕೇಸ್ 58ರಿಂದ ಅವರ ತಂದೆಗೂ ಸೋಂಕು. ಸದ್ಯ ಸೋಂಕಿತ ತಂದೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ.

*ರೋಗಿ- 132*: ಬೆಂಗಳೂರಿನ 78 ವರ್ಷದ ವೃದ್ಧನಿಗೆ ಸೋಂಕು.. ಮಾರ್ಚ್ 17ರಂದು ದುಬೈನಿಂದ ಭಾರತಕ್ಕೆ ಬಂದಿದ್ದ. ಸೋಂಕಿತನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ

*ರೋಗಿ-131*: ಬೆಂಗಳೂರಿನ 43 ವರ್ಷದ ವ್ಯಕ್ತಿಗೆ ಸೋಂಕು, ಕೇಸ್ 101ರ ಮಗನಲ್ಲಿ ಕೊರೊನಾ ಸೋಂಕು ಪತ್ತೆ. ಮಗನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ.

*ರೋಗಿ- 133*: ಕೇರಳ ಮೂಲದ 60 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆ.. ಜರ್ಮನಿಗೆ ತೆರಳಿದ್ದ ವ್ಯಕ್ತಿ, ಸದ್ಯ ಈತನಿಗೆ ಬೆಂಗಳೂರು ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ.

*ರೋಗಿ-134*: ಮೈಸೂರಿನ 38 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆ. ದೆಹಲಿಗೆ ತೆರಳಿದ್ದ ವ್ಯಕ್ತಿ, ದೆಹಲಿಯಿಂದ ಬಂದ ಬಳಿಕ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪಾಸಿಟಿವ್.. ವ್ಯಕ್ತಿಗೆ ಮೈಸೂರಿನಲ್ಲಿ ಚಿಕಿತ್ಸೆ..

*ರೋಗಿ- 135*: ಮೈಸೂರಿನ 19 ವರ್ಷದ ಯುವಕನಿಗೆ‌ ಕೊರೊನಾ ಪಾಸಿಟಿವ್. ದೆಹಲಿಗೆ ಪ್ರಯಾಣ ಮಾಡಿದ್ದ ಯುವಕ, ಸೋಂಕಿತನಿಗೆ ಮೈಸೂರಿನಲ್ಲಿ ಚಿಕಿತ್ಸೆ.

*ರೋಗಿ- 136* : ಮೈಸೂರು ನಿವಾಸಿಯಲ್ಲಿ ಕೊರೊನಾ ಸೋಂಕು ಪತ್ತೆ. 39 ವರ್ಷದ ವ್ಯಕ್ತಿಗೆ ತಗುಲಿರುವ ಕೊರೊನಾ ಸೋಂಕು ಮೈಸೂರಿನಲ್ಲಿ ಚಿಕಿತ್ಸೆ..

*ರೋಗಿ- 137* : 39 ವರ್ಷದ ಮೈಸೂರಿನ ವ್ಯಕ್ತಿಗೆ ಕೊರೊನಾ ಸೋಂಕು ಧೃಡ. ಈ ಸೋಂಕಿತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಯಾವ ಕೊರೊನಾ ಸೋಂಕಿತನ ಜೊತೆಗೂ ಸಂಪರ್ಕ ಇಲ್ಲ. ವ್ಯಕ್ತಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಆರೋಗ್ಯ ಅಧಿಕಾರಿಗಳು , ಸದ್ಯ ವ್ಯಕ್ತಿಗೆ ಮೈಸೂರಿನಲ್ಲಿ ಚಿಕಿತ್ಸೆ.

*ರೋಗಿ- 139* : ಮೈಸೂರಿನಲ್ಲಿ ಟ್ರಾವೆಲ್ ಹಿಸ್ಟರಿ ಇರದ ಮತ್ತೋರ್ವನಿಗೆ ಸೋಂಕು. 40 ವರ್ಷದ ವ್ಯಕ್ತಿಗೆ ತಗುಲಿರುವ ಕೊರೊನಾ ಸೋಂಕು. ಈ ವ್ಯಕ್ತಿ ಯಾವುದೇ ಸೋಂಕಿತನ ಜೊತೆ ಸಂಪರ್ಕ ಹೊಂದಿಲ್ಲ.. ವ್ಯಕ್ತಿಯ ವಿವರ ಕಲೆ ಹಾಕುತ್ತಿರುವ ವೈದ್ಯರು, ಸೋಂಕಿತನಿಗೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ.

*ರೋಗಿ- 138*: ದೆಹಲಿಗೆ ಪ್ರಯಾಣ ಮಾಡಿದ್ದ ವ್ಯಕ್ತಿಗೆ ಸೋಂಕು ಪತ್ತೆ. ಮೈಸೂರಿನ ನಿವಾಸಿಯಾದ 54 ವರ್ಷದ ವ್ಯಕ್ತಿಯಲ್ಲಿ ಸೋಂಕು. ವ್ಯಕ್ತಿಗೆ ಮೈಸೂರಿನಲ್ಲಿ ಚಿಕಿತ್ಸೆ

*ರೋಗಿ-140*: ಮೈಸೂರಿನ 34 ವರ್ಷದ ಪುರುಷನಲ್ಲಿ ಸೋಂಕು ಪತ್ತೆ. ಕೇಸ್ 109ರ ಜೊತೆ ಸಂಪರ್ಕದಲ್ಲಿದ್ದ ಸೋಂಕಿತ.. ವ್ಯಕ್ತಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ

*ರೋಗಿ- 141* : ಬಳ್ಳಾರಿಯಲ್ಲಿ 47 ವರ್ಷದ ಮಹಿಳೆಗೆ ಸೋಂಕು ಪತ್ತೆ.. ಮಹಿಳೆಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ..‌ ಯಾವ ಸೋಂಕಿತರ ಜೊತೆಗೂ ಸಂಪರ್ಕ ಹೊಂದಿರದ ಮಹಿಳೆ. ಆಕೆಯ ಮಾಹಿತಿ ಪಡೆಯುತ್ತಿರುವ ವೈದ್ಯರು, ಸೋಂಕಿತೆಗೆ ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ.

*ರೋಗಿ-142*: ಉಡುಪಿಯ 63 ವರ್ಷದ ಮಹಿಳೆಗೆ ಕೊರೊನಾ ಸೋಂಕು. ದುಬೈಗೆ ತೆರಳಿದ್ದ ಮಹಿಳೆ ಮಾರ್ಚ್ 22ರಂದು ಭಾರತಕ್ಕೆ ಮರಳಿದ್ದರು. ಸದ್ಯ ಮಹಿಳೆಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ.

*ರೋಗಿ-143*: ದಕ್ಷಿಣ ಕನ್ನಡದ 43 ವರ್ಷದ‌ ಪುರುಷನಿಗೆ ಸೋಂಕು,ದೆಹಲಿಯ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿ. ಮಾರ್ಚ್ 13 ರಿಂದ 18ರವರೆಗೂ ದೆಹಲಿಯಲ್ಲಿದ್ದ ವ್ಯಕ್ತಿ, ಸದ್ಯ ಸೋಂಕಿತನಿಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ

*ರೋಗಿ-144* : ದಕ್ಷಿಣ ಕನ್ನಡದ 52 ವರ್ಷದ ಪುರುಷನಿಗೆ ಸೋಂಕು.. ದೆಹಲಿಯ ಪ್ರಾರ್ಥನೆಗೆ ತೆರಳಿದ್ದ ಸೋಂಕಿತ, ಮಾರ್ಚ್ 13-18 ರವೆಗೂ ದೆಹಲಿಯಲ್ಲಿದ್ದ ವ್ಯಕ್ತಿ.. ವ್ಯಕ್ತಿ ಬಂದ ಬಳಿಕ ಕೊರೋನಾ ಸೋಂಕು ಪತ್ತೆ. ಈತನಿಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ

ರಾಜ್ಯದಲ್ಲಿ ಈವರೆಗೂ 144 ಪ್ರಕರಣ ಪತ್ತೆ :

ಬೆಂಗಳೂರು - 55 ಪ್ರಕರಣ
ಬೆಂಗಳೂರು ಗ್ರಾಮಾಂತರ - 01 ಪ್ರಕರಣ
ಮೈಸೂರು - 28 ಪ್ರಕರಣ
ಬೀದರ್ - 10 ಪ್ರಕರಣ
ಚಿಕ್ಕಬಳ್ಳಾಪುರ - 7 ಪ್ರಕರಣ
ದಕ್ಷಿಣ ಕನ್ನಡ - 12 ಪ್ರಕರಣ
ಉತ್ತರ ಕನ್ನಡ - 8 ಪ್ರಕರಣ
ಕಲಬುರಗಿ - 5 ಪ್ರಕರಣ
ದಾವಣಗೆರೆ - 3 ಪ್ರಕರಣ
ಉಡುಪಿ - 3 ಪ್ರಕರಣ
ಬೆಳಗಾವಿ - 3 ಪ್ರಕರಣ
ಬಳ್ಳಾರಿ - 5 ಪ್ರಕರಣ
ಕೊಡಗು - 1 ಪ್ರಕರಣ
ಧಾರವಾಡ - 1 ಪ್ರಕರಣ
ತುಮಕೂರು - 1 ಪ್ರಕರಣ
ಬಾಗಲಕೋಟೆ - 1 ಪ್ರಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.