ಬೆಂಗಳೂರು: ಕೊರೊನಾ ಎಲ್ಲಾ ಕಡೆ ಭಯವನ್ನು ಉಂಟುಮಾಡಿದೆ. ಈ ಹಿನ್ನೆಲೆ ಪೊಲೀಸರು ಎಲ್ಲಾ ರೀತಿಯ ಮುನ್ನೆಚರಿಕೆ ಕ್ರಮಗಳನ್ನು ಅಳವಡಿಸಿಕೊಂಡು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಗೆ ಪ್ರತಿ ದಿನವು ನೂರಾರು ಮಂದಿ ದೂರು ನೀಡಲು ಬರುತ್ತಾರೆ. ಈ ಹಿನ್ನೆಲೆ ಆಯುಕ್ತರ ಕಚೇರಿ ಸೇರಿದಂತೆ ನಗರದ ಎಲ್ಲಾ ಠಾಣೆಗಳಲ್ಲಿನ ಸಿಬ್ಬಂದಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸಲು ಸೂಚನೆ ನೀಡಲಾಗಿದೆ.
ಇನ್ನು ಆಗ್ನೇಯ ಹಾಗೂ ಪೂರ್ವ ವಲಯ, ವೈಟ್ ಫೀಲ್ಡ್ ಪೊಲೀಸ್ ಠಾಣೆಗಳ ಸಿಬ್ಬಂದಿ ಸ್ಯಾನಿಟೈಸರ್ನ್ನು ಎಲ್ಲೇ ಹೋದರೂ ಜೊತೆಯಲ್ಲೇ ಕೊಂಡೋಯ್ಯುತ್ತಿದ್ದಾರೆ.