ಬೆಂಗಳೂರು: ಸಿಎಂ ನಿವಾಸದ ಬಳಿ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳ ಸವಾರರಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದು, ನಿಯಮ ಪಾಲಿಸುವಂತೆ ತಿಳಿಹೇಳಿ ಕಳಿಸಿಕೊಟ್ಟಿದ್ದಾರೆ.
ಕೆಲ ದ್ವಿಚಕ್ರ ವಾಹನ ಸವಾರರು ಕುಮಾರ ಪಾರ್ಕ್ ರಸ್ತೆಯಲ್ಲಿ ಆಗಮಿಸುತ್ತಿದ್ದರು. ಅವರಲ್ಲಿ ಕೆಲವರು ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಪೂರ್ವ ವಲಯ ಸಂಚಾರ ವಿಭಾಗದ ಡಿಸಿಪಿ ನಾರಾಯಣ್ ವಾಕಿಟಾಕಿ ಮೂಲಕ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಎಂ ನಿವಾಸದ ಬಳಿ ಬೈಕ್ ಸವಾರರನ್ನು ತಡೆದ ಪೊಲೀಸರು, ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡದಂತೆ ಸವಾರರಿಗೆ ಖಡಕ್ ವಾರ್ನಿಂಗ್ ಕೊಟ್ಟು ಕಳಿಸಿದ್ದಾರೆ.
ಇದೇ ವೇಳೆ ಕಾರೊಂದರಲ್ಲಿ ಯುವಕರು ಜೋರಾಗಿ ಸಂಗೀತ ಹಾಕಿಕೊಂಡು ಬರುತಿದ್ದರು. ಅವರನ್ನೂ ತಡೆದ ಪೊಲೀಸರು ಸರಿಯಾಗಿ ಕ್ಲಾಸ್ ತೆಗೆದುಕೊಂಡು ಪುನರಾವರ್ತಿಸದಂತೆ ಹೇಳಿ ಕಳಿಸಿದರು.