ETV Bharat / state

ಲಾರಾ ಮೇಲೆ ಕಾರು ಹತ್ತಿಸಿದ‌ ಪ್ರಕರಣ : ಆರೋಪಿ ಆದಿಯಿಂದ ₹10 ಲಕ್ಷ ಬಾಂಡ್ ಬರೆಯಿಸಿ ಎಚ್ಚರಿಕೆ ನೀಡಿದ ಪೊಲೀಸರು - ಆರೋಪಿ ಆದಿಕೇಶವನಿಗೆ ಎಚ್ಚರಿಕೆ ನೀಡಿದ ಪೊಲೀಸ್​

ಭವಿಷ್ಯದಲ್ಲಿ ಪ್ರಾಣಿಗಳ ಮೇಲೆ‌ ಮೃಗೀಯ ವರ್ತನೆ ತೋರುವುದು ಅಥವಾ ಪ್ರಾಣಿಹಿಂಸೆ ಮಾಡಿದರೆ ಬಂಧಿಸಿ ಜೈಲಿಗಟ್ಟುವುದಾಗಿ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಖಡಕ್ ಎಚ್ಚರಿಕೆ ನೀಡಿದ್ದಾರೆ..

Police warn street dog lara death accused aadi
ಲಾರಾ ಮೇಲೆ ಕಾರು ಹತ್ತಿಸಿದ‌ ಪ್ರಕರಣದ ಆರೋಪಿಗೆ ಬಾಂಡ್ ಬರೆಯಿಸಿ ಎಚ್ಚರಿಕೆ ನೀಡಿದ ಪೊಲೀಸರು
author img

By

Published : Feb 7, 2022, 10:49 PM IST

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಬೀದಿನಾಯಿ ಮೇಲೆ ಕಾರು ಹತ್ತಿಸಿದ ಪ್ರಕರಣ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಅಪಘಾತದಲ್ಲಿ ಮೃತಪಟ್ಟ ಲಾರಾ ಸಾವಿಗೆ ನಟಿ ರಮ್ಯಾ ಸೇರಿದಂತೆ ಶ್ವಾನಪ್ರಿಯರು ಕಣ್ಣೀರಿಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಘಟನೆಗೆ ಕಾರಣವಾಗಿದ್ದ ದಿ‌ವಂಗತ ಆದಕೇಶವುಲು ನಾಯ್ಡು ಅವರ ಮೊಮ್ಮಗ ಆದಿಕೇಶವನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದರು. ಬಳಿಕ ಠಾಣಾ ಜಾಮೀನಿನ ಮೇರೆಗೆ ಆತನನನ್ನು ರಿಲೀಸ್ ಮಾಡಲಾಗಿತ್ತು. ಇದಕ್ಕೂ ಮುನ್ನ ಆತನಿಂದ 10 ಲಕ್ಷ ರೂ. ಬಾಂಡ್ ಬರೆಯಿಸಿ ಕಳುಹಿಸಿದ್ದಾರೆ.

ಭವಿಷ್ಯದಲ್ಲಿ ಪ್ರಾಣಿಗಳ ಮೇಲೆ‌ ಮೃಗೀಯ ವರ್ತನೆ ತೋರುವುದು ಅಥವಾ ಪ್ರಾಣಿಹಿಂಸೆ ಮಾಡಿದರೆ ಬಂಧಿಸಿ ಜೈಲಿಗಟ್ಟುವುದಾಗಿ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಕರಣ ಹಿನ್ನೆಲೆ : ಮೇ 26ರಂದು ಜಯನಗರದ ಒಂದನೇ‌ ಬ್ಲಾಕ್​​ನ 10ನೇ ಬಿ ಮುಖ್ಯರಸ್ತೆಯ ಮನೆ ಮುಂಭಾಗದಲ್ಲಿ ಆರೋಪಿ ಆಡಿ ಕಾರಿನಲ್ಲಿ ಉದ್ದೇಶಪೂರ್ವಕವಾಗಿ ಲಾರಾ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದನು. ಘಟನೆ ಬಳಿಕ ಎರಡು ದಿನ ನಾಯಿ ಲಾರಾ ನಾಪತ್ತೆಯಾಗಿತ್ತು.‌

ಇದಾದ ಬಳಿಕ ಜನವರಿ.28 ರಂದು ಲಾರಾ ಮೇಲೆ ಕಾರು ಹತ್ತಿಸಿದ್ದ ಪ್ರಕರಣ ಬಯಲಿಗೆ ಬಂದಿತ್ತು. ಮನೆಯ ಮುಂದಿನ ಸಿಸಿಟಿವಿಯಲ್ಲಿ ಅಪಘಾತ ದೃಶ್ಯ ಸೆರೆಯಾಗಿತ್ತು. ಜನವರಿ.29 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಬದ್ರಿ ಪ್ರಸಾದ್ ಎಂಬುವವರು ದೂರು ನೀಡಿದ್ದರು.

ಜನವರಿ 31ರ ಬೆಳ್ಳಗ್ಗೆ ಘಟನೆ ನಡೆದ ಪಕ್ಕದ ರಸ್ತೆಯ ಚರಂಡಿಯಲ್ಲಿ ಲಾರಾ ಮೃತದೇಹ ಪತ್ತೆಯಾಗಿತ್ತು. ಫೆಬ್ರುವರಿ.01ರಂದು ಸುಮ್ಮನಹಳ್ಳಿ ಪ್ರಾಣಿ ಸ್ಮಶಾನದಲ್ಲಿ ಲಾರಾ ಅಂತಿಮ ಸಂಸ್ಕಾರ ನಡೆಯಿತು‌. ನಟಿ ರಮ್ಯಾ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು‌.

ಇದನ್ನೂ ಓದಿ: ಬೀದಿನಾಯಿ ಮೇಲೆ ಕಾರು ಹರಿಸಿ ಕೊಂದ ಪಾಪಿ: 'ಲಾರಾ' ಅಂತ್ಯಕ್ರಿಯೆಗೆ ಎಲ್ಲರೂ ಬರುವಂತೆ ನಟಿ ರಮ್ಯಾ ಕರೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.