ETV Bharat / state

ಬೆಂಗಳೂರು: ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿ ಕಾಲಿಗೆ ಗುಂಡೇಟು

ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಕಾಲಿಗೆ ಬನ್ನೇರುಘಟ್ಟ ಪೊಲೀಸರು ಗುಂಡೇಟು ನೀಡಿದ್ದಾರೆ.

police shot in the leg of accused
ಆರೋಪಿ ಕಾಲಿಗೆ ಗುಂಡೇಟು
author img

By

Published : Aug 18, 2023, 9:58 AM IST

ಬೆಂಗಳೂರು : ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ‌ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ಏಕಾಏಕಿ‌ ಪೊಲೀಸರ ಮೇಲೆರಗಿ ಪರಾರಿಯಾಗಲು ಯತ್ನಿಸಿದಾಗ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ. ಬ್ಯಾಟರಾಯನದೊಡ್ಡಿಯ ಆರೋಪಿ ಸೋಮಶೇಖರ್ ಎಂಬಾತನನ್ನು ಬೆಳಗ್ಗೆ ಸ್ಥಳ ಮಹಜರಿಗೆ ಕರೆದೊಯ್ದಾಗ ಈ ಘಟನೆ ಸಂಭವಿಸಿದೆ.

ಪೊಲೀಸ್ ಸಿಬ್ಬಂದಿ ಮಾದಪ್ಪ ಎಂಬುವರ ಮೇಲೆ ಡ್ರ್ಯಾಗರ್​ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆರೋಪಿಯನ್ನು ಉಳಿದ ಪೊಲೀಸರು ಸುತ್ತುವರೆದ‌ರು. ಬಳಿಕ, ಅವರ ಮೇಲೂ ಹಲ್ಲೆಗೆ ಮುಂದಾದಾಗ ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್, ಪಿಸ್ತೂಲ್​ನಿಂದ ಸೋಮನ ಎಡ ಗಾಲಿಗೆ ಗುಂಡು ಹಾರಿಸಿದರು. ಗುಂಡೇಟು ತಿಂದ ಆರೋಪಿಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನಿಸಲಾಗಿದೆ.

ಏನಿದು ಪ್ರಕರಣ? : ಬ್ಯಾಟರಾಯನದೊಡ್ಡಿಯ ಮನೆಯಿಂದ ಹೊರಹೋಗಿದ್ದ 38 ವರ್ಷದ ಮಹಿಳೆಯನ್ನು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಬಳಿಕ, ಮಹಿಳೆಯ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು. ಪ್ರಕರಣ ಸಂಬಂಧ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಘಟನಾ ಸ್ಥಳಕ್ಕೆ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್​ಪಿ ಪುರುಷೋತ್ತಮ್, ಡಿವೈಎಸ್​ಪಿ ಲಕ್ಷ್ಮಿನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಮೊರೆತ ; ದರೋಡೆಕೋರನಿಗೆ ಗುಂಡೇಟು

ದರೋಡೆಕೋರನಿಗೆ ಗುಂಡೇಟು : ಬೆಂಗಳೂರಿನ ಸದಾಶಿವನಗರದ ಅರಮನೆ ಬಳಿ ಇರುವ ನಿರ್ಜನ ಪ್ರದೇಶದಲ್ಲಿ ದರೋಡೆಕೋರ ಯಾಸರ್ (26) ಎಂಬಾತನ ಕಾಲಿಗೆ ಶೇಷಾದ್ರಿಪುರಂ ಪೊಲೀಸರು ಗುಂಡು ಹಾರಿಸಿ ಕಳೆದ ಜುಲೈ ತಿಂಗಳಲ್ಲಿ ಬಂಧಿಸಿದ್ದರು. ಸುಲ್ತಾನ್ ಪಾಳ್ಯದ ಭುವನೇಶ್ವರಿ ನಗರದ ನಿವಾಸಿಯಾಗಿರುವ ಈತನ ವಿರುದ್ಧ ಸುಲಿಗೆ, ರಾಬರಿ ಸೇರಿದಂತೆ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಆರೋಪಿಯು ಅಶೋಕ ನಗರ, ವೈಯಾಲಿಕಾವಲ್, ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಸಾರ್ವಜನಿಕರಿಗೆ ಚಾಕು ತೋರಿಸಿ ಮೊಬೈಲ್ ಫೋನ್, ಹಣ ದೋಚುತ್ತಿದ್ದ. ಬೆಳಗಿನ ಜಾವ ಮೂರರಿಂದ ಆರರವೆಗೂ ಅಲರ್ಟ್ ಆಗಿ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ : Kalaburagi crime : ಹೆಡ್ ಕಾನ್​ಸ್ಟೇಬಲ್​ ಹತ್ಯೆ ಪ್ರಕರಣ.. ಪ್ರಮುಖ‌ ಆರೋಪಿ ಕಾಲಿಗೆ‌ ಪೊಲೀಸರಿಂದ ಗುಂಡೇಟು

ಹಾಗೆಯೇ, ಕಳೆದ ಜೂನ್​ 5 ರಂದು ಆಯನೂರಿನ ಬಾರ್ ಕ್ಯಾಷಿಯರ್ ಹತ್ಯೆ ಕೇಸ್‌ನ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಒಬ್ಬ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿತ್ತು. ಸತೀಶ್​ ಗುಂಡೇಟು ತಿಂದ ಆರೋಪಿ. ಬಳಿಕ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ : ಬಾರ್ ಕ್ಯಾಷಿಯರ್ ಕೊಲೆ ಪ್ರಕರಣ : ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.