ಬೆಂಗಳೂರು: ಮಾದಕ ವಸ್ತುಗಳ ಮಾರಾಟದ ಹಾವಳಿ ನಗರದಲ್ಲಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಸೂಚನೆ ಮೇರೆಗೆ ಪಶ್ಚಿಮ, ಪೂರ್ವ ,ದಕ್ಷಿಣಾ, ಉತ್ತರ ವಿಭಾಗ ಪೊಲೀಸರು ದಾಳಿ ಆರೋಪಿಗಳನ್ನು ಬಂಧಿಸಿದ್ದು,ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
![Police seized KG of marijuana](https://etvbharatimages.akamaized.net/etvbharat/prod-images/6395720_thumb.jpg)
ಡ್ರಗ್ ಪೆಡ್ಲರ್ ಹಾವಳಿಯನ್ನು ನಿಯಂತ್ರಿಸಲು ವಿಶೇಷ ಕಾರ್ಯಚರಣೆ ನಡೆಸಿದ ಪೊಲೀಸರು, ರಾಮಮೂರ್ತಿ ನಗರ, ಕೆ.ಜಿ ಹಳ್ಳಿ, ಬಾಣಸವಾಡಿ, ಠಾಣಾ ವ್ಯಾಪ್ತಿಯ ಆರೋಪಿಗಳಾದ ರಮೇಶ್,ರವಿ ಸಂತೋಷ್ ಹಾಗೂ ಆಂಧ್ರಪ್ರದೇಶದ ಕೆಲ ಆರೋಪಿಗಳು ಸೇರಿದಂತೆ 25 ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳಿಂದ ವಿಶೇಷ ಕಾರ್ಯಚಾರಣೆ ನಡೆಸಿದ್ದ ಪೊಲೀಸರು, ಆರೋಪಿಗಳಿಂದ ಕೆಜಿ ಗಟ್ಟಲೆ ಗಾಂಜಾ ವಶಪಡಿಸಸಿದ್ದಾರೆ. ಈ ಆರೋಪಿಗಳು ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳಿಗೆ ಗಾಂಜಾ ಮಾರಟ ಮಾಡುತ್ತಿದ್ದು, ಪ್ರತಿ ಠಾಣೆಗಳಲ್ಲಿ ಈ ಕಾರ್ಯಚರಣೆ ಮುಂದುವರೆದಿದೆ.