ಬೆಂಗಳೂರು: ವಿಜಯಪುರ ಮೂಲದ ಪೊಲೀಸ್ ಪೇದೆಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಟ್ರ್ಯಾಪ್ ಮಾದರಿಯಲ್ಲಿ ಬೆದರಿಸಿ ಸುಲಿಗೆಗೆ ಯತ್ನ ಮಾಡಿದ ಆರೋಪಿಗಳನ್ನ ಕಾಟನ್ ಪೇಟೆ ಪೊಲೀಸರು ಇಬ್ಬರು ಆರೋಪಿಗಳ ಬಂಧನ ಮಾಡಿದ್ದಾರೆ.
ಆರೋಪಿಗಳಾದ ಓರ್ವ ಯುವತಿ ಹಾಗೂ ಆಕೆಯ ಪ್ರಿಯಕರ ಸುನಿಲ್ ಬಂಧಿತ ಆರೋಪಿಗಳು. ಆರೋಪಿ ಯುವತಿ ಕಳೆದ ಆರು ತಿಂಗಳ ಹಿಂದೆ ವಿಜಯಪುರ ಮೂಲದ ಪೇದೆ ಮಹಾದೇವ್ಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದಳು. ಆದ್ರೆ, ಈಕೆ ಹಣದ ಆಸೆಗಾಗಿ ಮಹಾದೇವ್ನನ್ನ ಪ್ರೀತಿಸುವ ನಾಟಕವಾಡಿ ಪರಸ್ಪರ ಒಪ್ಪಿ ಲೈಂಗಿಕ ಸಂಬಂಧ ಸಹ ಹೊಂದಿದ್ದರು.
ಆದರೆ, ಆರೋಪಿ ಯುವತಿ, ಸುನಿಲ್ ಎಂಬ ಮತ್ತೊಬ್ಬ ಯುವಕನೊಂದಿಗೂ ಕೂಡ ಸಂಬಂಧ ಹೊಂದಿದ್ದು, ಆತನನ್ನು ಪ್ರಾಮಾಣಿಕವಾಗಿ ಲವ್ ಮಾಡುತ್ತಿದ್ದಳು ಎನ್ನಲಾಗಿದೆ. ಆದರೆ ಪೇದೆ ಮಹಾದೇವ್ನಿಂದ ಹಣ ಪಡೆದು ಮಜಾ ಮಾಡುತ್ತಿದ್ದಳು ಎನ್ನಲಾಗಿದೆ.
ಇತ್ತೀಚೆಗೆ ಯುವತಿ ಮಹಾದೇವನನ್ನು ವಿಜಯಪುರದಿಂದ ಬೆಂಗಳೂರಿಗೆ ಕರೆಸಿದ್ದಳು. ಈ ವೇಳೆ ಮಹಾದೇವ್ ಮೈಸೂರು ರೋಡ್ನ ಸ್ನೇಹಿತನ ಪೊಲೀಸ್ ಕ್ವಾಟ್ರಸ್ನಲ್ಲಿ ಯುವತಿಯನ್ನ ಭೇಟಿಯಾಗಿದ್ದ. ಈ ವೇಳೆ ಒಂದು ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಮಹಾದೇವ್ ಕೊಡಲು ಆಗುವುದಿಲ್ಲ ಎಂದಿದ್ದಾನೆ. ಆಗ ಮಹಾದೇವ್ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾನೆ ಎಂದು ಪ್ರಿಯಕರ ಸುನಿಲ್ಗೆ ಸಂದೇಶ ರವಾನಿಸಿ ಲೊಕೇಶನ್ ಸಹ ಶೇರ್ ಮಾಡಿದ್ದಳು.
ಪ್ರಿಯಕರ ಕಾಟನ್ ಪೇಟೆ ಪೊಲೀಸರೊಂದಿಗೆ ಅವರಿದ್ದ ರೂಮ್ಗೆ ಬಂದಾಗ ಇಬ್ರು ನಗ್ನವಾಗಿ ಸಿಕ್ಕಿಬಿದ್ದಿದ್ದರು. ಕಾಟನ್ ಪೇಟೆ ಠಾಣೆಗೆ ಕರೆತಂದಾಗ ಯುವತಿ ಹಾಗೂ ಸುನಿಲ್ ದುಡ್ಡು ಮಾಡುವ ಉದ್ದೇಶದಿಂದ ಪೇದೆ ಮಹಾದೇವ್ಗೆ ವಂಚನೆ ಮಾಡಿರುವ ವಿಚಾರ ಬಯಲಾಗಿದೆ. ಮತ್ತೊಂದೆಡೆ ಕಾಟನ್ ಪೇಟೆ ಪೊಲಿಸರು ಪೇದೆ ಮಹಾದೇವ್ಗೆ ಎಚ್ಚರಿಕೆ ನೀಡಿದ್ದಾರೆ.