ETV Bharat / state

ದಂಡ ಕಟ್ಟುವ ವಿಚಾರಕ್ಕೆ ಟ್ರಾಫಿಕ್‌ ASIಗೆ ಆವಾಜ್ ಹಾಕಿದ ಇನ್​ಸ್ಪೆಕ್ಟರ್​: ಆಡಿಯೋ ವೈರಲ್

ವಾಹನ ಸವಾರರೊಬ್ಬರಿಗೆ ದಂಡ​ ಹಾಕಿದ ಎಎಸ್​ಐಗೆ ಇನ್​ಸ್ಪೆಕ್ಟರ್​​ ಧಮ್ಕಿ​ ಹಾಕಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

ಆಡಿಯೋ ವೈರಲ್
ಆಡಿಯೋ ವೈರಲ್
author img

By

Published : Oct 28, 2022, 3:40 PM IST

Updated : Oct 28, 2022, 4:52 PM IST

ಬೆಂಗಳೂರು: ವಾಹನ ಸವಾರರೊಬ್ಬರ ವಾಹನ ತಡೆದು ದಂಡ ಹಾಕಲು ಮುಂದಾಗಿದ್ದಕ್ಕೆ ಇನ್ಸ್​ಪೆಕ್ಟರ್​ವೊಬ್ಬರು ಎಎಸ್​ಐಗೆ ಆವಾಜ್ ಹಾಕಿದ ಆಡಿಯೋ ವೈರಲ್ ಆಗಿದೆ. ಟ್ರಾಫಿಕ್ ಎಎಸ್ಐ ವೆಂಕಟೇಶ್ ಹಾಗೂ ಏರ್​ಪೋರ್ಟ್ ಇನ್ಸ್​ಪೆಕ್ಟರ್ ಮುತ್ತುರಾಜ ಮಧ್ಯೆ ಫೋನ್​ನಲ್ಲಿ ವಾಗ್ವಾದ ಉಂಟಾಗಿದೆ.

41 ಸಾವಿರ ರೂ ದಂಡ ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರನನ್ನು ಟ್ರಾಫಿಕ್ ಎಎಸ್ಐ ವೆಂಕಟೇಶ್ ಎಂಬುವರು ತಡೆದು ದಂಡ ಹಾಕಲು ಮುಂದಾಗಿದ್ದರು. ಆಗ ಏರ್‌ಪೋರ್ಟ್ ಇನ್​​ಸ್ಪೆಕ್ಟರ್​​ ಮುತ್ತುರಾಜು ಅವರು ಎಎಸ್​ಐಗೆ ಫೋನ್ ಮಾಡಿ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.

ಫೈನ್ ಕಟ್ಟುವ ವಿಚಾರಕ್ಕೆ ASI ಗೆ ಅವಾಜ್ ಹಾಕಿದ ಇನ್​ಸ್ಪೆಕ್ಟರ್​

ನೀನು ಅಷ್ಟು ದೊಡ್ಡ ಮನುಷ್ಯನಾ?. ನಾನೇನು ಅಂತಾ ತೋರಿಸ್ತೀನೆಂದು ಇನ್ಸ್​ಪೆಕ್ಟರ್ ಗರಂ ಆದರು. ಆಗ ಎಎಸ್​ಐ ಪ್ರತ್ಯುತ್ತರ ನೀಡಿ, ನೀವೇನ್ ತೋರಿಸ್ತೀರಾ, ತೋರ್ಸಿ ಸರ್. 41 ಸಾವಿರ ಗಾಡಿ ಫೈನ್ ಇದೆ ಎಂದಿದ್ದಾರೆ. ಹೀಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿರುವುದು ಆಡಿಯೋದಲ್ಲಿದೆ.

ಇದನ್ನೂ ಓದಿ: ಬೈಕ್​ ತಡೆದಿದ್ದಕ್ಕೆ ಪೊಲೀಸ್​ ಕಾನ್ಸ್​ಟೇಬಲ್​​​​​​ಗೆ ಥಳಿಸಿದ ಯುವಕರು.. ವಿಡಿಯೋ

Last Updated : Oct 28, 2022, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.