ETV Bharat / state

ಹಂತಕರ​ ಸ್ಕೆಚ್​.. ಕಚೇರಿಯ ಸಿಸಿಟಿವಿ ಮೇಲಕ್ಕೆ ತಿರುಗಿಸಿ ಮಾಜಿ ಕಾರ್ಪೊರೇಟರ್ ಹತ್ಯೆಗೆ ಫಿಕ್ಸ್​ ಆಗಿತ್ತಾ ಮುಹೂರ್ತ!? - ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ ಪ್ರಕರಣ,

ಕಚೇರಿ ಬಳಿ ಅಳವಡಿಸಿದ್ದ ಸಿಸಿಟಿವಿ ಮೇಲಕ್ಕೆ ತಿರುಗಿಸಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್​ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ದುಷ್ಕೃತ್ಯಕ್ಕೂ ಮುನ್ನ ಹಂತಕರು ಭಾರಿ ಸಂಚನ್ನು ರೂಪಿಸಿದ್ದರು ಎಂಬುದು ತಿಳಿದುಬಂದಿದೆ.

Former corporator Rekha Kadiresh murder, Police inquiry held on Former corporator Rekha Kadiresh murder, Former corporator Rekha Kadiresh murder news, ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ, ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ ತನಿಖೆ ಕೈಗೊಂಡ ಪೊಲೀಸರು, ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ ಸುದ್ದಿ, ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ ಪ್ರಕರಣ, ಕಚೇರಿ ಸಿಸಿಟಿವಿ ಮೇಲಕ್ಕೆ ತಿರುಗಿಸಿ ಮಾಜಿ ಕಾರ್ಪೋರೇಟರ್ ಹತ್ಯೆ,
ಕಚೇರಿ ಸಿಸಿಟಿವಿ ಮೇಲಕ್ಕೆ ತಿರುಗಿಸಿ ಮಾಜಿ ಕಾರ್ಪೋರೇಟರ್ ಹತ್ಯೆ
author img

By

Published : Jun 24, 2021, 1:30 PM IST

ಬೆಂಗಳೂರು: ಕೊರೊನಾ ಹಿನ್ನೆಲೆ ತಮ್ಮ ನಿವಾಸದ ಬಳಿಯ ಕಚೇರಿ ಮುಂದೆ ಅನ್ನದಾನ ಮಾಡುತ್ತಿದ್ದ ಚಲವಾದಿಪಾಳ್ಯ ವಾರ್ಡ್ ಮಾಜಿ ಮಹಿಳಾ ಕಾರ್ಪೊರೇಟರ್ ಮೇಲೆ ಏಕಾಏಕಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ರೇಖಾ ಕದಿರೇಶ್ ಹಲ್ಲೆಗೆ ಒಳಗಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಕಾಟನ್ ಪೇಟೆ ಪೊಲೀಸರು ತಿಳಿಸಿದ್ದಾರೆ.

ಕಚೇರಿ ಸಿಸಿಟಿವಿ ಮೇಲಕ್ಕೆ ತಿರುಗಿಸಿ ಮಾಜಿ ಕಾರ್ಪೋರೇಟರ್ ಹತ್ಯೆ

ನಡೆದಿದ್ದೇನು?: ಮನೆಗೆ ಹೊಂದಿಕೊಂಡಂತಿರುವ ತಮ್ಮ ಕಚೇರಿ ಬಳಿ ಆಹಾರ ಪೊಟ್ಟಣ ಹಂಚುವಾಗ ಇಬ್ಬರು ದುಷ್ಕರ್ಮಿಗಳು ಏಕಾಏಕಿ‌ ಮಾರಕಾಸ್ತ್ರಗಳಿಂದ ಕುತ್ತಿಗೆ ಹಾಗೂ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ರೇಖಾರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಬಳಿಕ ಈ ಮಾಹಿತಿಯನ್ನು ಕಾಟನ್ ಪೇಟೆ ಪೊಲೀಸರಿಗೆ ತಿಳಿಸಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಎಫ್​ಎಸ್ಎಲ್ ತಂಡ ಸ್ಥಳದಲ್ಲಿ ಬೀಡುಬಿಟ್ಟಿದೆ.

ಕೊಲೆಗೆ ಕಾರಣವೇನು ?: 2018 ರಲ್ಲಿ‌ ಕಾರ್ಪೊರೇಟರ್ ಆಗಿದ್ದ ಕದಿರೇಶ್ ಎಂಬುವರನ್ನು ನಡುರಸ್ತೆಯಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಅದಾದ ಮೂರು ವರ್ಷದ ಬಳಿಕ ರೇಖಾ ಅವರನ್ನು ಕೊಲೆ ಮಾಡಿದ್ದಾರೆ. ರಾಜಕೀಯ ಹಾಗೂ ಕೌಟುಂಬಿಕ ಕಲಹ ಈ ಘಟನೆಗೆ ಕಾರಣವಾಗಿದೆ ಎನ್ನಲಾಗ್ತಿದೆ. ಈ ಬಗ್ಗೆ ಸ್ಥಳಿಯರಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕೊಲೆ ಮಾಡುವ ಉದ್ದೇಶದಿಂದ ಕಚೇರಿ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾವನ್ನು ಮೇಲಕ್ಕೆ ತಿರುಗಿಸಿರುವುದು ಕಂಡು ಬಂದಿದೆ. ಮೆಲ್ನೋಟಕ್ಕೆ ಕೊಲೆಗೆ ಸಂಚು ರೂಪಿಸಿರುವುದು ಪರಿಚಯ ಇರುವವರೇ ಎಂದು ಪ್ರಾಥಮಿಕ ತನಿಖೆಯಲ್ಲಿ‌ ಪೊಲೀಸರು ಕಂಡುಕೊಂಡಿದ್ದಾರೆ.‌ ರೇಖಾ ಕದಿರೇಶ್ ಜೊತೆಗಿದ್ದ ಪೀಟರ್ ಆ್ಯಂಡ್ ಟೀಂ ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಕುರಿತು ಕಾಟಾನ್​ಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.