ETV Bharat / state

ಟೋಯಿಂಗ್​ ವೇಳೆ ಡಿವೈಡರ್​​ಗೆ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ಹೆಡ್​​ ಕಾನ್ಸ್​​ಟೇಬಲ್​​ ಸಾವು - ಪೀಣ್ಯ ಪೊಲೀಸ್ ಠಾಣೆಯ ಹೆಡ್​ ಕಾನ್ಸ್​​ಟೇಬಲ್ ಸಾವು

ಸೀಜ್ ಮಾಡಿದ ಆಟೋವನ್ನು ಟೋಯಿಂಗ್ ಮಾಡಿ ಚಾಲನೆ‌ ಮಾಡಿಕೊಂಡು ಹೋಗುವಾಗ‌ ಡಿವೈಡರ್​​ಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್​ ಕಾನ್ಸ್​​​ಟೇಬಲ್​ ಅಸುನೀಗಿದ್ದಾರೆ.

police-head-constable-died-in-accident
ಹೆಡ್​​ ಕಾನ್ಸ್​​ಟೇಬಲ್​​ ಸಾವು
author img

By

Published : Apr 12, 2020, 7:15 PM IST

Updated : Apr 13, 2020, 6:17 PM IST

ಬೆಂಗಳೂರು: ಸೀಜ್ ಮಾಡಿದ ಆಟೋ ಟೋಯಿಂಗ್ ಮಾಡಿ ಚಾಲನೆ‌ ಮಾಡಿಕೊಂಡು ಹೋಗುವಾಗ‌ ನಿಯಂತ್ರಣ ತಪ್ಪಿ ಡಿವೈಡರ್​​ಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಪೀಣ್ಯ ಪೊಲೀಸ್ ಠಾಣೆಯ ಹೆಡ್​ ಕಾನ್ಸ್​​ಟೇಬಲ್ ಚಿಕಿತ್ಸೆ ಫಲಕಾರಿಯಾಗದೆ​ ಸಾವನ್ನಪ್ಪಿದ್ದಾರೆ.

ನಾಗೇಶ್ ಎಂಬುವರೆ ಸಾವನ್ನಪ್ಪಿದ ಹೆಡ್ ಕಾನ್ಸ್​​ಟೇಬಲ್. ನಿನ್ನೆ ಮಧ್ಯಾಹ್ನ ಪೀಣ್ಯ ದಾಸರಹಳ್ಳಿ ಜಂಕ್ಷನ್ ಬಳಿ ಅನಗತ್ಯವಾಗಿ ರಸ್ತೆಯಲ್ಲಿ‌‌ ಓಡಾಡುತ್ತಿದ್ದ ಆಟೋವನ್ನು ನಾಗೇಶ್ ಅವರು ಸೀಜ್ ಮಾಡಿ ಟೋಯಿಂಗ್ ಮಾಡುವಾಗ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದರು. ಅಪಘಾತದ ಬಳಿಕ ನಾಗೇಶ್​ಗೆ ಲಘು ಹೃದಯಾಘಾತವಾಗಿತ್ತು.

ಪೊಲೀಸರು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರು. ತಲೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವವಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ‌ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಭೇಟಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು.

ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ನಾಗೇಶ್ ಮೃತಪಟ್ಟಿದ್ದಾರೆ.

Last Updated : Apr 13, 2020, 6:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.