ETV Bharat / state

ಬೆಂಗಳೂರಿನ ಕೆಎಸ್ಆರ್​ಪಿ ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ - ev bharata kannada

ರಾಜ್ಯ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತುಂಬಾ ಶ್ರಮಿಸುತ್ತಿದ್ದೆ. ಅವರ ಅವಿರತ ಶ್ರಮದಿಂದ ರಾಜ್ಯದಲ್ಲಿ ಶಾಂತಿ‌ ನೆಲೆಸಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹೇಳಿದ್ದಾರೆ.

Etv Bharat
Etv Bharat
author img

By

Published : Apr 2, 2023, 7:56 PM IST

ಬೆಂಗಳೂರು: ಪೊಲೀಸ್ ಧ್ವಜ ದಿನಾಚರಣೆ ಹಿನ್ನೆಲೆ ಭಾನುವಾರ ಕೋರಮಂಗಲದ ಕೆಎಸ್ಆರ್​ಪಿ ಮೈದಾನದಲ್ಲಿ ಪೊಲೀಸ್ ಕವಾಯತು ನಡೆಯಿತು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸಾಂಪ್ರದಾಯಿಕವಾಗಿ ನೀಡಬೇಕಿದ್ದ ಮುಖ್ಯಮಂತ್ರಿ ಪದಕ ವಿತರಣೆ ಕಾರ್ಯಕ್ರಮ ಮುಂದೂಡಲಾಗಿದೆ. ಮುಖ್ಯ ಅಥಿತಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪೊಲೀಸ್ ಇಲಾಖೆ ವಿವಿಧ ತುಕಡಿಗಳ ಮೂಲಕ ಗೌರವ ವಂದನೆ ಸೂಚಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಂದಿತಾ ಶರ್ಮಾ ಅವರು, ರಾಜ್ಯ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತುಂಬಾ ಶ್ರಮಿಸುತ್ತಿದೆ. ಪೊಲೀಸರ ಅವಿರತ ಶ್ರಮದಿಂದ ರಾಜ್ಯದಲ್ಲಿ ಶಾಂತಿ‌ ನೆಲೆಸಿದೆ. ಕೋವಿಡ್ ಪರಿಸ್ಥಿತಿ ವೇಳೆ ಎಲ್ಲಾ ಅಧಿಕಾರಿಗಳು ತಮ್ಮ ಪ್ರಾಣ ಲೆಕ್ಕಿಸದೇ ಕೆಲಸ ನಿರ್ವಹಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಚುನಾವಣೆಯಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಅಧಿಕಾರಿಗಳು ಕೆಲ‌ಸ ನಿರ್ವಹಿಸುವ ನಂಬಿಕೆ ಇದೆ. ಒಟ್ಟಾಗಿ ನಾವು ನೀವು ಕೆಲಸ ಮಾಡೋಣ ಎಂದರು.

ಇನ್ನು ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳು, ಮುಖ್ಯ ಅತಿಥಿಯಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭಾಗಿಯಾಗಿದ್ದರು.

ಪೊಲೀಸರು ಸಮಾಜದ ಆಧಾರ ಸ್ತಂಭ ಇದ್ದಂತೆ - ಹೆಚ್ ಎಸ್ ರಮೇಶ್: ಮಂಡ್ಯದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಧ್ವಜಕ್ಕೆ ಗೌರವ ವಂದನೆ ಸಲ್ಲಿಸುವ ಮೂಲಕ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಎಸ್. ರಮೇಶ್ ಅವೆರು ಇದೇ ವೇಳೆ ಪೊಲೀಸ್ ಧ್ವಜದ ಸ್ಟಿಕರ್ ಬಿಡುಗಡೆ ಮಾಡಿ‌ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪರಿವೀಕ್ಷಣೆ ನಡೆಸಿದರು.

ನಂತರ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಬಂದ ದೂರಗಳನ್ನು ನಾವು ಪರಿಗಣಿಸಿ ಕೆಲಸ ಮಾಡುವುದರ ಜೊತೆಗೆ ನೊಂದವರಿಗೆ ಪರಿಹಾರ ಕೊಟ್ಟು ನ್ಯಾಯ ಸಿಗುವಂತೆ ಮಾಡಬೇಕು. ಪೊಲೀಸರಿಂದ ಅಮಾಯಕರಿಗೆ ಆಗುವ ತೊಂದರೆಗಳನ್ನು ತಪ್ಪಿಸುವ ಕೆಲಸ ಮಾಡಿದಾಗ ಸಮಾಜದಲ್ಲಿ ಪೊಲೀಸ್ ಇಲಾಖೆಗೆ ಗೌರವ ಹಾಗೂ ಪೊಲೀಸರ ಮೇಲೆ ಒಳ್ಳೆಯ ಭಾವನೆ ಬರುತ್ತದೆ ಎಂದು ಹೇಳಿದರು.

ನಮ್ಮ ವೃತ್ತಿಯನ್ನ ಮೈಗೂಡಿಸಿಕೊಂಡು ಯಶಸ್ಸು ಗಳಿಸಬೇಕು, ಸಮಾಜ ಒಳ್ಳೆಯ ಸ್ಥಿತಿಯಲ್ಲಿದೆ ಅಂದರೆ ಅದಕ್ಕೆ ಪೊಲೀಸ್ ಇಲಾಖೆ ಕಾರಣ. ಪೊಲೀಸರು ಸಮಾಜದ ಆಧಾರ ಸ್ತಂಭ ಇದ್ದ ಹಾಗೆ. ಶ್ರದ್ಧೆಯಿಂದ ನಾವು ಕೆಲಸ ಮಾಡಿದರೆ ಪೊಲೀಸ್ ಇಲಾಖೆಗೆ ಗೌರವ ತರಬಹುದು ಎಂದು ಪೊಲೀಸರಿಗೆ ಕಿವಿಮಾತು ಹೇಳಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಸೇರಿದಂತೆ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಏ. 4 ಮಹಾವೀರ ಜಯಂತಿ.. ಪ್ರಾಣಿವಧೆ, ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಸುತ್ತೋಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.