ETV Bharat / state

ಮಾಸ್ಕ್​ ಧರಿಸದೇ ಇದ್ದರೆ ಏನಾಗುತ್ತೆ?: ವಿಡಿಯೋ ಮೂಲಕ ಜಾಗೃತಿ ಮೂಡಿಸಿದ ಖಾಕಿಪಡೆ

ಸದ್ಯ ನಗರದಲ್ಲಿ ಯಾರೇ ಮಾಸ್ಕ್ ಧರಿಸದೇ ಓಡಾಟ ಮಾಡಿದರೆ ದಂಡ ವಿಧಿಸಿ ‌ಎಂದು ಈಗಾಗಲೇ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಸದ್ಯ ಸಿಬ್ಬಂದಿ ಈ ಸೂಚನೆಯನ್ನೇ ಪಾಲನೆ ಮಾಡುತ್ತಿದ್ದಾರೆ.

ವಿಡಿಯೋ ಮೂಲಕ ಜಾಗೃತಿ ಮೂಡಿಸಿದ  ಪೊಲೀಸ್​ ಇಲಾಖೆ

author img

By

Published : Jul 16, 2020, 7:47 AM IST

ಬೆಂಗಳೂರು : ಕೊರೊನಾ ಸೋಂಕು ತಡೆಗಟ್ಟಲು ಸಿಲಿಕಾನ್ ಸಿಟಿಯಲ್ಲಿ ಲಾಕ್​​ಡೌನ್ ಹೇರಲಾಗಿದೆ. ಆದರೆ, ಅಗತ್ಯ ಸೇವೆಯ ನೆಪದಲ್ಲಿ ಬಹುತೇಕ ಮಂದಿ ಓಡಾಟ ಮಾಡುತ್ತಿದ್ದಾರೆ. ಆದರೆ, ಕೆಲವರು‌ ಮಾಸ್ಕ್ ಧರಿಸದೇ ರಾಜಾರೋಷವಾಗಿ ತಮ್ಮ ಆರೋಗ್ಯ ಲೆಕ್ಕಿಸದೇ ಓಡಾಟ‌ ಮಾಡಿದ ಕಾರಣ ಪೊಲೀಸರು ಅವರನ್ನ ತಡೆದು ನಿನ್ನೆ ಬುದ್ದಿವಾದ ಹೇಳಿದ್ದಾರೆ.

ಇನ್ನು ಉತ್ತರ ವಿಭಾಗ ಪೊಲೀಸರು ಸಾರ್ವಜನಿಕರು‌ ಮಾಸ್ಕ್ ಧರಿಸದೇ ಇದ್ದರೆ ಪರಿಣಾಮ ಏನಾಗುತ್ತದೆ ಅನ್ನೋದರ ಬಗ್ಗೆ ವಿಡಿಯೋ ಮಾಡಿದ್ದಾರೆ. ಗುಂಪಲ್ಲಿ‌ ವ್ಯಕ್ತಿಗಳು ಮಾತನಾಡುತ್ತಾ ಮಾಸ್ಕ್ ಹಾಕದೇ ರಾಜಾರೋಷಾವಾಗಿ ನಿಂತಿದ್ದರು. ಈ ವೇಳೆ, ಸಾರ್ವಜಜನಿಕನೊಬ್ಬ ಮಾಸ್ಕ್ ಧರಿಸುವಂತೆ ತಿಳಿಸಿದ್ದಾನೆ. ಅದಕ್ಕೆ ಕ್ಯಾರೆ ಅನ್ನದೇ ಇದ್ದಾಗ ಸಾರ್ವಜನಿಕ ವ್ಯಕ್ತಿ ಪೊಲೀಸರಿಗೆ ಕರೆ ‌ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣ ಹೊಯ್ಸಳದಲ್ಲಿ ಬಂದ ಲೇಡಿ‌ ಸಬ್ ಇನ್ಸ್​ಪೆಕ್ಟರ್​ ಹಾಗೂ ಬಿಬಿಎಂಪಿ ‌ಮಾರ್ಷಲ್ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಮಾಸ್ಕ್ ನೀಡಿ ದಂಡ ವಿಧಿಸಿದ್ದಾರೆ.

ಸದ್ಯ ನಗರದಲ್ಲಿ ಯಾರೇ ಮಾಸ್ಕ್ ಧರಿಸದೇ ಓಡಾಟ ಮಾಡಿದರೆ ದಂಡ ವಿಧಿಸಿ ‌ಎಂದು ಈಗಾಗಲೇ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಸದ್ಯ ಸಿಬ್ಬಂದಿ ಈ ಸೂಚನೆಯನ್ನ ಪಾಲನೆ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.