ETV Bharat / state

ಕಾನೂನು ಸುವ್ಯವಸ್ಥೆ ಪೊಲೀಸ್ ಇನ್ಸ್​ಪೆಕ್ಟರ್​ಗಳಿಗೂ ಬಾಡಿವೋರ್ನ್ ಕ್ಯಾಮರಾ: ಪಾರದರ್ಶಕತೆ ಹೆಚ್ಚಿಸಲು ಮುಂದಾದ ಇಲಾಖೆ - etv bharat karnataka

ಕಾನೂನು‌ ಸುವ್ಯವಸ್ಥೆ ವಿಭಾಗದ ಪೊಲೀಸ್ ಇನ್ಸ್​ಪೆಕ್ಟರ್​ಗಳಿಗೆ ಬಾಡಿವೋರ್ನ್ ಕ್ಯಾಮರಾವನ್ನು ಸೂಕ್ತ ತರಬೇತಿ ನೀಡಿ ವಿತರಿಸಲು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತೀರ್ಮಾನಿಸಿದ್ದಾರೆ.

Etv Bharatpolice-department-decided-to-give-body-worn-cameras-for-law-and-order-inspectors
ಲಾ ಅಂಡ್ ಆರ್ಡರ್ ಇನ್ಸ್​ಪೆಕ್ಟರ್​ಗಳಿಗೂ ಬಾಡಿವೋರ್ನ್ ಕ್ಯಾಮೆರಾ: ಪಾರದರ್ಶಕತೆ ಹೆಚ್ಚಿಸಲು ಮುಂದಾದ ಪೊಲೀಸ್​ ಇಲಾಖೆ
author img

By

Published : Jun 30, 2023, 10:06 PM IST

ಬೆಂಗಳೂರು: ಪೊಲೀಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ನಗರದಲ್ಲಿ ಜನಸ್ನೇಹಿ ಪೊಲೀಸ್ ವಾತಾವರಣ ಬಲಪಡಿಸಲು ಟ್ರಾಫಿಕ್ ಹಾಗೂ ಹೊಯ್ಸಳ‌ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದ್ದ ಬಾಡಿವೋರ್ನ್ ಕ್ಯಾಮರಾವನ್ನು ಇನ್ನು ಮುಂದೆ ಕಾನೂನು‌ ಸುವ್ಯವಸ್ಥೆ ವಿಭಾಗದ ಪೊಲೀಸ್ ಇನ್ಸ್​ಪೆಕ್ಟರ್​ಗಳಿಗೂ ನೀಡಲು ನಗರ ಪೊಲೀಸ್ ಇಲಾಖೆ ನಿರ್ಧರಿಸಿದೆ. ನಗರದಲ್ಲಿರುವ 111 ಕಾನೂನು‌ ಸುವ್ಯವಸ್ಥೆ ವಿಭಾಗದ ಪೊಲೀಸ್ ಇನ್ಸ್​ಪೆಕ್ಟರ್​ಗಳಿಗೆ ತಲಾ ಒಂದು ಬಾಡಿವೋರ್ನ್ ಕ್ಯಾಮರಾವನ್ನು ಸೂಕ್ತ ತರಬೇತಿ ನೀಡಿ ಇನ್ನೊಂದು ವಾರದಲ್ಲಿ ವಿತರಿಸಲು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ನಿರ್ಧರಿಸಿದ್ದಾರೆ.

ಪೊಲೀಸ್ ನಡವಳಿಕೆ ಹಾಗೂ ವಾಹನ ಸವಾರರೊಂದಿಗೆ ನಡೆಯುವ ಅನಗತ್ಯ ಮಾತಿನ ಸಂಘರ್ಷ ತಪ್ಪಿಸಲು ಕೆಲವು ತಿಂಗಳ ಹಿಂದೆ ಟ್ರಾಫಿಕ್‌ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ ನೀಡಲಾಗಿತ್ತು. ಅಲ್ಲದೇ ಕೆಲವು ದಿನಗಳ ಹಿಂದೆ 242 ಹೊಯಳ್ಸ ಸಿಬ್ಬಂದಿಗೆ ಒಟ್ಟು 482 ಕ್ಯಾಮರಾ ನೀಡಲಾಗಿತ್ತು. ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆ ಹಾಗೂ ದೂರುಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್‌ನಡಿ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಇನ್ಸ್​ಪೆಕ್ಟರ್​ಗಳಿಗೆ ಬಾಡಿವೋರ್ನ್ ಕ್ಯಾಮರಾ ನೀಡಲಾಗುತ್ತಿದೆ.

ಬೆಂಗಳೂರಿನಂತಹ ನಗರದಲ್ಲಿ ಕಾರ್ಯನಿರ್ವಹಿಸುವ ಇನ್ಸ್​ಪೆಕ್ಟರ್​ಗಳು ಅಪರಾಧ ಪ್ರಕರಣ ಬೇಧಿಸುವುದರ ಜೊತೆಗೆ ಬಂದೋಬಸ್ತ್, ಪ್ರತಿಭಟನೆ-ಧರಣಿ ಹಾಗೂ ಗಲಾಟೆ ನಡೆದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಪ್ರಕರಣ ದಾಖಲಿಸುವಲ್ಲಿ, ಆರೋಪಿಗಳನ್ನು ಹಿಡಿಯುವಲ್ಲಿ ಕೊಂಚ ತಡವಾದರೂ ಪೊಲೀಸರ ಮೇಲೆ ದೂರುದಾರರು ಅನಗತ್ಯ ಆರೋಪ ಮಾಡಿ ರಾದ್ದಾಂತ ಸೃಷ್ಟಿ ಮಾಡುತ್ತಾರೆ. ಇದು ಇನ್ಸ್​ಪೆಕ್ಟರ್​ಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವಂತೆ ಮಾಡುತ್ತದೆ.

ನಗರದಲ್ಲಿ ಗಲಾಟೆ, ಪ್ರತಿಭಟನೆ, ಮುಷ್ಕರ ನಡೆದ ಸಂದರ್ಭಗಳಲ್ಲಿ ಪೊಲೀಸರೊಂದಿಗೆ ಕೆಲವರು ಅನುಚಿತ ವರ್ತನೆ, ಕಾನೂನುಬಾಹಿರವಾಗಿ ವರ್ತಿಸಿರುವ ಉದಾಹರಣೆಗಳಿವೆ. ಜೊತೆಗೆ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರುವ ಶೋಷಿತರಿಗೆ ಬೆದರಿಕೆ, ದೂರು ಹಿಂಪಡೆಯುವಂತೆ ಒತ್ತಡ, ಸಾರ್ವಜನಿಕ ಪ್ರದೇಶಗಳಲ್ಲಿ ಜನರೊಂದಿಗೆ ತೋರುವ ಅಶಿಸ್ತು ಪ್ರದರ್ಶಿಸುವುದರಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಪೊಲೀಸರ ನಡವಳಿಕೆಯಲ್ಲಿ ದಕ್ಷತೆ ತರಲು ಹಾಗೂ ಜನಸ್ನೇಹಿ ಪೊಲೀಸ್ ನಿರ್ಮಿಸಲು ಬಾಡಿವೋರ್ನ್ ಕ್ಯಾಮರಾ ಸಹಕಾರಿಯಾಗಲಿದೆ.

ಕ್ಯಾಮರಾ ಧರಿಸಲು ಮಾರ್ಗಸೂಚಿ ಪಾಲನೆ ಕಡ್ಡಾಯ: ಕೆಲವೇ ದಿನಗಳಲ್ಲಿ ಠಾಣೆಗೊಂದರಂತೆ ಬಾಡಿವೋರ್ನ್ ಕ್ಯಾಮರಾ ನೀಡಲಾಗುತ್ತಿದೆ. ಇನ್ಸ್​ಪೆಕ್ಟರ್ ಅಥವಾ ಸಬ್ ಇನ್ಸ್​ಪೆಕ್ಟರ್ ಸಹ ಕ್ಯಾಮರಾ ಧರಿಸಬಹುದಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವಾಗ ಆದ್ಯತೆ ಮೇರೆಗೆ ಕ್ಯಾಮೆರಾ ಧರಿಸುವುದು ಕಡ್ಡಾಯ. ಇದರಂತೆ ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಕರ್ತವ್ಯದಲ್ಲಿರುವಾಗ ಹಾಗೂ ರಾತ್ರಿ ಪಾಳಿಯಲ್ಲಿ ಇರುವಾಗ ಕಡ್ಡಾಯವಾಗಿ ಕ್ಯಾಮರಾ ಧರಿಸಬೇಕು.

ಪ್ರತಿಭಟನೆ, ಧರಣಿ, ಬಂದೋಬಸ್ತ್ ಕರ್ತವ್ಯದಲ್ಲಿ ಕ್ಯಾಮರಾ ಕಡ್ಡಾಯ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಬಂಧಿಸಿ ಹೇಳಿಕೆ ಪಡೆಯುವಾಗ ಕ್ಯಾಮರಾ ಧರಿಸುವುದು ಕಡ್ಡಾಯವಿಲ್ಲ ಎಂಬುವುದು ಸೇರಿ ಹಲವು ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಪೊಲೀಸ್ ಆಯುಕ್ತರು ಸಿದ್ದಪಡಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಬಾಡಿವೋರ್ನ್ ಕ್ಯಾಮರಾ- ಪ್ರಯೋಜನವೇನು?: ಬಾಡಿವೋರ್ನ್ ಕ್ಯಾಮರಾ ಧರಿಸುವುದರಿಂದ ಇನ್ಸ್​ಪೆಕ್ಟರ್​ಗಳ ನಡವಳಿಕೆಯಲ್ಲಿ ಸುಧಾರಣೆಯಾಗಲಿದೆ. ಭ್ರಷ್ಟಾಚಾರಕ್ಕೆ ಕೊಕ್ಕೆ ಬೀಳಲಿದೆ. ಗಸ್ತು ವೇಳೆ ನಾಗರಿಕರ ಜೊತೆಗೆ ಉತ್ತಮ ಸಂಬಂಧ ವೃದ್ಧಿಯಾಗಲಿದೆ. ತಪ್ಪು ಮಾಡಿದರೆ ಸಿಕ್ಕಿಹಾಕಿಕೊಳ್ಳುವ ಸ್ವಯಂಜಾಗೃತಿ ಹೆಚ್ಚಿಸುತ್ತದೆ. ಬಾಡಿವೋರ್ನ್ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಸುಮಾರು 1 ತಿಂಗಳವರೆಗೂ ರೆಕಾರ್ಡ್ ಇರಲಿದೆ. ಇದರ ಉಸ್ತುವಾರಿ ಆಯಾ ವಿಭಾಗದ ಡಿಸಿಪಿ ಆಗಿರುತ್ತಾರೆ.

ಸೇಫ್ ಸಿಟಿ ಯೋಜನೆಯಡಿ ನಗರದ ಕಾನೂನು ಸುವ್ಯವಸ್ಥೆ ವಿಭಾಗದ 111 ಇನ್ಸ್​ಪೆಕ್ಟರ್​​ಗಳಿಗೆ ಬಾಡಿವೋರ್ನ್ ಕ್ಯಾಮರಾ ನೀಡಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಮೆರಾ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಇದನ್ನೂ ಓದಿ: ಕೇಳಿದಷ್ಟು ಹಣ ನೀಡದ್ದಕ್ಕೆ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ತೋರಿದ ಮೂವರು ಮಂಗಳಮುಖಿಯರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.