ETV Bharat / state

ಬೆಂಗಳೂರಿನಲ್ಲಿ ಮತ್ತೊಬ್ಬ ಕೊರೊನಾ ವಾರಿಯರ್​​ ಬಲಿ: ಸಿಬ್ಬಂದಿಯಲ್ಲಿ ಹೆಚ್ಚಿದ ಭೀತಿ - ಎಎಸ್ಐ

ಬೆಂಗಳೂರಿನಲ್ಲಿ ಕೊರೊನಾಗೆ ಪೊಲೀಸ್​ ಸಿಬ್ಬಂದಿ ಸಾವನ್ನಪ್ಪಿದ್ದು, ಕಳೆದ 24 ಗಂಟೆಯಲ್ಲಿ ನಗರದಲ್ಲಿ 33 ಪೊಲೀಸರು ಮತ್ತೆ ಸೋಂಕಿಗೆ ತುತ್ತಾಗಿದ್ದಾರೆ.

ಕೊರೊನಾ ವಾರಿಯರ್​ ಬಲಿ
ಕೊರೊನಾ ವಾರಿಯರ್​ ಬಲಿ
author img

By

Published : Jul 21, 2020, 11:11 AM IST

ಬೆಂಗಳೂರು: ನಗರದಲ್ಲಿ ಮತ್ತೊಬ್ಬ ಕೊರೊನಾ ವಾರಿಯರ್ ಕೋವಿಡ್​ಗೆೆ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ಸಿಟಿ‌ ಆರ್ಮ್ ರಿಸರ್ವ್ ಸೌತ್​ನಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಈ ಹಿಂದೆ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿದ ಕಾರಣ ಅವರನ್ನು ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಇನ್ನೊಂದೆಡೆ ಇವರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಿಟಿ‌ ಆರ್ಮ್ ರಿಸರ್ವ್(CAR SOUTH) ಕಚೇರಿಯನ್ನು ಸೀಲ್​​​ಡೌನ್ ಮಾಡಿ ಸೋಂಕಿತರ ಸಂಪರ್ಕದಲ್ಲಿದ್ದ ಸಿಬ್ಬಂದಿ ಹಾಗೂ ಕುಟುಂಬಸ್ಥರನ್ನ ಕ್ವಾರಂಟೈನ್ ಮಾಡಲಾಗಿದೆ. ಇದುವರೆಗೆ ನಗರದಲ್ಲಿ ಒಟ್ಟು 9 ಕೊರೊನಾ ವಾರಿಯರ್ಸ್​ ಬಲಿಯಾಗಿದ್ದಾರೆ.

ಕಳೆದ 24 ಗಂಟೆಯಲ್ಲಿ ನಗರದಲ್ಲಿ 33 ಪೊಲೀಸರು ಮತ್ತೆ ಸೋಂಕಿಗೆ ತುತ್ತಾಗಿದ್ದಾರೆ. ಸದ್ಯ 916 ಮಂದಿ ಪೊಲೀಸರಿಗೆ ಕೊರೊನಾ ತಗುಲಿದ್ದು, ಅದರಲ್ಲಿ 615 ಮಂದಿ ಗುಣಮುಖರಾಗಿ, ಸೋಂಕಿತರ ಸಂಪರ್ಕದಲ್ಲಿರುವ 807 ಮಂದಿ ಕ್ವಾರಂಟೈನ್​​​ನಲ್ಲಿ ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.