ETV Bharat / state

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ತಗ್ಗಿಸಲು ಅಧಿಕಾರಿಗಳೊಂದಿಗೆ ಪೊಲೀಸ್ ಆಯುಕ್ತರ ಸಭೆ‌

ಟ್ರಾಫಿಕ್‌ ಸಮಸ್ಯೆ ತಗ್ಗಿಸುವ ನಿಟ್ಟಿನಲ್ಲಿ ಹಿರಿಯ ಸಂಚಾರಿ ಅಧಿಕಾರಿಗಳೊಂದಿಗೆ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಸಭೆ‌ ನಡೆಸಿದರು.

Police Commissioner meeting to control traffic problem in Bangalore
ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ತಗ್ಗಿಸಲು ಅಧಿಕಾರಿಗಳೊಂದಿಗೆ ಪೊಲೀಸ್ ಕಮೀಷನರ್ ಸಭೆ‌
author img

By

Published : Jun 28, 2022, 4:20 PM IST

ಬೆಂಗಳೂರು: ನಗರದಲ್ಲಿ ವರ್ಷದಿಂದ‌ ವರ್ಷಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಮುಂದಿನ 6 ತಿಂಗಳಲ್ಲಿ ಸಂಚಾರಿ ದಟ್ಟಣೆ ಕಿರಿಕಿರಿಗೆ ಕಡಿವಾಣ ಹಾಕಲು ಪ್ರಧಾನಿ ಸೂಚನೆ‌ ನೀಡಿದ್ದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಂಚಾರಿ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ‌‌ ನಡೆಸಿದರು.

ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ಸೇರಿದಂತೆ ಡಿಸಿಪಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ನಿನ್ನೆಯಷ್ಟೇ ಸಂಚಾರಿ ಠಾಣೆ ಇನ್ಸ್​ಪೆಕ್ಟರ್ ಜೊತೆ ಸಭೆ ನಡೆಸಿದ್ದ ರವಿಕಾಂತೇಗೌಡ, ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಿರುವ ಪ್ರಮುಖ 10 ಜಂಕ್ಷನ್​ಗಳ‌ ಬಗ್ಗೆ ಮಾಹಿತಿ ಪಡೆದಿದ್ದರು.

ಸಿಲ್ಕ್ ಬೋರ್ಡ್, ಜಯದೇವ, ಹೆಬ್ಬಾಳ, ಕೆ.ಆರ್‌.ಪುರಂ, ಗೊರಗುಂಟೆಪಾಳ್ಯ ಹಾಗೂ ಮೈಸೂರು ರಸ್ತೆ ಸೇರಿದಂತೆ 10 ಜಂಕ್ಷನ್​ಗಳ‌ ಪಟ್ಟಿ ಸಿದ್ದಪಡಿಸಿ ಪೊಲೀಸ್ ಆಯುಕ್ತರಿಗೆ ಟ್ರಾಫಿಕ್‌ ಆಯುಕ್ತರು​ ಮಾಹಿತಿ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್​ಬಿ, ಬೆಸ್ಕಾಂ, ನಗರ ಪೊಲೀಸರ ಸಭೆ ನಡೆದಿತ್ತು. ‌ಸುಗಮ ಸಂಚಾರ ನಿರ್ಮಾಣ ಕ್ರಮಗಳ ಬಗ್ಗೆ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಚರ್ಚಿಸಿದ್ದರು.

ಇಂದು ರಾತ್ರಿ ಸಿಟಿ ರೌಂಡ್ಸ್: ಪೊಲೀಸ್ ಆಯುಕ್ತ, ಬಿಬಿಎಂಪಿ ಆಯುಕ್ತ, ನಗರ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಬಿಡಿಎ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಇಂದು ರಾತ್ರಿ 10 ಗಂಟೆಗೆ ಸಿಟಿ ರೌಂಡ್ಸ್ ನಡೆಸಲಿದ್ದಾರೆ. ನಗರದಲ್ಲಿ ಹೆಚ್ಚು ಸಂಚಾರಿ ದಟ್ಟಣೆಯಿರುವ ಪ್ರದೇಶಗಳಲ್ಲಿ ಪರಿಶೀಲನೆ‌‌‌‌ ನಡೆಸಲಿದ್ದು, ಯಾವ ಇಲಾಖೆಯಿಂದ ಏನೇನು ಕೆಲಸ ಆಗಬೇಕು ಎಂಬುದರ ಬಗ್ಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಕೆಲಸ‌ ಮಾಡಲಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಕಾರಿಗೆ ಬೆಂಕಿ ಇಟ್ಟ ಕಿಡಿಗೇಡಿ.. ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.