ETV Bharat / state

ಥೆರಪಿ ಚಿಕಿತ್ಸೆ ನೀಡುವುದಾಗಿ ಜನರಿಗೆ ವಂಚನೆ: ನಕಲಿ ವೈದ್ಯೆ ಪೊಲೀಸ್​ ಬಲೆಗೆ

ನ್ಯಾಯಾಲಯದಿಂದ ಅನುಮತಿ ಪಡೆದು ಆಕೆಯ ಮನೆ ಮೇಲೆ ಸರ್ಚ್ ವಾರಂಟ್ ಪಡೆದು ಪೊಲೀಸರು ಹಲವಾರು ದಾಖಲೆಗಳನ್ನ ಜಪ್ತಿ ಮಾಡಿದ್ದಾರೆ. ಮನೆ ಮೇಲೆ ಸರ್ಚ್ ಮಾಡುವಾಗ ನಕಲಿ ವೈದ್ಯೆ ಮಾಡಿರುವ ಬೋಗಸ್ ಡಾಕ್ಯುಮೆಂಟ್ ಸಹ ಪತ್ತೆಯಾಗಿದೆ.

fake
ವಾರೆಂಟ್
author img

By

Published : Jun 22, 2020, 1:18 PM IST

ಬೆಂಗಳೂರು: ಸರ್ಚ್ ವಾರಂಟ್ ಪಡೆದು ಕ್ಲಿನಿಕ್ ಮೇಲೆ ದಾಳಿ ನಡೆಸಿದ ಮಲ್ಲೇಶ್ವರಂ ಪೊಲೀಸರು ನಕಲಿ ವೈದ್ಯೆ‌ಯೊಬ್ಬರನ್ನು ಬಂಧಿಸಿದ್ದಾರೆ.

ಸಂಗೀತಾ ಬಂಧಿತ ನಕಲಿ ಡಾಕ್ಟರ್​. ಈಕೆ ಮಲ್ಲೇಶ್ವರಂ ಪೊಲೀಸ್ ಠಾಣೆಯ ಬಳಿ‌ ನಕಲಿ‌ ತನ್ಮಯಿ ಹೆಲ್ತ್ ಕೇರ್ ಕ್ಲಿನಿಕ್ ಹೊಂದಿದ್ದು, ಹಲವಾರು‌ ಜನರಿಗೆ ಥೆರಪಿ ಟ್ರೀಟ್​ಮೆಂಟ್ ಕೊಡುವುದಾಗಿ ಆಸ್ಪತ್ರೆಯ ಬಳಿ ರೋಗಿಗಳನ್ನ ಸೇರಿಸಿಕೊಂಡಿದ್ದಳು. ಈ ವಿಚಾರ ಪೊಲೀಸರಿಗೆ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

fake doctor
ನಕಲಿ ಡಾಕ್ಟರ್​ ಮೇಲೆ ಪೊಲೀಸರು ದಾಖಲಿಸಿದ ಎಫ್​ಐಆರ್​

ದಾಳಿ ವೇಳೆ ನಕಲಿ ವೈದ್ಯೆ ಅನ್ನೋದು ತಿಳಿದು ಬಂದಿದೆ. ಹಾಗೆ ‌ನ್ಯಾಯಾಲಯದಿಂದ ಅನುಮತಿ ಪಡೆದು ಆಕೆಯ ಮನೆ ಮೇಲೆ ಸರ್ಚ್ ವಾರಂಟ್ ಪಡೆದು ಪೊಲೀಸರು ಹಲವಾರು ದಾಖಲೆಗಳನ್ನ ಜಪ್ತಿ ಮಾಡಿದ್ದಾರೆ. ಆರೋಪಿ ಮನೆ ಮೇಲೆ ಸರ್ಚ್ ಮಾಡುವಾಗ ನಕಲಿ ವೈದ್ಯೆ ಮಾಡಿರುವ ಬೋಗಸ್ ದಾಖಲೆ ಪತ್ತೆಯಾಗಿದೆ.

ಕೊದಂಡರಾಮಪುರದ ಕಾರ್ಪೋರೇಷನ್ ಬ್ಯಾಂಕ್ ಅಕೌಂಟ್, ಹೆಲ್ತ್ ಕೇರ್ ಅಕೌಂಟ್​ನಲ್ಲಿದ್ದ 15 ಲಕ್ಷ ಹಣವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆ ವೇಳೆ ಸಂಗೀತಾ ವಿರುದ್ಧ ಕೆಲ ವಂಚನೆ ಕೇಸ್ ಬೇರೆ ಬೇರೆ ಠಾಣಾ ವ್ಯಾಪ್ತಿಗಳಲ್ಲಿ ಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಸದ್ಯ ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.