ಬೆಂಗಳೂರು: ಸ್ನೇಹಿತನ ಹೆಂಡತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಟೆಕ್ಕಿಯನ್ನು ಬಂಧಿಸುವಲ್ಲಿ ಬೆಳ್ಳಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ನೀಲಬ್ ನಯನ್ ಬಂಧಿತ ಆರೋಪಿ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಸುವನಹಳ್ಳಿಯ ಕ್ರೀಡಾ ಕಾಂಪ್ಲೆಕ್ಸ್ನವೊಂದರಲ್ಲಿ ನೀಲಬ್ ಸ್ನೇಹಿತರು ಬರ್ತಡೇ ಪಾರ್ಟಿ ಆಚರಿಸಿದ್ದರು. ಪಾರ್ಟಿ ಮುಗಿಸಿ ಅಲ್ಲೇ ಇದ್ದ ರೂಮ್ವೊಂದರಲ್ಲಿ ಉಳಿದುಕೊಂಡಿದ್ದರು. ಕಂಠಪೂರ್ತಿ ಕುಡಿದ ಅಮಲಿಸಲ್ಲಿದ್ದ ನೀಲಬ್ ಶೌಚಾಲಯಕ್ಕೆ ತೆರಳಿದ್ದಾಗ ಅಲ್ಲೇ ಪಕ್ಕದ ರೋಮ್ನ ಮಲಗಿದ್ದ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಈ ವೇಳೆ ಸಂತ್ರಸ್ತೆ ಆರೋಪಿಯಿಂದ ತಪ್ಪಿಸಿಕೊಂಡು ಕಿರುಚಾಡಿಕೊಂಡಿದ್ದಾಳೆ. ಇದರಿಂದ ಭಯಗೊಂಡು ಆರೋಪಿ ಪರಾರಿಯಾಗಿದ್ದಾನೆ. ಈ ಸಂಬಂಧ ಬೆಳ್ಳಂದೂರು ಠಾಣೆಗೆ ಸಂತ್ರಸ್ಥ ಮಹಿಳೆಯ ಗಂಡ ದೂರು ನೀಡಿದ್ದು, ದೂರಿನ್ವಯ ಆರೋಪಿಯನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.