ಬೆಂಗಳೂರು: ಹೆಬ್ಬಾಳ ಬಳಿಯಿರುವ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ನಡೆದ ಘಟನೆ ಸಂಬಂಧ ದೂರು ನೀಡಲು ಹೋದ ಮಹಿಳೆಯಿಂದ ಪ್ರಕರಣವನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ನೊಂದ ಮಹಿಳೆ ಫೇಸ್ಬುಕ್ ಲೈವ್ ಬಂದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.
ಹೆಬ್ಬಾಳ ಬಳಿಯಿರುವ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ನಿನ್ನೆ ಕ್ಷುಲ್ಲಕ ಕಾರಣಕ್ಕೆ ಜಾನ್ಸನ್ ಮತ್ತು ಚಂಚಲ್ ಎಂಬುವರ ನಡುವೆ ರಾದ್ಧಾಂತವಾಗಿತ್ತು. ಅಕ್ಕ-ಪಕ್ಕದಲ್ಲೇ ಫ್ಲ್ಯಾಟ್ ಹೊಂದಿದ್ದ ಚಂಚಲ್ ಹಾಗೂ ಜಾನ್ಸನ್, ನೀವು ಈ ಜಾಗಕ್ಕೆ ಬರಬೇಡಿ, ಇದು ನಮ್ಮ ಜಾಗ ಎಂದು ದಿನೇ ದಿನೇ ಕಿರಿಕ್ ಮಾಡುತ್ತಿದ್ದನಂತೆ. ಅಷ್ಟೇ ಅಲ್ಲದೆ, ಅಪಾರ್ಟ್ಮೆಂಟ್ ಆಡಳಿತ ಮಂಡಳಿ ಅನುಮತಿ ಪಡೆದು ಫ್ಲ್ಯಾಟ್ಗಳಿಗೆ ಚಂಚಲ್ ಬ್ಯುಸಿನೆಸ್ ಪಾಂಪ್ಲೆಟ್ಸ್ ಹಾಕಲಾಗಿದ್ದು, ಇದೇ ವಿಚಾರವಾಗಿ ಜಾನ್ಸನ್ ಮತ್ತೆ ಕಿರಿಕ್ ತೆಗೆದು, ಮನೆಗೆ ನುಗ್ಗಿ ಮೊಬೈಲ್ ಕಿತ್ತುಕೊಂಡು ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ.
ಓದಿ: ಕ್ಷುಲ್ಲಕ ಕಾರಣಕ್ಕೆ ಕಿರಿಕ್.. ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದವನ ವಿರುದ್ಧ ದೂರು..
ಈ ಸಂಬಂಧ ನೊಂದ ಮಹಿಳೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದ್ದಾಳೆ. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೆ ಮುಂದೆ ನೋಡಿದ್ದಾರೆ ಎಂದು ಆರೋಪಿಸಲಾಗಿದೆ. ಆಗ ಚಂಚಲ್ ಫೇಸ್ಬುಕ್ ಲೈವ್ ಬಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು, ಎನ್ಸಿಆರ್ ದಾಖಲು ಮಾಡಿಕೊಂಡಿದ್ದು, ಜಾನ್ಸನ್ಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.