ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ''ಕೇಂದ್ರ ಅಕ್ಕಿ ಕೊಡಲು ನಿರಾಕರಣೆ ಹಿನ್ನೆಲೆ, ಕೇಂದ್ರದ ಸಾಂಸ್ಥಿಕ ಸಂಸ್ಥೆಗಳ ಮೂಲಕ ಅಕ್ಕಿ ಕೊಡಲು ಪ್ಲಾನ್ ರೂಪಿಸಿದ್ದೇವೆ'' ಎಂದು ಆಹಾರ ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.
ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಶಾಲಾ ಕಟ್ಟಡ ಉದ್ಘಾಟನೆ ಮಾಡಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ''ಶಿಘ್ರದಲ್ಲೇ ಅಕ್ಕಿಯನ್ನು ಕೊಡುತ್ತೇವೆ. ನಮ್ಮದೇಯಾದಂತಹ ಪ್ಲಾನ್ ರೂಪಿಸಿದ್ದೇವೆ. ಬೆಳಗ್ಗೆ ಒಂದು ಸಭೆ ಮಾಡಿದ್ದೇನೆ. ಸಂಜೆ ವೇಳೆ ಮುಖ್ಯಮಂತ್ರಿಗಳ ಜೊತೆಗೆ ಪೈನಲ್ ಮಾತುಕತೆ ನಡೆಸಲಿದ್ದೇವೆ. ಆದಾದ ನಂತರ, 15 ರಿಂದ 20 ದಿನಗಳ ಒಳಗೆ ಸಮಯ ನೀಡುತ್ತೇವೆ. ಅಷ್ಟರೊಳಗೆ ಅಕ್ಕಿ ಪೂರೈಕೆ ಮಾಡಬೇಕು ಎಂದು ಹೇಳಿದ್ದೇವೆ'' ಎಂದು ಮುನಿಯಪ್ಪ ತಿಳಿಸಿದರು.
''ಆದಷ್ಟು ಬೇಗ ಅಕ್ಕಿಯನ್ನು ಕೊಡುವ ವ್ಯವಸ್ಥೆ ಮಾಡಲಾಗುವುದು. ಕೇಂದ್ರದ ಬಳಿ ಅಕ್ಕಿ ಸ್ಟಾಕ್ ಇದ್ದರು ಕೊಡಲಿಲ್ಲವೆಂದರೆ, ನಮ್ಮದೇಯಾದ ದಾರಿಯಲ್ಲಿ ಹೋಗುತ್ತೇವೆ. ಇನ್ನು ದಕ್ಷಿಣ ಕರ್ನಾಟಕದಲ್ಲಿ ಎರಡು ಕೆಜಿ ರಾಗಿ, ಎಂಟು ಕೆಜಿ ಅಕ್ಕಿ ಕೊಡ್ತೇವೆ. ಉತ್ತರ ಕರ್ನಾಟಕಕ್ಕೆ ಎರಡು ಕೆಜಿ ಜೋಳ ಎಂಟು ಕೆಜಿ ಅಕ್ಕಿ ಕೊಡ್ತೇವೆ. ಅಕ್ಕಿಯನ್ನೇ ಕೊಡುವ ವ್ಯವಸ್ಥೆ ಮಾಡಲಾಗುವುದು, ಸ್ವಲ್ಪ ತಡವಾಗಬಹುದು ಅಷ್ಟೇ'' ಎಂದರು.
ನಿಮ್ಮ ಗ್ಯಾರಂಟಿಯನ್ನು ಬಿಜೆಪಿ ಫುಲ್ ಫಿಲ್ ಮಾಡಬೇಕಾ ಎನ್ನುವ ಬಿಜೆಪಿ ನಾಯಕ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ ಅವರು, ''ನಾವು ಕೇಳ್ತಿರೋದು ಭಾರತ ಸರ್ಕಾರವನ್ನು, ಯಾವ ರಾಜ್ಯದಲ್ಲಿ ಅಕ್ಕಿ ಜಾಸ್ತಿ ಇದೆಯೋ ಅದನ್ನು ಶೇಖರಣೆ ಮಾಡಬೇಕು. ಯಾವ ರಾಜ್ಯಕ್ಕೆ ಅಕ್ಕಿ ಬೇಕಾಗಿದೆ. ಅದನ್ನು ಕೊಡೋದು ಕೇಂದ್ರ ಸರ್ಕಾರದ ಕೆಲಸ'' ಎಂದು ತಿರುಗೇಟು ನೀಡಿದರು.
ನಿನ್ನೆ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಫುಲ್ಫಿಲ್ ಮಾಡೋಕೆ ನಾವು ಅಕ್ಕಿ 10 ಕೆಜಿ ಕೊಡ್ತಿವಿ ಎಂದು ಹೇಳಿದ್ದೇವೆಯಾ ಎಂದು ಮಾಜಿ ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಚಿವ ಮುನಿಯಪ್ಪ ಅವರು ಕೇಂದ್ರ ಅಕ್ಕಿ ಕೊಡಲು ನಿರಾಕರಿಸಿ, ರಾಜಕೀಯ ಮಾಡುತ್ತಿದೆ ಎಂಬ ಹೇಳಿಕೆಗೆ ಆರ್.ಅಶೋಕ್ ಶುಕ್ರವಾರ ಮಾಧ್ಯಮಗಳಿಗೆ ಈ ಪ್ರತಿಕ್ರಿಯೆ ನೀಡಿದ್ದರು.
''ಈಗಾಗಲೇ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮೂರು ದಿನಗಳ ಹಿಂದೆ ಪ್ರೆಸ್ ಮೀಟ್ ಮಾಡಿದ್ದಾರೆ. ಕೇಂದ್ರದ ಬಳಿ ಇರೋ ಅಕ್ಕಿಯನ್ನು ಯಾವ ರಾಜ್ಯಗಳಿಗೆ ಕೊಡಬೇಕು ಎಂದು ತಿಳಿಸಿದ್ದಾರೆ. ಮುಂಗಾರು ಮಳೆ ವಿಳಂಬವಾಗುತ್ತಿದೆ. ಪ್ರವಾಹ, ಬರ ಬಂದಂತಹ ಸಂದರ್ಭದಲ್ಲಿ ಅಕ್ಕಿ ಕೊಡಬೇಕಿದೆ. ಯಾವುದಾದರೂ ರಾಜ್ಯಕ್ಕೆ 10 ಕೆಜಿ ಅಕ್ಕಿಯನ್ನ ಕೊಟ್ಟಿದ್ದರೆ ಕಾಂಗ್ರೆಸ್ನವರು ಹೇಳಲಿ. ಇವರೇನು ತುಂಬಾ ವಿಶೇಷವೇ ಎಂದು ಆರ್ ಅಶೊಕ್ ಗರಂ ಆಗಿದ್ದರು.
ಇದನ್ನೂ ಓದಿ: ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ, ನಾವೇನು ಪುಕ್ಕಟ್ಟೆ ಕೇಳಿದ್ವಾ? : ಸಿಎಂ ಸಿದ್ದರಾಮಯ್ಯ