ಬೆಂಗಳೂರು: ಸದ್ಯ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೊಸ ಹೆಜ್ಜೆ ಇಟ್ಟಿದ್ದಾರೆ.
ಸೈಬರ್ ಕ್ರೈಂನಲ್ಲಿ ಅಪ್ರಾಪ್ತರ ಫೋಟೋ ದುರ್ಬಳಕೆ ಮಾಡಿದರೆ ಅವರ ಮೇಲೆ ಕೇಸ್ ಬೀಳೋದು ಗ್ಯಾರಂಟಿಯಾಗಿದೆ. ಪೋಕ್ಸೋ ಕಾಯ್ದೆಯಡಿ ಸುಮೊಟೋ ಕೇಸ್ ದಾಖಲು ಮಾಡಲು ಚಿಂತನೆ ನಡೆದಿದೆ.
ಓದಿ: ಟೊರೊಂಟೊದಲ್ಲಿ ಬಲೂಚಿಸ್ತಾನದ ಹೋರಾಟಗಾರ್ತಿ ಶವವಾಗಿ ಪತ್ತೆ
ಇಷ್ಟು ದಿನ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸುತ್ತಿದ್ದರು. ಆದರೆ ಪೋಕ್ಸೋ ಪ್ರಕರಣಕ್ಕೆ ಪೊಲೀಸರು ಚಿಂತನೆ ಮಾಡಿದ್ದು, ಈಗಾಗಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುಮೊಟೋ ಕೇಸ್ ದಾಖಲು ಮಾಡಿ ಎಂದು ಮೌಖಿಕ ಆದೇಶ ಹೊರಡಿಸಿದ್ದಾರೆ.
ಜೊತೆಗೆ ಪ್ರಕರಣದ ಆರೋಪಿಗಳಿಗೆ ಬೇಲ್ ಕೂಡ ಸಿಗುವುದಿಲ್ಲ ಎಂದು ನಗರ ಪೊಲೀಸ್ ಹೆಚ್ಚುವರಿ ಆಯುಕ್ತ ಸೌಮೇಂದ್ರ ಮುಖರ್ಜಿ ಮಾಹಿತಿ ನೀಡಿದ್ದಾರೆ.