ETV Bharat / state

ಪಿಎಫ್ಐನಿಂದ ಬಡವರಿಗೆ ಆರೂವರೆ ಕೋಟಿ ಮೌಲ್ಯದ ಆಹಾರ - ಪಡಿತರ ಹಂಚಿಕೆ

ಪಿಎಫ್ಐ ಕಾರ್ಯಕರ್ತರು ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿಯೂ ಬಡವರು ಮತ್ತು ನಿರ್ಗತಿಕರನ್ನು ಗುರುತಿಸಿ ಅವರಿಗೆ ಅಕ್ಕಿ, ಬೇಳೆ, ಎಣ್ಣೆ, ಈರುಳ್ಳಿ, ಉಪ್ಪು, ಹುಣಸೆಹಣ್ಣು ಸೇರಿದಂತೆ ಅಗತ್ಯ ದಿನಸಿ ಪದಾರ್ಥಗಳನ್ನು ಒಳಗೊಂಡ ರೇಷನ್ ಕಿಟ್ ವಿತರಣೆ ಮಾಡಿದೆ.

author img

By

Published : May 18, 2020, 6:49 PM IST

PFI
ಪಿಎಫ್ಐನಿಂದ ಬಡವರಿಗೆ ಆರೂವರೆ ಕೋಟಿ ಮೌಲ್ಯದ ಆಹಾರ-ಪಡಿತರ ಹಂಚಿಕೆ

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಾದ ಬಳಿಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ 6.42 ಕೋಟಿ ಮೌಲ್ಯದ ಆಹಾರ ಮತ್ತು ಪಡಿತರವನ್ನು ಹಂಚಿಕೆ ಮಾಡಿದೆ.

ಪಿಎಫ್ಐ ಕಾರ್ಯಕರ್ತರು ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿಯೂ ಬಡವರು ಮತ್ತು ನಿರ್ಗತಿಕರನ್ನು ಗುರುತಿಸಿ ಅವರಿಗೆ ಅಕ್ಕಿ, ಬೇಳೆ, ಎಣ್ಣೆ, ಈರುಳ್ಳಿ, ಉಪ್ಪು, ಹುಣಸೆಹಣ್ಣು ಸೇರಿದಂತೆ ಅಗತ್ಯ ದಿನಸಿ ಪದಾರ್ಥಗಳನ್ನು ಒಳಗೊಂಡ ರೇಷನ್ ಕಿಟ್ ವಿತರಣೆ ಮಾಡಿದೆ. ಈವರೆಗೆ ರಾಜ್ಯದ 2 ಲಕ್ಷದ 16 ಸಾವಿರದ 474 ಜನರಿಗೆ ಜಾತಿ ಧರ್ಮ ಪರಿಗಣಿಸದೇ ಪಡಿತರ ಹಂಚಿಕೆ ಮಾಡಿದೆ.

ಅದೇ ರೀತಿ, ಲಾಕ್​ಡೌನ್ ಅವಧಿಯಲ್ಲಿ ಆಹಾರ, ನೀರು ಇಲ್ಲದೇ ಕಂಗಾಲಾಗಿದ್ದ ವಲಸೆ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರಂತಹ 46 ಲಕ್ಷ ಜನರಿಗೆ 1 ಲಕ್ಷದ 85 ಸಾವಿರ ಸಿದ್ದ ಆಹಾರ ಪೊಟ್ಟಣಗಳನ್ನು ನೀಡಿ ಹಸಿವು ಇಂಗಿಸಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಹೀಗೆ ದಿನಸಿ - ಆಹಾರ ನೀಡಿದ್ದೇವಾದರೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಪಡಿತರ ವಿತರಿಸಿದ್ದೇವೆ ಎನ್ನುತ್ತಾರೆ ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.