ಬೆಂಗಳೂರು/ನವದೆಹಲಿ: ದೇಶದಲ್ಲಿ ತೈಲ ಬೆಲೆ ಪ್ರತಿನಿತ್ಯ ಪರಿಷ್ಕರಿಸಲ್ಪಡುತ್ತವೆ. ಬೆಳಗ್ಗೆ 6:00 ಗಂಟೆಗೆ ಹೊಸ ಬೆಲೆಗಳನ್ನು ನಾವು ಕಾಣುತ್ತಿದ್ದೇವೆ. ಈ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ ನೋಡಿ..
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಯಥಾಸ್ಥಿತಿಯಲ್ಲಿದೆ. ಪೆಟ್ರೋಲ್ ದರ- 101.96ರೂ,, ಡೀಸೆಲ್ ದರ- 87.91ರೂ., ಸ್ಪೀಡ್ ಪೆಟ್ರೋಲ್ ದರ- 104.90 ರೂ. ಇದೆ. ಮೈಸೂರಿನಲ್ಲಿ ತೈಲ ದರ ಸ್ಥಿರವಾಗಿದೆ. ಪೆಟ್ರೋಲ್ ದರ-101.44 ರೂ., ಡೀಸೆಲ್ ದರ- 87.43ರೂ. ಇದೆ. ಮಂಗಳೂರಿನಲ್ಲಿ ಪೆಟ್ರೋಲ್-101.77 ( 56 ಪೈಸೆ ಹೆಚ್ಚಳ)ರೂ., ಡೀಸೆಲ್- 87.70 ( 50 ಪೈಸೆ ಹೆಚ್ಚಳ) ರೂ. ಇದೆ.
ಹುಬ್ಬಳ್ಳಿಯ ಪೆಟ್ರೋಲ್, ಡೀಸೆಲ್ ದರದಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, ಪೆಟ್ರೋಲ್ ದರ-101.65ರೂ., ಡೀಸೆಲ್ ದರ- 87.65ರೂ. ಇದೆ. ದಾವಣಗೆರೆಯಲ್ಲೂ ತೈಲ ದರದಲ್ಲಿ ಯಥಾಸ್ಥಿತಿ ಇದ್ದು, ಪೆಟ್ರೋಲ್ ದರ-103.54 ರೂ., ಡಿಸೇಲ್ ದರ- 89.52 ರೂ. ಇದೆ.
ಇದನ್ನೂ ಓದಿ: ರಾಜ್ಯದ ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ