ಬೆಂಗಳೂರು: ಬಿಬಿಎಂಪಿ ಆವರಣದಲ್ಲಿ ನಮಾಜ್ಗೆ ಅವಕಾಶ ಕೊಡಿ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮನವಿ ಮಾಡಿದ್ದಾರೆ.
ನಾವು ನಿತ್ಯ 5 ಬಾರಿ ನಮಾಜ್ ಮಾಡಬೇಕು. ಸುತ್ತಮುತ್ತ ನಮಾಜ್ಗೆ ಅವಕಾಶ ಇಲ್ಲ. ಹೀಗಾಗಿ ಪಾಲಿಕೆ ಆವರಣದಲ್ಲೇ ನಮಾಜ್ಗೆ ಕೊಠಡಿ, ಸ್ಥಳವಾಕಾಶ ಕೊಡಿ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಪ್ರಸ್ತಾವನೆ ಸಲ್ಲಿಸಲಿದ್ದಾರೆ.
ಇನ್ನು ಈ ಬೇಡಿಕೆ ಸಹಜವಾಗಿ ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾಗಲಿದೆ. ಆದರೆ, ಪಾಲಿಕೆ ಆಯುಕ್ತರಿಗೆ ನಮಾಜ್ಗೆ ಸ್ಥಳವಕಾಶ ಕೇಳಿ ಪ್ರಸ್ತಾವನೆ ಕೊಡಲು ನಿರ್ಧಾರವಾಗಿದ್ದು, ಇದರಿಂದ ಕಾರ್ಪೋರೇಟರ್, ಬೆಂಬಲಿಗರು, ಅಧಿಕಾರಿಗಳಿಗೆ ಅನುಕೂಲ ಆಗಲಿದೆ ಎಂದು ಈ ನಿರ್ಧಾರ ಮಾಡಲಾಗಿದೆ ಎಂದು ವಾಜಿದ್ ಹೇಳಿದ್ದಾರೆ.