ಬೆಂಗಳೂರು: ಲಾಕ್ಡೌನ್ ನಿಯಮಗಳ ಅನ್ವಯ ಹೋಟೆಲ್ಗಳಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿದೆ. ಆದ್ರೆ ಇದ್ಯಾವುದನ್ನೂ ಲೆಕ್ಕಿಸದ ಜನ ಅಕ್ಕ - ಪಕ್ಕದಲ್ಲಿ ಕುಳಿತು ಹೋಟೆಲ್ ಗಳಲ್ಲಿ ಟಿಫನ್ ಮಾಡ್ತಿದ್ದಾರೆ.
ಕೊರೊನಾ ಸೋಂಕು ಪತ್ತೆಯಾದ ಏರಿಯಾಗಳನ್ನ ಸೀಲ್ಡೌನ್ ಮಾಡಿ ಪೊಲೀಸರು ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಯಶವಂತಪುರದ ತ್ರಿವೇಣಿ ರಸ್ತೆ ಸಂಪೂರ್ಣ ಸೀಲ್ಡೌನ್ ಆಗಿದ್ದು, ಆದರೆ ಇಂತಹ ಏರಿಯಾದಿಂದಲೇ ಎಂದಿನಂತೆ ಹೊರಬರುತ್ತಿರುವ ಜನ ಮಾಸ್ಕ್ ಇಲ್ಲದೇ ಓಡಾಟ ಮಾಡಿ ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆ.
ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪಾಸಿಟಿವ್ ಪ್ರಕರಣ ದಾಖಲಾದ ಕಾರಣ, ಎರಡು ಏರಿಯಾವನ್ನು ಸೀಲ್ಡೌನ್ ಮಾಡಲಾಗಿತ್ತು. ಸದ್ಯ ಯಶವಂತಪುರ ಬಳಿಯ ಮಂಗಳ ನರ್ಸಿಂಗ್ ಹೋಮ್ನಲ್ಲಿ ಮಹಿಳೆಯೊಬ್ಬರು ಚಿಕೂನ್ ಗುನ್ಯಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ, ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.
ಹೀಗಾಗಿ ಅವರನ್ನು ಚಿಕಿತ್ಸೆಗೆ ಒಳಪಡಿಸಿ ವೈದ್ಯರು, ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಿ ನರ್ಸಿಂಗ್ ಹೋಂ ಸೀಲ್ ಡೌನ್ ಮಾಡಿದ್ರು. ಸದ್ಯ ಜನರು ಓಡಾಟ ನಡೆಸಬಾರದೆಂದು ತಿಳಿಸಿದರೂ ಕೂಡಾ ಮತ್ತೆ, ಓಡಾಟ ಮಾಡಿ ಆತಂಕ ಸೃಷ್ಟಿಸಿದ್ದಾರೆ.