ಬೆಂಗಳೂರು: ಕೊರೊನಾ ತಾಂಡವವಾಡುತ್ತಿರುವ ಈ ಸಮಯದಲ್ಲಿ ಜನರು ವೈರಸ್ ಇರುವುದನ್ನೂ ಮರೆತು ಫ್ರೀ ತರಕಾರಿಗಾಗಿ ಮುಗಿಬಿದ್ದ ಘಟನೆ ನಡೆದಿದೆ.
ವಿಲ್ಸನ್ ಗಾರ್ಡನ್‌ನಲ್ಲಿ ಉಚಿತವಾಗಿ ತರಕಾರಿ ನೀಡ್ತಾರೆ ಅಂತಾ ಗುಂಪು ಗುಂಪಾಗಿ ಜನರು ಬಂದಿದ್ದು, ಕೊರೊನಾ ಮರೆತು ತರಕಾರಿ ಪಡೆಯಲು ಗಲಾಟೆ ಮಾಡಿದ ದೃಶ್ಯ ಕಂಡು ಬಂತು. ಹನುಮನ ಬಾಲದಂತೆ ಕ್ಯೂ ನಿಂತು, ಸಾಮಾಜಿಕ ಅಂತರವನ್ನೂ ಮರೆತು ಜನರು ತರಕಾರಿ ಕವರ್ ಪಡೆದರು.
ಇತ್ತ ಸ್ಥಳೀಯ ಪೊಲೀಸರು, ಪಾಲಿಕೆ ಮಾರ್ಷಲ್ಗಳು ಎಲ್ಲಿ ಹೋದ್ರು? ಯಾಕೆ ಯಾರು ಕ್ರಮ ಕೈಗೊಳ್ತಿಲ್ಲ ಎಂಬ ಪ್ರಶ್ನೆ ಮೂಡಿದೆ.