ETV Bharat / state

ಜನತೆ ನಮ್ಮನ್ನು ಪ್ರತಿಪಕ್ಷದಲ್ಲಿ ಕೂರಲು ಹೇಳಿದ್ದಾರೆ, ವಿಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ: ರವಿಕುಮಾರ್ - ರಾಜ್ಯ ಬಿಜೆಪಿ ಕಚೇರಿ

ಸಚಿವರ ಭೇಟಿಗೆ ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಶಾಸಕರಾದವರ ಸ್ಥಿತಿಯೇ ಹೀಗಿದ್ದರೆ ಜನಸಾಮಾನ್ಯರ ಸ್ಥಿತಿ ಏನು? ಬಸವರಾಜ ರಾಯರೆಡ್ಡಿ, ಕೃಷ್ಣಪ್ಪ, ಬಿ ಆರ್ ಪಾಟೀಲ್ ಈ ರೀತಿ ಹಿರಿಯ ಶಾಸಕರು ಪರಿಸ್ಥಿತಿ ಹೀಗಿರುವಾಗ ಹೊಸ ಶಾಸಕರ ಪರಿಸ್ಥಿತಿ ಹೇಗಿರಬಹುದು ಎಂದು ಬಿಜೆಪಿ ಮುಖಂಡ ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

Ravikumar spoke to reporters.
ವಿಪ ಸದಸ್ಯ ರವಿಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By

Published : Jul 25, 2023, 8:04 PM IST

ಬೆಂಗಳೂರು: ಆಪರೇಷನ್​ನಂತಹ ಯಾವುದೇ ಗೋಜಿಗೆ ನಾವು ಹೋಗುವುದಿಲ್ಲ, ನಮಗೆ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಜನ ಹೇಳಿದ್ದಾರೆ. ಹಾಗಾಗಿ ನಾವು ವಿಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ಜನರ ಸಂಕಷ್ಟಕ್ಕೆ ನೆರವಾಗಲೂ ಗಮನ ಹರಿಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಗಾಪುರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ಸರ್ಕಾರದ ಆಪರೇಷನ್ ಮಾಡುವ ಕುರಿತಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದರು. ಬಿಜೆಪಿ ಯಾವುದೇ ಗೋಜಿಗೆ ಹೋಗುವುದಿಲ್ಲ. ರಾಜ್ಯದಲ್ಲಿ ಮಳೆ ಬರುತ್ತಿದೆ, ರೈತರು ಕಷ್ಟದಲ್ಲಿದ್ದಾರೆ, ಇದರ ಬಗ್ಗೆ ನಾವು ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇವೆ. ಇನ್ನು ಅನೇಕ ವಿಷಯಗಳಿವೆ. ಆ ಕಡೆ ನಾವು ಗಮನ ಹರಿಸುತ್ತಿದ್ದೇವೆ. ಸಭೆ ನಡೆಸಿ ಚರ್ಚೆ ಮಾಡುತ್ತಿದ್ದೇವೆ. ಜನರ ಸಂಕಷ್ಟದ ಸಮಯದಲ್ಲಿ ಯಾವ ರೀತಿಯಲ್ಲಿ ಮುಂದುವರೆಯಬೇಕು ಎಂದು ಯೋಚನೆ ಮಾಡುತಿದ್ದೇವೆ ಎಂದು ತಿಳಿಸಿದರು.

ಸರ್ಕಾರವನ್ನು ಹುಮ್ಮಸ್ಸಿನಲ್ಲಿ ರಚನೆ ಮಾಡಿದ್ದರು. ಆದರೆ ಆ ಹುಮ್ಮಸ್ಸು ಈಗ ಕಾಣುತ್ತಿಲ್ಲ. 30ಕ್ಕೂ ಹೆಚ್ಚು ಜನ ಶಾಸಕರು ಪತ್ರ ಬರೆದ ಬಗ್ಗೆ ಮಾಹಿತಿ ಇದೆ. ನಮಗೆ ಅನುದಾನ ಸಿಗುತ್ತಿಲ್ಲ. ನಾವು ಹೇಳಿದ ರೀತಿ ವರ್ಗಾವಣೆ ಮಾಡುತ್ತಿಲ್ಲ. ಸಚಿವರು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ. ಒಂದೊಂದು ವರ್ಗಾವಣೆಗೆ ನಾಲ್ಕೈದು ಜನ ಮಂತ್ರಿಗಳು ಪತ್ರ ಕೊಟ್ಟರೂ ವರ್ಗಾವಣೆ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಶಾಸಕರಿಗೆ ಇಷ್ಟು ಬೇಜಾರಾಗಿದ್ದರೆ, ಜನರಿಗೆ ಎಷ್ಟು ಬೇಜಾರಾಗಿರಬೇಡ. ಇದನ್ನು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಸರ್ಕಾರ ಇದೆಯಾ? 30 ಜನ ಶಾಸಕರು ಪತ್ರಕ್ಕೆ ಸಹಿ ಹಾಕಿದ್ದಾರೆ, ನಮ್ಮ ಕೆಲಸಗಳನ್ನು ಮಂತ್ರಿಗಳು ಮಾಡಿಕೊಡುತ್ತಿಲ್ಲ. ಮಂತ್ರಿಗಳು ಭೇಟಿಗೂ ಅವಕಾಶ ಕೊಡುತ್ತಿಲ್ಲ. ಅಹಂಕಾರದಿಂದ ವರ್ತನೆ ಮಾಡುತ್ತಿದ್ದಾರೆ. ನಮ್ಮ ಯಾವುದೇ ಚಟುವಟಿಕೆಗಳು ಕಾರ್ಯಗಳು ಆಗುತ್ತಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ರವಿಕುಮಾರ್​ ಆರೋಪಿಸಿದರು.

ಸಚಿವರ ಭೇಟಿಗೆ ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಶಾಸಕರಾದವರ ಸ್ಥಿತಿಯೇ ಹೀಗಿದ್ದರೆ ಜನಸಾಮಾನ್ಯರ ಸ್ಥಿತಿ ಏನು? ಬಸವರಾಜ ರಾಯರೆಡ್ಡಿ, ಕೃಷ್ಣಪ್ಪ, ಬಿ ಆರ್ ಪಾಟೀಲ್ ಈ ಹಿರಿಯ ಶಾಸಕರು ಪರಿಸ್ಥಿತಿ ಹೀಗಿರುವಾಗ ಹೊಸ ಶಾಸಕರ ಪರಿಸ್ಥಿತಿ ಹೇಗಿರಬಹುದು. ಮಂತ್ರಿಗಳು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ ಎಂದು ದೂರಿದರು.

ಮಳೆ ಎಲ್ಲಾ ಕಡೆ ಬರುತ್ತಿದೆ. ಹಲವು ಕಡೆ ಪ್ರವಾಹ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಬಿತ್ತನೆಯಾಗಿಲ್ಲ. ರೈತರ ಪರಿಸ್ಥಿತಿ ಕಷ್ಟದಲ್ಲಿದೆ ಆಯೋಮಯವಾಗಿದೆ. ಇಂತಹ ಹಿನ್ನೆಲೆಯಲ್ಲಿ ತಾವು ಏನು ಮಾಡುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಜನಸಾಮಾನ್ಯರನ್ನು ಕೇಳುವ ಪರಿಸ್ಥಿತಿಯಲ್ಲೂ ಅವರಿಲ್ಲ. ಗ್ಯಾರಂಟಿಗಳನ್ನು ಬಿಟ್ಟು ಪ್ರಣಾಳಿಕೆಗಳಲ್ಲಿ ಹತ್ತಾರು ಭರವಸೆ ಹೇಳಿದ್ದೀರಿ. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ಖಾಲಿ ಹುದ್ದೆ ಭರ್ತಿ, ರೈತರ ಸಮಸ್ಯೆ, ಕಾರ್ಮಿಕರ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಿಸುತ್ತಿಲ್ಲ. ಕೇವಲ ಗ್ಯಾರಂಟಿಯಲ್ಲಿ ಮುಳುಗಿ ಹೋಗಿದೆ. ಹಾಗಾಗಿ ನಾನು ವಿನಂತಿ ಮಾಡುತ್ತೇನೆ. ಕೂಡಲೇ ಸರ್ಕಾರ ಇತರ ಸಮಸ್ಯೆಗಳ ಕಡೆಯೂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಉಡುಪಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಸ್ನಾನ ಮಾಡುವ ಖಾಸಗಿ ವಿಡಿಯೋವನ್ನು ಅನ್ಯ ಸಮುದಾಯದ ವಿದ್ಯಾರ್ಥಿನಿಯರು ಚಿತ್ರೀಕರಣ ಮಾಡಿದ್ದಾರೆ. ಇದನ್ನು ಯಾವುದಕ್ಕೆ ಬಳಕೆ ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಹಾಗಾಗಿ ವೈದ್ಯಕೀಯ ಶಿಕ್ಷಣ ಸಚಿವರು ಕೂಡಲೇ ಈ ಪ್ರಕರಣದ ತನಿಖೆ ಮಾಡಿಸಿ ಯಾರು ವಿಡಿಯೋ ಚಿತ್ರೀಕರಣ ಮಾಡಿದ್ದಾರೋ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರವಿಕುಮಾರ್​ ಆಗ್ರಹಿಸಿದರು.

ಇದನ್ನೂಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಮುಗಿದಿಲ್ಲ, ಅಷ್ಟರಲ್ಲೇ ಸ್ವಪಕ್ಷದವರಿಂದ ಅಪಸ್ವರ: ಜಿ ಟಿ ದೇವೇಗೌಡ ಟೀಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.