ETV Bharat / state

ಬೆಂಗಳೂರಲ್ಲಿ ಉತ್ತರ ಕರ್ನಾಟಕದ ರೊಟ್ಟಿ ಹಬ್ಬ... - uttara karnataka festivel

ಬೆಂಗಳೂರು ಮಹದೇವಪುರ ಸಮೀಪದ ಗರುಡಾಚಾರ್ ಪಾಳ್ಯದ ಸರ್ಕಾರಿ ಶಾಲೆಯಲ್ಲಿ ಮಹದೇವಪುರ ವಲಯದ ಉತ್ತರ ಕರ್ನಾಟಕ ಜನತೆಯ ಕ್ಷೇಮಾಭಿವೃದ್ಧಿ ಸಂಘದಿಂದ ಹೊಸ ವರ್ಷ ಮತ್ತು ಸಂಕ್ರಾಂತಿ ಅಂಗವಾಗಿ 'ರೊಟ್ಟಿ ಹಬ್ಬದ 12ನೇ ವಾರ್ಷಿಕ ಸಂಭ್ರಮಾಚರಣೆ' ಕಾರ್ಯಕ್ರಮ...

peopeles celebrating  new year and sankranti fest
ಶಾಸಕ ಅರವಿಂದ ಲಿಂಬಾವಳಿ
author img

By

Published : Jan 20, 2020, 4:46 AM IST

ಬೆಂಗಳೂರು: ನಾವೂ ಎಲ್ಲಿಗೆ ಹೋದರೂ ತವರು ಸಂಸ್ಕೃತಿ ಮರೆಯಬಾರದು. ರೊಟ್ಟಿ ಊಟದ ಅನುಭವ, ಖುಷಿ ನೀಡುತ್ತದೆ ಎಂದು ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ ಹೇಳಿದರು.

ಶಾಸಕ ಅರವಿಂದ ಲಿಂಬಾವಳಿ

ಇಲ್ಲಿನ ಮಹದೇವಪುರ ಸಮೀಪದ ಗರುಡಾಚಾರ್ ಪಾಳ್ಯದ ಸರ್ಕಾರಿ ಶಾಲೆಯಲ್ಲಿ ಮಹದೇವಪುರ ವಲಯದ ಉತ್ತರ ಕರ್ನಾಟಕ ಜನತೆಯ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಹೊಸ ವರ್ಷ ಮತ್ತು ಸಂಕ್ರಾಂತಿ ಅಂಗವಾಗಿ ರೊಟ್ಟಿ ಹಬ್ಬದ 12ನೇ ವಾರ್ಷಿಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತರ ಕರ್ನಾಟಕ ಜನರು ಬಹಳ ಸಹೃದಯ ಸ್ವಭಾವದವರು. ನಾವು ಯಾವುದೇ ಭಾಗದಲ್ಲಿ ಹುಟ್ಟಲಿ, ಪ್ರಾಂತೀಯ ಭಾಷಾ ರೀತಿ ಹೇಗೇ ಇರಲಿ, ರಾಜ್ಯದ ಯಾವುದೇ ಮೂಲೆಯಲ್ಲಿದ್ದರು ನಾವೆಲ್ಲರೂ ಕನ್ನಡಿಗರು. ಈ ಭಾಗದ ರೊಟ್ಟಿ ವಿದೇಶಕ್ಕೆ ಕಳಿಸುವ ಆಹಾರವಾಗಿದೆ. ಆರೋಗ್ಯ ಕರವಾದ ಜೀವನಕ್ಕಾಗಿ ಉತ್ತರ ಕರ್ನಾಟಕ ಆಹಾರ ಉತ್ತಮ ಎಂದು ಅಭಿಪ್ರಾಯಪಟ್ಟರು.

ಇಲ್ಲಿನ ಚಟುವಟಿಕೆಗಳ ಅನುಕೂಲಕ್ಕಾಗಿ ಸರ್ಕಾರವೂ ನಿವೇಶನ ನೀಡಿ, ಭವನ ನಿರ್ಮಿಸಿಕೊಡುವಂತೆ ಶಾಸಕರಲ್ಲಿ ಸಂಘದಿಂದ ಮನವಿ ಮಾಡಿದರು.

ಮಲೇಷಿಯಾದಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಬಂಗಾರ ಪದಕ ಗೆದ್ದ ವಿಜೇತರಿಗೆ ಹಾಗೂ ಗಿನ್ನಿಸ್‌ ದಾಖಲೆಗೆ ಸೇರಿರುವ ಡ್ಯಾನ್ಸ್ 7 ದಿ ಆರ್ಟ್ ಫ್ಯಾಕ್ಟರಿ ತಂಡದವರಿಗೆ ಸನ್ಮಾನ ಮಾಡಲಾಯಿತು.

ಎಲ್ಲರೂ ಕಡಕ್ ರೊಟ್ಟಿ, ಶೇಂಗಾ ಚಟ್ನಿ, ಎಣ್ಣಿ ಬದನೆಕಾಯಿ, ಕೆನೆ ಮೊಸರು, ಬೆಲ್ಲದ ಪಾಯಾಸ ಹೀಗೆ ಹತ್ತು ಹಲವು ಉತ್ತರ ಕರ್ನಾಟಕ ಭಾಗದ ಖ್ಯಾದ್ಯಗಳನ್ನು ಸವಿಯಲಾಯಿತು. ‌ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ನೆರೆದಿದ್ದ ಜನರು ಸಂತಸ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಕೆಂಗೇರಿಯ ಶಿವಾನಂದ ಸ್ವಾಮೀಜಿ, ಸಂಸದ ಪಿ.ಸಿ ಮೋಹನ್, ಶಾಸಕ ಬೈರತಿ ಬಸವರಾಜ್, ಹಾಸ್ಯ ಕಲಾವಿದರು ರವಿ ಬಜಂತ್ರಿ, ರಾಜ್ಯ ಕಾರ್ಯಕಾರಣಿ ಸದಸ್ಯ ಅನಂತ ರಾಮಯ್ಯ ಇದ್ದರು.

Intro:ಮಹದೇವಪುರ:-

ಖಡಕ್ ರೊಟ್ಟಿ, ಸಖತ್ ಮನರಂಜನೆ.

ನಮ್ಮ ತವರು ಸಂಸ್ಕೃತಿಯನ್ನು ಎಲ್ಲಿಗೆ ಹೋದರೂ ಅದನ್ನು ಮರೆಯ ಬಾರದು ಎಂದು ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ ಸಲಹೆ ನೀಡಿದರು.

ಮಹದೇವಪುರದ ಸಮೀಪದ ಗರುಡಾಚಾರ್ ಪಾಳ್ಯದ ಸರ್ಕಾರಿ ಶಾಲೆಯಲ್ಲಿ ಮಹದೇವಪುರ ವಲಯದ ಉತ್ತರ ಕರ್ನಾಟಕ ಜನತೆಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ರೊಟ್ಟಿ ಹಬ್ಬದ 12ನೇ ವಾರ್ಷಿಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತರ ಕರ್ನಾಟಕ ಜನರು ಬಹಳ ಸಹೃದಯ ಸ್ವಬಾವ ಉಳ್ಳವರು, ನಾವು ಯವದೇ ಭಾಗದಲ್ಲಿ ಹುಟ್ಟಿದರು ನಮ್ಮ ಪ್ರಾಂತೀಯ ಭಾಷಾ ರೀತಿ ಹೇಗೆ ಇದ್ದರೂ ರಾಜ್ಯದ ಯಾವುದೇ ಮೂಲೆಯಲ್ಲಿ ಬದುಕಿತ್ತಿದ್ದರು ನಾವೆಲ್ಲರೂ ಕನ್ನಡಿಗರೆ, ಎಲ್ಲರೂ ಪ್ರೀತಿಯಿಂದ ಇರಬೇಕು ಎಂದು ಸೂಚಿಸಿದರು.

ಉತ್ತರ ಕರ್ನಾಟಕ ವಲಸೆ ಬಂದು
ಬೆಂಗಳೂರು ನಗರದಲ್ಲಿ ನೆಲಸಿರುತ್ತಾರೋ ಹಾಗೂ ಬೆಂಗಳೂರು ನಲ್ಲಿ ಹುಟ್ಟಿದ್ದಾರೊ ಅಂತಹ ಅವರು ತವರು ಭಾಗದ ಪದ್ದತಿಯನ್ನು ಮರೆಯ ಬಾರದು ಎಂದು ಸಲಹೆ ನೀಡಿದರು.

ಉತ್ತರ ಕರ್ನಾಟಕದಲ್ಲಿ ತಯಾರಾಗುವ ರೊಟ್ಟಿಯನ್ನು ವಿದೇಶಕ್ಕೆ ಕಳಿಸುವ ಆಹಾರವಾಗಿದೆ, ಆರೋಗ್ಯ ಕರವಾದ ಜೀವನಕ್ಕಾಗಿ ಉತ್ತರ ಕರ್ನಾಟಕ ಆಹಾರ ಉತ್ತಮ ಆಹಾರ ಎಂದು ಹೇಳಿದರು.

Body:ಎಲ್ಲೆಗೇ ಹೋದರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸ್ವಭಾವ ಜೀವಿಗಳು ಉತ್ತರ ಕರ್ನಾಟಕ ಜನರು ಎಂದು ಹೇಳಿದರು.

ಮಹದೇವಪುರ ವಲಯದಲ್ಲಿ ನೆಲಸಿರುವ ಉತ್ತರ ಕರ್ನಾಟಕದ ಜನತೆಯ ಕ್ಷೇಮಾಭಿವೃದ್ಧಿ ಸಂಘ ಚಟುವಟಿಕೆಗಳ ಅನುಕೂಲಕ್ಕಾಗಿ ಸರ್ಕಾರದ ಜಾಗ ನೀಡಿ ಅದರಲ್ಲಿ ಭವನ ನಿರ್ಮಿಸಿ ಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಮಲೇಷಿಯಾದಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಬಂಗಾರ ಪದಕವನ್ನು ಗೆದ್ದ ವಿಜೇತರಿಗೆ ಹಾಗೂ ಗಿನ್ನೆಸ್‌ ದಾಖಲೆ ಸೇರಿರುವ ಡ್ಯಾನ್ಸ್ ೭ ದಿ ಆರ್ಟ್ ಪ್ಯಾಕ್ಟರಿ ತಂಡದವರಿಗೆ ಸನ್ಮಾನ ಮಾಡಲಾಯಿತು.

Conclusion:ಕಾರ್ಯ ಕ್ರಮಕ್ಕೆ ಬಂದಿದ್ದ ಎಲ್ಲಾರಿಗೂ ವಿಶೇಷವಾಗಿ ಉತ್ತರ ಕರ್ನಾಟಕ ಶೈಲಿಯ ಕಡಕ್ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು, ಬೆಲ್ಲದ ಪಾಯಾಸ ವಿವಿದ ತರಹದ ಅಡುಗೆಯನ್ನು‌ ಬಂದಿದ್ದವರಿಗೆ ಬಡಿಸಿದರು.

ಈ ಕಾರ್ಯಕ್ರಮದಲ್ಲಿ‌ ಉತ್ತರ ಕರ್ನಾಟಕ ಶೈಲಿಯ ‌ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಲ್ಲಿ ನೆರೆದಿದ್ದ
ಸಕತ್ ಮನರಂಜನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕೆಂಗೇರಿಯ ಏಕದಳ ಬಿಲ್ವ ಬಂಡೆಮಠ ಶ್ರೀ ಶ್ರೀ 1008 ಶಿವಾನಂದ ಮಹಾ ಸ್ವಾಮಿಗಳು, ಸಂಸದ ಪಿ.ಸಿ ಮೋಹನ್, ಶಾಸಕ ಬೈರತಿ ಬಸವರಾಜ್, ಹಾಸ್ಯ ಕಲಾವಿದರು ರವಿ ಬಜಂತ್ರಿ, ರಾಜ್ಯ ಕಾರ್ಯಕಾರಣಿ ಸದಸ್ಯ ಅನಂತ ರಾಮಯ್ಯ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮನೋಹರ್ ರೆಡ್ಡಿ, ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘದ ರಮೇಶ್ ಅಥಣಿ, ಮನೋಹರ್ ಯರಳ್ಳಿ, ಶ್ಯಾಮ ಸುಂದರ್ ಪುರಾಣಿಕ, ಬಾಬು ಚಂದುರೆ, ಪಾಟೀಲ, ಧರ್ಮಗೌಡ, ನದಾಫ ಮುಂತಾದವರು ಹಾಜರಿದ್ದರು.

ಬೈಟ್: ಅರವಿಂದ ಲಿಂಬಾವಳಿ,ಶಾಸಕರು
ಬೈಟ್:ನದಾಫ್,ಆಯೋಜಕರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.