ETV Bharat / state

ಪಾನಮತ್ತ ಯುವಕರು- ವೈದ್ಯರ ಗಲಾಟೆಯಲ್ಲಿ ರೋಗಿಗೆ ಚಿಕಿತ್ಸೆ ವಿಳಂಬ

author img

By

Published : Mar 20, 2020, 10:40 AM IST

ಪಾನಮತ್ತ ಯುವಕರು-ವೈದ್ಯರ ಗಲಾಟೆಯಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ತಡವಾಗಿ ಚಿಕಿತ್ಸೆ ನೀಡಿದ ಘಟನೆ ಬೆಂಗಳೂರು-ಹೊಸೂರು ಹೆದ್ದಾರಿಯ ನಾರಾಯಣ ಹೆಲ್ತ್​ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.

Patient treatment delays in clash between youth-doctors
ಪಾನಮತ್ತ ಯುವಕರು-ವೈದ್ಯರ ಗಲಾಟೆಯಲ್ಲಿ ರೋಗಿಗೆ ಚಿಕಿತ್ಸೆ ವಿಳಂಬ

ಬೆಂಗಳೂರು: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಬೆಂಗಳೂರು-ಹೊಸೂರು ಹೆದ್ದಾರಿಯ ನಾರಾಯಣ ಹೆಲ್ತ್​ ಸಿಟಿ ಆಸ್ಪತ್ರೆಗೆ ಕರೆತಂದಾಗ ಸಿಬ್ಬಂದಿ ಮಹಿಳೆಯನ್ನು ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರಾತ್ರಿ ಸರಾಗವಾಗಿ ಉಸಿರಾಡದ ಮಹಿಳೆಯನ್ನು ಕರೆತಂದು ಆಂಬ್ಯುಲೆನ್ಸ್ ನಿಂದ ಕೆಳಗಿಳಿಸಿ ಆಸ್ಪತ್ರೆಗೆ ಸೇರಿಸಿಕೊಳ್ಳಿ ಎಂದು ಗೋಗರೆದರೂ ಆಸ್ಪತ್ರೆ ಸಿಬ್ಬಂದಿ ಮನಕರಗಿಲ್ಲ. ಮೂವತ್ತು ನಿಮಿಷ ರೋಗಿ ಆಚೆ ಇದ್ದರೂ ಆಸ್ಪತ್ರೆ ಒಳಗಡೆ ಬಿಟ್ಟುಕೊಂಡಿಲ್ಲ ಎನ್ನಲಾಗಿದೆ. ಇನ್ನೂ ಇದರಿಂದ ಕೋಪಗೊಂಡ ಯುವಕರು ಆಸ್ಪತ್ರೆ ಸಿಬ್ಬಂದಿಗೆ ಬಾಯಿಗೆ ಬಂದಹಾಗೆ ಬೈದಿದ್ದು, ಈ ದೃಶ್ಯಾವಳಿಗಳು ಮೊಬೈಲ್ನಲ್ಲಿ ಸೆರೆಯಾಗಿವೆ.

ಇನ್ನೂ ಆಸ್ಪತ್ರೆ ವೈದ್ಯರು, ರೋಗಿಯ ಜೊತೆ ಬಂದವರು ಕುಡಿದ ಮತ್ತಿನಲ್ಲಿ ಅನುಚಿತವಾಗಿ ವರ್ತಿಸಿ ದಾಂಧಲೆ ಮಾಡಿದ್ದಾರೆ. ಹೀಗಾಗಿಯೇ ರೋಗಿಯನ್ನು ದಾಖಲಿಸಿಕೊಳ್ಳುವಲ್ಲಿ ತಡವಾಗಿದೆ ಎಂದು ದೂರಿದ್ದಾರೆ. ಸದ್ಯ ಮಹಿಳೆಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವಲ್ಲಿ ವೈದ್ಯರು ನಿರತರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.