ETV Bharat / state

ಮೋಟಾರು ವಾಹನ ತೆರಿಗೆ ನಿರ್ಧರಣೆಯ ಎರಡನೇ ತಿದ್ದುಪಡಿ ವಿಧೇಯಕ ಪರಿಷತ್​​ನಲ್ಲಿ ಪಾಸ್​​ - ವಿಧಾನಸಭೆಯಲ್ಲಿ ಅನುಮೋದನೆ

ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಶೇ. 7.5, ಕೇರಳ ಶೇ. 6, ತಮಿಳುನಾಡಿನಲ್ಲಿ 10ರಷ್ಟು ಇದೆ. ನಮ್ಮಲ್ಲಿ ಶೇ. 3ಕ್ಕೆ ಇಳಿಸುತ್ತಿದ್ದೇವೆ. ನಾವು 33 ಲಕ್ಷ ರೂ. ಸಬ್ಸಿಡಿ ನೀಡುತ್ತೇವೆ. ಇದರಲ್ಲಿ 3 ಲಕ್ಷ ರೂ. ಬಿಟ್ಟುಕೊಡುವುದು ದೊಡ್ಡ ವಿಚಾರವಾಗದು ಎಂದು ಸಚಿವರು ಸಮಜಾಯಿಷಿ ನೀಡಿದರು. ಪ್ರಸ್ತಾವ ಅಂಗೀಕೃತವಾಗಿ, ಅನುಮೋದನೆ ಪಡೆಯಿತು.

Motor Vehicle Tax Decision
ವಿಧೇಯಕ ಪರಿಷತ್​​ನಲ್ಲಿ ಪಾಸ್
author img

By

Published : Feb 4, 2021, 7:19 PM IST

ಬೆಂಗಳೂರು: ವಿಧಾನಸಭೆಯಲ್ಲಿ ಅನುಮೋದನೆಗೊಂಡ ಮೋಟಾರು ವಾಹನ ತೆರಿಗೆ ನಿರ್ಧರಣೆಯ ಎರಡನೇ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್​​ನಲ್ಲಿ ಅನುಮೋದನೆಗೊಂಡಿತು.

ಓದಿ: ನಮ್ಮ ಪಕ್ಷದ ದೇಶದ್ರೋಹಿಗಳನ್ನು ಸೇರಿಸಿಕೊಂಡು ಬಿಜೆಪಿ 'ಸೋನಾರ್​ ಬಾಂಗ್ಲಾ' ಕನಸು: ಮಮತಾ

ಮೋಟಾರು ವಾಹನ ತೆರಿಗೆ ನಿರ್ಧರಣೆಯ ಎರಡನೇ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ವಿಧೇಯಕದ ವಿವರಣೆ ನೀಡಿ, ಕಬ್ಬು ಹಾರ್ವೆಸ್ಟಿಂಗ್ ಸಂಬಂಧ ಒಂದಿಷ್ಟು ತಿದ್ದುಪಡಿಗೆ ಪ್ರತ್ಯೇಕ ಯಂತ್ರ‌ ಖರೀದಿಸಬೇಕಿದೆ. ಕೋಟಿ ರೂ. ಮೊತ್ತದ ಯಂತ್ರ ಇದಾಗಿದೆ.

ಪ್ರತಿ ಕಾರ್ಖಾನೆಗಳು 2-3 ಯಂತ್ರ ಖರೀದಿಸುತ್ತವೆ. ಈ ಯಂತ್ರದ ಮೇಲೆ ರಾಜ್ಯದ ತೆರಿಗೆ ಹೆಚ್ಚು, ಬೇರೆ ರಾಜ್ಯದಲ್ಲಿ ತೆರಿಗೆ ಕಡಿಮೆ ಇದೆ. ಇದರಿಂದ ಎಲ್ಲರೂ ಬೇರೆ ರಾಜ್ಯದಲ್ಲಿ ನೋಂದಣಿ ಮಾಡಿಸುತ್ತಿದ್ದರು. ಆದ್ದರಿಂದ ಸಮಸ್ಯೆ ಮನಗಂಡು ಶೇ. 6ರಷ್ಟಿದ್ದ ತೆರಿಗೆ ‌ಮೊತ್ತವನ್ನು ಶೇ. 3ಕ್ಕೆ ಇಳಿಸಿದ್ದೇವೆ. ಇದರಿಂದ ಕಬ್ಬು ಬೆಳೆಗಾರರಿಗೆ ಅನುಕೂಲ ಆಗಲಿದೆ ಎಂದು ವಿವರಿಸಿದರು.

ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ನಾವು ಮಹಾರಾಷ್ಟ್ರ ಕಾರ್ಮಿಕರನ್ನು ಅವಲಂಬಿಸಿದ್ದು, ಅವರು ಬರದಿದ್ದರೆ ಸಮಸ್ಯೆ ಎದುರಿಸುತ್ತೇವೆ. ಒಂದು ಗ್ಯಾಂಗ್ ಇದರಲ್ಲಿದೆ. 6-8 ಲಕ್ಷ ರೂ. ಹೂಡಿಕೆ ಮಾಡಿ ಕಾರ್ಮಿಕರನ್ನು ಕರೆತರುತ್ತಾರೆ. ಅವರು ಕೈಕೊಡುತ್ತಾರೆ. ಇದರಿಂದ ಯಂತ್ರದ ಆಗಮನ, ತೆರಿಗೆ ರಿಯಾಯಿತಿ ಉತ್ತಮ ನಿರ್ಧಾರ. ಶೇ. 3ಕ್ಕಿಂತ ಕಡಿಮೆ ಮಾಡಲು ಸಾಧ್ಯವಾದರೆ ಪ್ರಯತ್ನಿಸಿ. ಶೇ. 1ಕ್ಕೆ ಇಳಿಸಿದರೆ ಅನುಕೂಲ ಎಂದರು.

ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಇದು ಅನುಕೂಲವಾಗಿ ಲಭಿಸಲಿದೆ. ದೇಶದಲ್ಲಿ ಕಬ್ಬು ಬೆಳೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದ ಬೀಡ್​ನಿಂದ ಬರುವ ಕಾರ್ಮಿಕರನ್ನು ಅವಲಂಬಿಸಿದ್ದು, ಹೆಚ್ಚು ಯಂತ್ರೋಪಕರಣಗಳ ಬಳಕೆ ಆದರೆ ಅನುಕೂಲ. ತೆರಿಗೆ ಭಾರ ಕಡಿಮೆ ಕಬ್ಬು ಬೆಳೆಗಾರರಿಗೆ ಅನುಕೂಲ. ಕಬ್ಬು ಕತ್ತರಿಸುವ ಮಾರ್ಗ ನಿರ್ಮಿಸುವ ಯಂತ್ರ ಇದಾಗಿದೆ. ಇದು ರಸ್ತೆಯಲ್ಲಿ ಓಡುವ ಯಂತ್ರ ಅಲ್ಲ. ಹೀಗಾಗಿ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವಂತೆ ಕೋರಿದ್ದೆವು. ಆದರೆ ತೆರಿಗೆ ಭಾರ ಕಡಿಮೆ‌ ಮಾಡಿದ್ದು ಸಮಾಧಾನಕರ ಎಂದರು.

ಸದಸ್ಯ ಅಪ್ಪಾಜಿಗೌಡ ಮಾತನಾಡಿ, ರೈತರ ಬಳಕೆಯ ಈ ಯಂತ್ರಕ್ಕೆ ತೆರಿಗೆ ಹಾಕಬಾರದು. ಅಕ್ಕಪಕ್ಕದ ರಾಜ್ಯಗಳು ತೆರಿಗೆ ಕಡಿಮೆ ಮಾಡಿವೆ. ಸರ್ಕಾರ ಯಂತ್ರ ವಿತರಣೆಯನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. ಅವರು ಸಬ್ಸಿಡಿ ಸರಿಯಾಗಿ ವಿತರಿಸುತ್ತಿಲ್ಲ. ಜತೆಗೆ ಟ್ರ್ಯಾಕ್ಟರ್ ಬಳಕೆ ಮಾಡುವುದು ಮಧ್ಯಮ ವರ್ಗದವರು. ಇದರಿಂದ ಅವುಗಳ ತೆರಿಗೆಯನ್ನೂ ಕಡಿಮೆ ಮಾಡಿ ಎಂದರು.

ಲಕ್ಷ್ಮಣ ಸವದಿ ವಿವರಣೆ ನೀಡಿ, ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಶೇ. 7.5, ಕೇರಳ ಶೇ. 6, ತಮಿಳುನಾಡಿನಲ್ಲಿ 10ರಷ್ಟು ಇದೆ. ನಮ್ಮಲ್ಲಿ ಶೇ. 3ಕ್ಕೆ ಇಳಿಸುತ್ತಿದ್ದೇವೆ. ನಾವು 33 ಲಕ್ಷ ರೂ. ಸಬ್ಸಿಡಿ ನೀಡುತ್ತೇವೆ. ಇದರಲ್ಲಿ 3 ಲಕ್ಷ ರೂ. ಬಿಟ್ಟುಕೊಡುವುದು ದೊಡ್ಡ ವಿಚಾರವಾಗದು ಎಂದು ಸಮಜಾಯಿಷಿ ನೀಡಿದರು. ಪ್ರಸ್ತಾವ ಅಂಗೀಕೃತವಾಗಿ, ಅನುಮೋದನೆ ಪಡೆಯಿತು.

ಸಾಂಕ್ರಾಮಿಕ ರೋಗಗಳ ತಿದ್ದುಪಡಿ ವಿಧೇಯಕ:

ವಿಧಾನಸಭೆಯಲ್ಲಿ ಅನುಮೋದನೆಗೊಂಡ ಸಾಂಕ್ರಾಮಿಕ ರೋಗಗಳ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್​ನಲ್ಲಿ ಅನುಮೋದನೆಗೊಂಡಿತು. ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸಾಂಕ್ರಾಮಿಕ ರೋಗಗಳ ತಿದ್ದುಪಡಿ ವಿಧೇಯಕ ಮಂಡಿಸಿ ವಿವರಣೆ ನೀಡಿದರು.

ಸಾಂಕ್ರಾಮಿಕ ರೋಗಗಳು ಎದುರಾದ ಸಂದರ್ಭ ಆಗ ವಿಧಿಸುವ ಕೆಲ ನಿರ್ಬಂಧವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಇದುವರೆಗೂ ಅವಕಾಶ ಇರಲಿಲ್ಲ. ಶಿಕ್ಷೆ ವಿಧಿಸಲು ಅವಕಾಶ ನೀಡುವ ಸಣ್ಣ ಬದಲಾವಣೆ ಮಾಡಿ ತಿದ್ದುಪಡಿ ತರಲಾಗಿದೆ ಎಂದು ವಿವರಿಸಿದರು. ಸದಸ್ಯರು ಒಪ್ಪಿಗೆ ಸೂಚಿಸಿದ ಹಿನ್ನೆಲೆ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.