ETV Bharat / state

ಪರೇಶ್ ಮೇಸ್ತ ಕೇಸ್​​​​​ನಲ್ಲಿ  ಸಿದ್ದರಾಮಯ್ಯ ಸರ್ಕಾರದಿಂದ ಸಾಕ್ಷಿನಾಶ : ರವಿಕುಮಾರ್ - ಈಟಿವಿ ಭಾರತ ಕನ್ನಡ

ಪರೇಶ್​ ಮೇಸ್ತಾ ಕೊಲೆ ಪ್ರಕರಣ ಸಂಬಂಧಿಸಿದಂತೆ ಸಿಬಿಐ ತನಿಖಾ ವರದಿಯ ಬಗ್ಗೆ ಪೂರ್ಣ ಮಾಹಿತಿ ಇಲ್ಲ.ಈ ಪ್ರಕರಣದ ಸಾಕ್ಷ್ಯಗಳನ್ನು ಸಿದ್ದರಾಮಯ್ಯ ಸರ್ಕಾರ ನಾಶಪಡಿಸಿದ್ದು, ಈ ಬಗ್ಗೆ ಬಿಜೆಪಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

paresh-mesta-case-evidence-destoyed-by-siddaramaiah-government-says-ravikumar
ಪರೇಶ್ ಮೇಸ್ತ ಕೇಸ್ ನಲ್ಲಿ ಸಿದ್ದರಾಮಯ್ಯ ಸರ್ಕಾರದಿಂದ ಸಾಕ್ಷಿನಾಶ : ರವಿಕುಮಾರ್
author img

By

Published : Oct 4, 2022, 4:05 PM IST

ಬೆಂಗಳೂರು : ಪರೇಶ್ ಮೇಸ್ತ ಸಾವು ಕೊಲೆಯಲ್ಲ ಎಂದು ಸಿಬಿಐ ತನಿಖಾ ವರದಿ ಸಲ್ಲಿಕೆ ಮಾಡಿದ ಪ್ರಕರಣ ಸಂಬಂಧ ಬಿಜೆಪಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯಗಳನ್ನು ನಾಶ ಮಾಡಿದೆ. ಹಾಗಾಗಿ ಸಿದ್ದರಾಮಯ್ಯ ಅವರೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರೇಶ್ ಮೇಸ್ತಾ ಸಾವು ಕೊಲೆಯೇ ಇದರಲ್ಲಿ ಎರಡು ಮಾತಿಲ್ಲ. ಇದನ್ನು ಅವರ ತಂದೆಯೇ ಹೇಳಿದ್ದಾರೆ. ಇದಕ್ಕೆ ಪಿಎಫ್ಐ ಸಂಘಟನೆಯವರೇ ಕಾರಣ ಎಂದು ಹೇಳಿದ್ದಾರೆ. ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಕೋರ್ಟ್ ಗೆ ಕೊಟ್ಟಿದ್ದಾರೆ. ಆದರೆ, ಅದರ ಸಂಪೂರ್ಣ ವಿವರ ನಮಗೆ ಗೊತ್ತಿಲ್ಲ ಕೋರ್ಟ್ ನಿಂದ ಸಂಪೂರ್ಣ ತನಿಖಾ ವರದಿ ಬರಲಿ ಎಂದು ಹೇಳಿದರು.

ಸಿದ್ದರಾಮಯ್ಯ ಮೊದಲು ಕ್ಷಮೆ ಕೇಳಬೇಕು : ನಮ್ಮನ್ನು ಕ್ಷಮೆ ಕೇಳಿ ಎಂದು ಕೇಳುವ ಸಿದ್ದರಾಮಯ್ಯ ಮೊದಲು ರಾಜೀನಾಮೆ ಕೊಡಬೇಕು. ಈ ಕೊಲೆಯ ಸಾಕ್ಷ್ಯ ನಾಶ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. ಅದಕ್ಕಾಗಿ ಅವರು ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರ ಕೊಲೆ ಆಯಿತು. ಇದಕ್ಕೆ ಕಾಂಗ್ರೆಸ್ ಮಾಜಿ ಶಾಸಕ ವಿನಯ್ ಕುಲಕರ್ಣಿ ಕಾರಣ ಎಂಬುದು ಗೊತ್ತಿರಲಿಲ್ಲವೇ..? ರುದ್ರೇಶ್ ಹತ್ಯೆಯಾಯಿತು. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ಕಾರಣ. ಪಿಎಫ್ಐ ಸಂಘಟನೆ ಮೇಲಿನ ಕೇಸ್ ವಾಪಸ್​​ ಪಡೆದಿದ್ದಾರೆ. ಈ ವಿಷಯವನ್ನು ಮುಂದೆ ರಾಜ್ಯದ ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

ಸಿಬಿಐ ವರದಿ ಒಪ್ಪಲ್ಲ: ಡಿಕೆ ರವಿ ಆತ್ಮಹತ್ಯೆ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್, ಇವರು ಈ ಎಲ್ಲ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ.‌ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಕೆ ಜೆ ಜಾರ್ಜ್ ಕಾರಣ. ನಾವು ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಪರೇಶ್ ಮೇಸ್ತಾ ಪ್ರಕರಣದ ಕುರಿತು ಸಿಬಿಐ ವರದಿಯನ್ನು ನಾವು ಒಪ್ಪೋದಿಲ್ಲ. ಭಂಡ ಧೈರ್ಯದಿಂದ ಪಿಎಫ್ಐ ಗೆ ಸಪೋರ್ಟ್ ಮಾಡಿದ್ದರಿಂದ ಸಿದ್ದರಾಮಯ್ಯನ ಸರ್ಕಾರದಿಂದಲೇ ಈ ಕೊಲೆ ಆಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯ ನಾಶ ಮಾಡಿದೆ : ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಇದು ಖಂಡಿತವಾಗಿಯೂ ಕೊಲೆ ಎಂದು ಅವರ ತಂದೆಯವರೇ ಹೇಳಿದ್ದಾರೆ. ಅವರ ತಂದೆಯವರಿಗಿಂತ ಸಿದ್ದರಾಮಯ್ಯನವರಿಗೆ ಗೊತ್ತಾ..? ರಕ್ತದ ಮಡುವಿನಲ್ಲಿ ಅವನು ಸತ್ತಿದ್ದಾನೆ. ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಅಲ್ವಾ..? ಕೊಲೆಗೆ ಇದ್ದ ಪುರಾವೆಗಳನ್ನು ನಾಶ ಮಾಡಿ, ಬಚಾವ್ ಆಗಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕೋರ್ಟ್ ಗೆ ಸಿಬಿಐ ವರದಿ ಕೊಟ್ಟಿದೆ. ಪೂರ್ತಿ ವರದಿ ಬರಲಿ ಗೃಹ ಸಚಿವರು ಇದರ ಬಗ್ಗೆ ಮಾತಾಡಲಿ. ಆ ನಂತರ ಈ ಬಗ್ಗೆ ಚರ್ಚೆ ಮಾಡೋಣ. ಯೋಗೇಶ್ ಗೌಡ ಕೊಲೆಗೆ ನಿಮ್ಮ ಮಂತ್ರಿಗಳೇ ಕಾರಣ ಅಲ್ವಾ ..? ಸಿದ್ದರಾಮಯ್ಯ ಅವಧಿಯಲ್ಲಿ ಸೀರಿಸ್ ಕೇಸ್ ಗಳು ಇವೆ ಅದಕ್ಕೆ ಅವರು ಕ್ಷಮೆ ಕೇಳಬೇಕು ಎಂದು ಹೇಳಿದರು.

ನಮ್ಮ ಸರ್ಕಾರದಿಂದ ಟಿಪ್ಪು ಜಯಂತಿ ಇಲ್ಲ : ಯಡಿಯೂರಪ್ಪ, ಅಶೋಕ್, ಶೋಭಾ ಕರಂದ್ಲಾಜೆ ಟಿಪ್ಪು ಖಡ್ಗ ಹಿಡಿದಿರುವ ಫೋಟೋಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಚಲವಾದಿ ನಾರಾಯಣಸ್ವಾಮಿ, ಟಿಪ್ಪು ಜಯಂತಿ ಆಚರಣೆ ಮಾಡೋದು ಬೇರೆ, ಯಾರೋ ಕಾರ್ಯಕ್ರಮಕ್ಕೆ ಕರೆದು ಖಡ್ಗ ಕೊಟ್ಟು, ಕತ್ತಿ ಕೊಟ್ಟರೆ ನಾವೇ ಅದನ್ನು ಮಾಡಿದ್ದು ಅಂತಲ್ಲ. ನಾವೇನು ಅಲ್ಪಸಂಖ್ಯಾತರ ವಿರೋಧಿ ಅಲ್ವಲ್ಲ. ಸಿದ್ದರಾಮಯ್ಯ, ಟಿಪ್ಪು ಟೋಪಿ ಹಾಕಿದರೆ ಹಾಕಿಸಿಕೊಳ್ತಾರೆ. ಅದೇ ಕಾವಿ ಹಾಕಿದರೆ ಅದನ್ನು ಹಾಕಿಸಿಕೊಳ್ಳಲ್ಲ. ಈ ಬಗ್ಗೆ ಕೇಳಿದರೆ ಹಿಂದೂ ಅಂತಾರೆ, ಇವರು ಯಾವ ಹಿಂದೂ..? ನಮ್ಮ ಸರ್ಕಾರದಿಂದ ಯಾವತ್ತೂ ಟಿಪ್ಪು ಜಯಂತಿ ಮಾಡಿಲ್ಲ. ಮುಂದೆಯೂ ನಾವು ಟಿಪ್ಪು ಜಯಂತಿ ಮಾಡಲ್ಲ ಎಂದರು.

ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ನಾರಾಯಣಸ್ವಾಮಿ : ಮೊದಲ ದಿನದ ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ರಾಹುಲ್ ಗಾಂಧಿ ಯವರನ್ನು ಹೈಜಾಕ್​ ಮಾಡಿದ್ದರು. ಆಮೇಲೆ ಪಾದಯಾತ್ರೆಗೆ ಜನರೇ ಬರಲಿಲ್ಲ. ಇದರಿಂದ ಅವರ ಬುಡ ಅಲುಗಾಡುತ್ತಿದೆ. ನಮಗೆ ಯಾವುದೇ ನಡುಕ ಇಲ್ಲ. ಅವರು ನಡುಗುತ್ತಿರುವುದು ಬುಡ ಅಲುಗಾಡುವ ಕುರಿತು ಎಂದು ಕಾಂಗ್ರೆಸ್ ಗೆ ಚಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದರು.

ಇದನ್ನೂ ಓದಿ : ಪರೇಶ್ ಮೇಸ್ತ ಕೊಲೆ ಅಲ್ಲ, ಆಕಸ್ಮಿಕ ಸಾವು.. ಸಿಬಿಐ ವರದಿಗೆ ಪರೇಶ್ ತಂದೆ ಅಸಮಾಧಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.