ETV Bharat / state

ಬೇಡಪ್ಪ ಬೇಡ,, ಸದ್ಯಕ್ಕೆ ಮಕ್ಕಳಿಗೆ ಕ್ಲಾಸೂ ಬೇಡಾ, ಸ್ಕೂಲೂ ಬೇಡಾ!! - ಜುಲೈನಲ್ಲಿ ಶಾಲೆಗಳನ್ನು ತೆರೆಯಲು ಶಿಕ್ಷಣ ಇಲಾಖೆ ಸಜ್ಜು

ರಾಜ್ಯದಲ್ಲಿ ಶಿಕ್ಷಣ‌ ಇಲಾಖೆಯು ಶಾಲೆಗಳನ್ನ ಜುಲೈನಲ್ಲಿ ಆರಂಭಿಸಲು ಮಾನಸಿಕವಾಗಿ ಸಿದ್ಧವಾಗಿದೆ. ಆದರೆ, ಇದಕ್ಕೆ ಪೋಷಕರ ಒಪ್ಪಿಗೆಯೂ ಬೇಕು. ‌ಆಯಾ ಶಾಲೆಗಳು, ವಿದ್ಯಾರ್ಥಿಗಳ ಪೋಷಕರೊಂದಿಗೆ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ ಸಾರ್ವಜನಿಕ ಶಿಕ್ಷಣ ಇಲಾಖೆ.

parents-anxiety-for-sending-their-children-to-school-in-the-time-of-corona-pandemic-at-bengalore
ಕೊರೊನಾ 'ಮಹಾಮಾರಿ'ಗೆ ಕಂಗಾಲಾದ ಪೋಷಕರು
author img

By

Published : Jun 3, 2020, 9:07 PM IST

ಬೆಂಗಳೂರು : ಅದೊಂದು ಕಾಲವಿತ್ತು ಸ್ಕೂಲ್‌ಗೆ ಹೋಗಲ್ಲ ಅಂದ್ರೆ ಅಮ್ಮ ಇಲ್ಲ ಅಪ್ಪ ನಾಲ್ಕು ಚೆನ್ನಾಗಿ ಏಟು ಕೊಡ್ತಾಯಿದ್ದರು. ಆದರೆ, ಈಗ ಅದೇ ಪೋಷಕರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳನ್ನ ಶಾಲೆಗೆ ಕಳುಹಿಸೋಕೆ ಸುತಾರಾಂ ಒಪ್ಪುತ್ತಿಲ್ಲ. ಅದಕ್ಕೆ ಕಾರಣ ಕೊರೊನಾ..

ಕೊರೊನಾದಿಂದ ಹೆತ್ತವರು ಸಂಪೂರ್ಣ ಕಂಗಾಲಾಗಿದ್ದಾರೆ. ಸದ್ಯಕ್ಕೆ ಮಕ್ಕಳಿಗೆ ಮನೆ ಓಕೆ, ಸ್ಕೂಲ್ ಯಾಕೆ ಅಂತಾ ಪ್ರಶ್ನಿಸ್ತಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಶಿಕ್ಷಣ‌ ಇಲಾಖೆಯು ಶಾಲೆಗಳನ್ನ ಜುಲೈನಲ್ಲಿ ಆರಂಭಿಸಲು ಮಾನಸಿಕವಾಗಿ ಸಿದ್ಧವಾಗಿದೆ. ಆದರೆ, ಇದಕ್ಕೆ ಪೋಷಕರ ಒಪ್ಪಿಗೆಯೂ ಬೇಕಾಗಿದೆ. ‌ಇದಕ್ಕಾಗಿ ಶಿಕ್ಷಣ ಇಲಾಖೆಯು ಆಯಾ ಶಾಲೆಗಳು, ವಿದ್ಯಾರ್ಥಿಗಳ ಪೋಷಕರೊಂದಿಗೆ ಅಭಿಪ್ರಾಯ ಸಂಗ್ರಹಿಸಿ ಮಾಹಿತಿ ನೀಡಿ ಅಂತಾ ಆದೇಶಿಸಿದೆ.

ಯಾರಿಗೆ, ಯಾವಾಗ ಶಾಲೆ ಆರಂಭ? :

ಜುಲೈ 1 ರಂದು- 4 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ
ಜುಲೈ15ರಂದು- 1ರಿಂದ 3ನೇ ತರಗತಿ‌
ಜುಲೈ 15ರಂದು- 8 ರಿಂದ 10ನೇ ತರಗತಿ
ಜುಲೈ20 ರಂದು- ಪೂರ್ವ ಪ್ರಾಥಮಿಕ ತರಗತಿ

ಮಕ್ಕಳನ್ನ ಕಂಟ್ರೋಲ್ ಮಾಡಲು ಸಾಧ್ಯನಾ?: ಮಕ್ಕಳು ಅಂದರೆ ಅಲ್ಲಿ ಆಟ-ಪಾಠದೊಂದಿಗೆ ತುಂಟತನ‌ ತುಸು ಹೆಚ್ಚಾಗಿಯೇ ಇರಲಿದೆ. ಹೀಗಾಗಿ ಮನೆಯಲ್ಲೇ ಸಂಬಾಳಿಸೋದು ಕಷ್ಟ ಇರುವಾಗ ಶಾಲೆಯಲ್ಲಿ ಮಕ್ಕಳನ್ನ ನಿಭಾಯಿಸೋದು ಹೇಗೆ ಎಂಬ ಪ್ರಶ್ನೆ ಕಾಡುತ್ತೆ. ‌ಸಾಮಾನ್ಯವಾಗಿ ಮಕ್ಕಳನ್ನ ಸಂಭಾಳಿಸೋದು ಸುಲಭವಲ್ಲ. ಅದರಲ್ಲೂ ಕೊರೊನಾ ಸಮಯದಲ್ಲಿ ಇದಿನ್ನೂ ಕಷ್ಟವಾಗಬಹುದು.

ಕೊರೊನಾ 'ಮಹಾಮಾರಿ'ಗೆ ಕಂಗಾಲಾದ ಪೋಷಕರು..

ಹೆತ್ತವರ ಆತಂಕವೇನು? ಏನ್ ಅಂತಾರೆ ಅವರು?

ಈಗಿನ ಪರಿಸ್ಥಿತಿಯಲ್ಲಿ ಮನೆಯೇ ಮೊದಲ ಪಾಠ ಶಾಲೆ : ಕೊರೊನಾ ಎಲ್ಲರಲ್ಲೂ ನಡುಕ ಹುಟ್ಟಿಸಿದೆ. ಇಂತಹ ಸನ್ನಿವೇಶದಲ್ಲಿ ಶಾಲೆ ಆರಂಭಿಸುವುದು ಸೂಕ್ತವಲ್ಲ. ಸದ್ಯದ ಮಟ್ಟಿಗೆ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಲಿ, ದಿನೇದಿನೆ ಕೊರೊನಾ ಏರಿಕೆ ಆಗುತ್ತಿರುವ ಈ ಸಮಯದಲ್ಲಿ ನಮ್ಮ‌ ಮಕ್ಕಳನ್ನ ಶಾಲೆಗೆ ಕಳಿಸಬೇಕು. ಹೀಗಾಗಿ ಎರಡು ಮೂರು ತಿಂಗಳು ಆನ್​ಲೈನ್​​ ಪಾಠ ಮುಂದುವರಿದ್ರೆ ಉತ್ತಮ ಅಂತಾರೆ ಪೋಷಕರಾದ ಚಿತ್ರಹರ್ಷ.

ಔಷಧಿ ಕಂಡು ಹಿಡಿದಿಲ್ಲ; ಶಾಲೆಗೆ ಕಳಿಸೋದಾದ್ರೂ ಹೇಗೆ?: ರಾಜ್ಯಕ್ಕೆ ಕೊರೊನಾ ಎಂಟ್ರಿ ಕೊಟ್ಟು ಮೂರು ತಿಂಗಳುಗಳೇ ಕಳೆದಿದೆ. ಜೂನ್ ತಿಂಗಳು ಬಂದರೂ ಕೊರೊನಾಗೆ ಔಷಧಿಯೇ ಕಂಡು‌ ಹಿಡಿದಿಲ್ಲ. ಹೀಗಿರುವಾಗ ಯಾವ ಧೈರ್ಯ, ನಂಬಿಕೆ ಮೇಲೆ ನಮ್ಮ ಮಕ್ಕಳನ್ನ ಶಾಲೆಗೆ ಕಳಿಸೋದು? ಮೆಡಿಸಿನ್ ಕಂಡು ಹಿಡಿಯೋ ತನಕ ಹೈ ರಿಸ್ಕ್ ತೆಗೆದುಕೊಳ್ಳಲು ಆಗದು. ಅದರಲ್ಲೂ ಶಾಲೆಗಳು ಇಂತಹ ಸಂದರ್ಭಗಳಲ್ಲಿ ಶುಲ್ಕ ಕಡಿಮೆ ಮಾಡಬೇಕು. ಆನ್​ಲೈನ್​​ ಕ್ಲಾಸ್​ಗಳು ಚಿಕ್ಕಮಕ್ಕಳಿಗೆ ಅನಿವಾರ್ಯವೇ ಅಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಸೌಮ್ಯ.

ಸಾಮಾಜಿಕ ಅಂತರ ಕಾಯ್ದುಕೊಂಡರೆ ಒಳ್ಳೆಯದು: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗಳು ಆರಂಭವಾಗಬೇಕು. ಆದರೆ, ಹೆಚ್ಚಿನ ಮುನ್ನೆಚ್ಚರಿಕೆ ಹಾಗೂ ಸುರಕ್ಷತೆ ವಹಿಸುವುದು ಕಡ್ಡಾಯವಾಗಬೇಕು. ಒಂದು ಬೆಂಚಿನಲ್ಲಿ ಇಬ್ಬರು ಮಕ್ಕಳು ಕೂರಿಸುವುದು. ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಿದೆ. ಕೊರೊನಾ ಹರಡುವುದನ್ನ ಕಡಿಮೆ ಮಾಡಿದರೆ ಉತ್ತಮ ಅಂತಾ ಸಲಹೆ ನೀಡಿದ್ರು ಪೋಷಕರಾದ‌ ನಂದಿತಾ.

ಕೊರೊನಾ ಡೇಂಜರಸ್​​ ವೈರಸ್ : ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಮತ್ತೋರ್ವ ಪೋಷಕರಾದ ಸುಷ್ಮಾ, ಇದು ಅತ್ಯಂತ ಡೇಂಜರಸ್​ ವೈರಸ್. ಈಗಾಗಲೇ ಇದನ್ನರಿತು ಐಟಿಬಿಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅವಕಾಶ ಕೊಟ್ಟಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ. ಕೊರೊನಾ ಹರಡುವ ಸಾಧ್ಯತೆ ಹೆಚ್ಚಿರುತ್ತೆ. ಇಷ್ಟೆಲ್ಲ ರಿಸ್ಕ್ ಇರುವಾಗ ಯಾವ ಧೈರ್ಯದ ಮೇಲೆ ಮಕ್ಕಳನ್ನ ಕಳಿಸೋದು? ಈಗಂತೂ ತಂತ್ರಜ್ಞಾನ ಮುಂದುವರೆದಿದೆ. ಅದರ ಸದ್ಬಳಕೆ ಮಾಡಿಕೊಳ್ಳಲಿ. ವಿಡಿಯೋ ಮಾಡಿ ವಾಟ್ಸ್‌ಆ್ಯಪ್‌ಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಿ ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.