ETV Bharat / state

Shocking: ಅರುಣ್ ಸಿಂಗ್ ಭೇಟಿ ಮಾಡಿದ ಪಂಚಮಸಾಲಿ ಸ್ವಾಮೀಜಿ... ಬಿಎಸ್​ವೈ ಬದಲಾಯಿಸಲು ಒತ್ತಡ! - ಬೆಂಗಳೂರು ಸುದ್ದಿ,

ಅರುಣ್ ಸಿಂಗ್ ಭೇಟಿ ಮಾಡಿದ ಪಂಚಮಸಾಲಿ ಸ್ವಾಮೀಜಿಯವರು ಬಿಎಸ್ವೈ ಬದಲಾಯಿಸುವಂತೆ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Panchamsali Swamiji meet, Panchamsali Swamiji meet to Arun Singh, Panchamsali Swamiji meet to Arun Singh in Bangalore, Bangalore news, Bangalore political news, ಅರುಣ್ ಸಿಂಗ್ ಭೇಟಿ, ಅರುಣ್ ಸಿಂಗ್ ಭೇಟಿ ಮಾಡಿದ ಪಂಚಮಸಾಲಿ ಸ್ವಾಮೀಜಿ, ಬೆಂಗಳೂರಿನಲ್ಲಿ ಅರುಣ್ ಸಿಂಗ್ ಭೇಟಿ ಮಾಡಿದ ಪಂಚಮಸಾಲಿ ಸ್ವಾಮೀಜಿ, ಬೆಂಗಳೂರು ಸುದ್ದಿ, ಬೆಂಗಳೂರು ರಾಜಕೀಯ ಸುದ್ದಿ,
ಅರುಣ್ ಸಿಂಗ್ ಭೇಟಿ ಮಾಡಿದ ಪಂಚಮಸಾಲಿ ಸ್ವಾಮೀಜಿ
author img

By

Published : Jun 18, 2021, 5:24 AM IST

ಬೆಂಗಳೂರು : ನಾಯಕತ್ವ ಬದಲಾವಣೆ ಕುರಿತು ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ವಿದ್ಯಮಾನಗಳು ತಾರ್ಕಿಕ ಅಂತ್ಯಕ್ಕೆ ಸಮೀಪಿಸುತ್ತಿರುವ ಬೆಳವಣಿಗೆಯ ನಡುವೆ ಮಠಾಧೀಶರು ಈಗ ಬಿಜೆಪಿ ಪೊಲಿಟಿಕ್ಸ್​ನಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಕೂಡಲ ಸಂಗಮದ ಪಂಚಮ ಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಗುರುವಾರ ರಾತ್ರಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸಿ ಪಂಚಮಸಾಲಿ ಸಮಾಜಕ್ಕೆ ಸಿಎಂ ಹುದ್ದೆ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ಬಿಜೆಪಿ ಶಾಸಕರಿಂದ ಸಿಎಂ ಪರ - ವಿರೋಧ ಅಹವಾಲು ಸ್ವೀಕರಿಸಿದ ಬಳಿಕ ರಾತ್ರಿ ಕುಮಾರ ಕೃಪ ಅತಿಥಿ ಗೃಹದಲ್ಲಿ ಭೇಟಿ ಮಾಡಿದ ಸ್ವಾಮೀಜಿ, ನಾಯಕತ್ವ ಬದಲಾವಣೆ ಮತ್ತು ಪಂಚಮಸಾಲಿ ಸಮಾಜದ ನಿಲುವಿನ ಕುರಿತು ಅರುಣ್ ಸಿಂಗ್ ಜತೆ ಕೆಲಹೊತ್ತು ಸಮಾಲೋಚನೆ ನಡೆಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರ ಹೆಸರಿನಲ್ಲಿ ಹಲವರು ಆಡಳಿತ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಿವೃತ್ತಿ ನೀಡಿ ಹೊಸಬರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಪಂಚಮಸಾಲಿ ಸಮಾಜ ಯಡಿಯೂರಪ್ಪನವರನ್ನು ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇಷ್ಟೊಂದು ಅವಕಾಶ ನೀಡಿದರೂ ಅವರು ಸಮಾಜದ ಋಣ ತೀರಿಸಲಿಲ್ಲ‌ ಎಂದು ಅರುಣ್ ಸಿಂಗ್ ಬಳಿ ದೂರಿದ್ದಾರೆ.

ಬಹುಸಂಖ್ಯಾತ ಪಂಚಮಸಾಲಿ ಸಮಾಜ ಬಳಸಿಕೊಂಡು ಅಧಿಕಾರದ ಗದ್ದುಗೆ ಏರಿದ ಯಡಿಯೂರಪ್ಪ ಸಮಾಜದ ನಾಯಕರಲ್ಲಿ ಒಡಕು ಮೂಡಿಸುವ ಕೆಲಸ ಮಾಡಿರುವುದು ತಮಗೆ ಬೇಸರ ತರಿಸಿದೆ. ಮೀಸಲಾತಿ ಹೋರಾಟದಲ್ಲಿ ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಆಡಿದ ಮೋಸದ ಆಟ ಸಮಾಜ ಮರೆಯದಂತಾಗಿದೆ ಎಂದು ಪಂಚಮಸಾಲಿ ಸ್ವಾಮೀಜಿ ಅರುಣ್ ಸಿಂಗ್ ಬಳಿ ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪರನ್ನು ಬದಲಾಯಿಸಿ ಪಂಚಮ ಸಾಲಿ ಸಮಾಜದ ಮುಖಂಡರಿಗೆ ನಾಯಕತ್ವದ ಜವಾಬ್ದಾರಿ ನೀಡಬೇಕು.ಇದಕ್ಕೆ ಸಮಾಜ ಸಮರ್ಥವಾಗಿದೆ. ಸಿಎಂ ಬದಲಾಯಿಸುವ ನಿರ್ಣಯ ಹೈಕಮಾಂಡ್ ತಗೆದುಕೊಂಡರೆ ಅದನ್ನ ಸಮಾಜ ಬೆಂಬಲಿಸಲಿದೆ ಎಂದು ಮೃತ್ಯುಂಜಯ ಸ್ವಾಮೀಜಿ ಈ ಸಂದರ್ಭದಲ್ಲಿ ಗಮನಕ್ಕೆ ತಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.