ETV Bharat / state

ಚಿತ್ರಸಂತೆಯಲ್ಲಿ ವಿಷ್ಣುವರ್ಧನ್ ಕುರಿತ ಚಿತ್ರಕಲೆಗಳ ಪ್ರದರ್ಶನ; ಪುಣ್ಯಭೂಮಿ ಹೋರಾಟಕ್ಕೆ ಬೆಂಬಲ

author img

By ETV Bharat Karnataka Team

Published : Jan 8, 2024, 7:02 AM IST

Updated : Jan 8, 2024, 8:23 AM IST

ಬೆಂಗಳೂರಿನಲ್ಲಿ ನಡೆಯುತ್ತಿರುವ 21ನೇ ಚಿತ್ರಸಂತೆಯಲ್ಲಿ ಕನ್ನಡದ ಹೆಸರಾಂತ ಹಿರಿಯ ನಟ ದಿ.ವಿಷ್ಣುವರ್ಧನ ಅವರ ಕುರಿತ ವಿಶೇಷ ಚಿತ್ರಕಲೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ನಟ ವಿಷ್ಣುವರ್ಧನ
ನಟ ವಿಷ್ಣುವರ್ಧನ

ಚಿತ್ರಸಂತೆಯಲ್ಲಿ ವಿಷ್ಣುವರ್ಧನ್ ಚಿತ್ರಕಲೆಗಳ ಪ್ರದರ್ಶನ

ಬೆಂಗಳೂರು : ಕನ್ನಡದ ಮೇರುನಟ, ಸಾಹಸಸಿಂಹ ದಿ.ವಿಷ್ಣುವರ್ಧನ ಅವರ ಪುಣ್ಯಭೂಮಿ ಹೋರಾಟ ಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಹೆಚ್ಚಿನ ಗಮನ ಸೆಳೆಯಲು ವೀರಲೋಕ ಪ್ರಕಾಶನ ಮತ್ತು ಕಲಾ ಸಂಸ್ಥೆಯು ನಟನ ಕುರಿತ ವಿಶೇಷ ಚಿತ್ರಕಲೆಗಳನ್ನು ನಗರದ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆಯುತ್ತಿರುವ ಚಿತ್ರಸಂತೆಯಲ್ಲಿ ಪ್ರದರ್ಶನಕ್ಕಿಟ್ಟಿದೆ.

"ಕನ್ನಡ ಮತ್ತು ನಮ್ಮ ಸಂಸ್ಕೃತಿಯನ್ನು ಇನ್ನಷ್ಟು ಪರಿಚಯಿಸಲು ವಿಷ್ಣು ದಾದಾ ಅವರ ಚಿತ್ರಕಲೆಗಳು ಸ್ಪೂರ್ತಿಯಾಗಿವೆ. ಕೇವಲ ಮಾರಾಟ ಮಾಡುವುದು ನಮ್ಮ ಉದ್ದೇಶವಲ್ಲ. ದೇಶ, ವಿದೇಶದಿಂದ ಬಂದ ಜನರಿಗೆ ಕನ್ನಡ ಕಲಾವಿದರು ಪರಿಚಯವಾಗಬೇಕು ಎನ್ನುವುದು ಪ್ರದರ್ಶನದ ಉದ್ದೇಶ" ಎಂದು ಆಯೋಜಕರು ತಿಳಿಸಿದ್ದಾರೆ.

ಕರ್ನಾಟಕದಲ್ಲೇ ಕನ್ನಡ ನಶಿಸುತ್ತಿದ್ದು, ಹೋರಾಟ ಮಾಡಬೇಕಿರುವ ಪರಿಸ್ಥಿತಿ ಎದುರಾಗಿದೆ. ಮೇರುನಟರಾದ ವಿಷ್ಣುವರ್ಧನ್ ಅವರನ್ನು ಕನ್ನಡದ ರಾಯಭಾರಿಯಾಗಿ ಬಿಂಬಿಸಲು ಹೊರಟಿದ್ದೇವೆ. 15 ಚಿತ್ರಕಲೆಗಳನ್ನು ಬೇರೆ ಬೇರೆ ಉನ್ನತ ಕಲಾವಿದರು ಬಿಡಿಸಿದ್ದಾರೆ. ಪುಣ್ಯಭೂಮಿ ವಿವಾದ ಬಗೆಹರಿದು ಅಭಿಮಾನಿಗಳು ಸಂತಸಪಡುವ ಕ್ಷಣ ಬೇಗ ಬರಲಿ ಎಂದು ಅವರು ಹೇಳಿದ್ದಾರೆ.

ಚಿತ್ರಸಂತೆಯಲ್ಲಿ ಸುಮಾರು 2,000 ಸ್ಟಾಲ್​ಗಳಲ್ಲಿ ವರನಟ ರಾಜ್ ಕುಮಾರ್, ಶಂಕರ್ ನಾಗ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಚಿತ್ರಗಳು ಕಾಣಸಿಗುವುದು ಕಷ್ಟಸಾಧ್ಯವಾಗಿದೆ. ಇಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಪರಿಷತ್ ಮತ್ತು ಸರ್ಕಾರ ನೀಡಬೇಕಿತ್ತು. ಅದನ್ನು ನಮ್ಮ ಮಿತಿಯಲ್ಲಿ ತಕ್ಕ ಮಟ್ಟಿಗೆ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಆಯೋಜಕರು ತಿಳಿಸಿದರು.

ವಿಷ್ಟುವರ್ಧನ್ ಅವರ ಮಳೆಯ ಮಾರುತ, ನಾಗರಹಾವು ಚಿತ್ರಗಳು ಸೇರಿದಂತೆ ಪ್ರಖ್ಯಾತ ಚಿತ್ರಗಳ ಮತ್ತು ಅವರ ಸಂಗೀತ ಪ್ರೇಮವನ್ನು ತೋರ್ಪಡಿಸುವ ಚಿತ್ರಕಲೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು. ಇದರೊಂದಿಗೆ ವಿಷ್ಣು ಅವರ ಕೋಟಿಗೊಬ್ಬ ಕ್ಯಾಲೆಂಡರ್ ಮತ್ತು ವಿವಿಧ ಲೇಖಕರು ಬರೆದಿರುವ ಅವರ ಬಗೆಗಿನ ಪುಸ್ತಕಗಳಾದ ಆ ಕರ್ಣನಂತೆ, ನೆನಪಿನ ಮುತ್ತಿನ ಹಾರ, ಸಿಂಹಾವಲೋಕನ, ಮುಗಿಯದಿರಲಿ ಬಂಧನ ಎಂಬುದನ್ನು ಜನ ಖರೀದಿಸಿದ್ದಾರೆ.

ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಾಣ ವಿಚಾರ : ನಟ ಅನಿರುದ್ಧ್ ಹೇಳಿದ್ದಿಷ್ಟು!

"ವಿಷ್ಣುವರ್ಧನ್ ಅವರ ಚಿತ್ರಗಳು, ಕ್ಯಾಲೆಂಡರ್ ಮತ್ತು ಪುಸ್ತಕಗಳನ್ನು ಅತಿ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದೇವೆ. ಕಲಾ ಚಿತ್ರಗಳು 8 ಸಾವಿರದಿಂದ 15 ಸಾವಿರ ರೂ.ವರೆಗೆ ಮಾರಾಟವಾಗಿವೆ. ಕಲಾವಿದರ ಪರಿಶ್ರಮಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ" ಎಂದು ವೀರಲೋಕ ಸಂಸ್ಥೆಯ ಪ್ರತಿನಿಧಿ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಪಿ.ಸುರೇಶ್ ಹೇಳಿದರು.

Last Updated : Jan 8, 2024, 8:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.