ದೊಡ್ಡಬಳ್ಳಾಪುರ: ನಗರದ ಕಸ್ತೂರಿ ಬಾ ಶಿಶುವಿಹಾರ ಅವರಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಂದ ರಚಿತವಾದ ಚಿತ್ರಕಲೆಗಳ ಪ್ರದರ್ಶನ ಮಾಡಲಾಯಿತು.
ಮಹಿಳಾ ಸಮಾಜ ಆಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದಿಂದ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳು ಮತ್ತು ದೊಡ್ಡಬಳ್ಳಾಪುರಕ್ಕೆ ಸೊಸೆಯಂದಿರಾಗಿ ಬಂದವರು ತಮ್ಮ ಚಿತ್ರಗಳನ್ನ ಪ್ರದರ್ಶಿಸಿದರು. ಸುಮಾರು 14 ಮಹಿಳೆಯರ ನೂರಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಂಡವು.
ಓದಿ : ಹೇಮಾವತಿ ನದಿ ತೀರದಲ್ಲಿ ಪುರಾತನ ಚನ್ನಕೇಶವ ವಿಗ್ರಹ ಪತ್ತೆ
ಜಲವರ್ಣ, ತೈಲವರ್ಣ, ಕ್ರಾಫ್ಟ್, ಅಮೂರ್ತ ಚಿತ್ರಗಳು, ವರ್ಲಿ ಕಲೆ, ಆಕ್ರಿಲಿಕ್ ಹೀಗೆ ವಿಧದ ಚಿತ್ರಗಳಲ್ಲಿ ಮಹಿಳೆಯರು ತಮ್ಮ ಅನುಭವ ಮತ್ತು ಭಾವನೆಗಳನ್ನು ಬಣ್ಣ, ರೇಖೆಗಳ ಮೂಲಕ ಪ್ರಸ್ತುತಪಡಿಸಿದರು. ಪರಿಸರ, ಬುದ್ಧ, ಮಹಿಳೆ ಹಿನ್ನೆಲೆಯ ಚಿತ್ರಗಳು ನೋಡುಗರ ಕಣ್ಮನ ಸೆಳೆದವು.