ಬೆಂಗಳೂರು: ಪೇಂಟಿಂಗ್ ಕೆಲಸ ಮಾಡುತ್ತಿದ್ದಾಗ ಕಟ್ಟಡದ 3ನೇ ಮಹಡಿಯಿಂದ ಕೆಳಗೆ ಬಿದ್ದು ಪೇಂಟರ್ ಸಾವನ್ನಪ್ಪಿರುವ ಘಟನೆ ಜೆಪಿ ನಗರದ 5ನೇ ಹಂತದ ಮಹಾರಾಜ ಪ್ಯಾಲೇಸ್ ಅಪಾರ್ಟ್ಮೆಂಟ್ನಲ್ಲಿ ಇಂದು (ಶುಕ್ರವಾರ) ನಡೆದಿದೆ. ನರಸಿಂಹ(50) ಮೃತ ದುರ್ದೈವಿ.
ಇದನ್ನೂ ಓದಿ: ಯಲ್ಲಾಪುರ: ಬಾವಿಗೆ ಇಳಿದವನ ರಕ್ಷಣೆಗೆ ಮುಂದಾದ ಇಬ್ಬರು ಸೇರಿ ಮೂವರೂ ಸಾವು
ಸೂಕ್ತ ಸುರಕ್ಷತಾ ಸಾಧನಗಳನ್ನು ಬಳಸದೇ ಹಗ್ಗ ಕಟ್ಟಿಕೊಂಡು ಪೇಂಟಿಂಗ್ ಕೆಲಸ ಮಾಡುತ್ತಿದ್ದಾಗ ಹಗ್ಗ ತುಂಡಾಗಿ ನೆಲಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಶಾಲೆಗೆ ಹೋಗುವಾಗ ಪ್ರತಿನಿತ್ಯ ಹಿಂಬಾಲಿಸಿ ಕಿರುಕುಳ: ನೊಂದು ಶಿಕ್ಷಣ ನಿಲ್ಲಿಸಿದ ವಿದ್ಯಾರ್ಥಿನಿ
ಅಪಾರ್ಟ್ಮೆಂಟ್ ಮೇಲಿನಿಂದ ಬಿದ್ದು ಗಗನಸಖಿ ಸಾವು: ಗೆಳೆಯನನ್ನು ಭೇಟಿ ಮಾಡಲು ದುಬೈನಿಂದ ಬಂದಿದ್ದ ಯುವತಿ ಅಪಾರ್ಟ್ಮೆಂಟ್ ಮೇಲಿನಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೋರಮಂಗಲದ 8ನೇ ಬ್ಲಾಕ್ನಲ್ಲಿ ಇತ್ತೀಚೆಗೆ ನಡೆದಿತ್ತು.
ಇದನ್ನೂ ಓದಿ: ಉಡುಪಿಯಲ್ಲಿ ರಿಕ್ಷಾ ಮೇಲೆ ಮರ ಬಿದ್ದು ಇಬ್ಬರು ಪ್ರಯಾಣಿಕರು ಸಾವು; ಚಾಲಕ ಪಾರು
ನಗರದ ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಅರ್ಚನಾ ಧಿಮಾನ್ (28) ಸಾವನ್ನಪ್ಪಿದ್ದರು. ಹಿಮಾಚಲ ಪ್ರದೇಶ ಮೂಲದವರಾದ ಅರ್ಚನಾ ಧಿಮಾನ್ ಏರ್ಲೈನ್ಸ್ನಲ್ಲಿ ಗಗನಸಖಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿರುವ ತನ್ನ ಗೆಳೆಯ ಆದೇಶ್ನನ್ನು ಭೇಟಿಯಾಗಲು ದುಬೈನಿಂದ ಬಂದಿದ್ದರು. ಕೇರಳ ಮೂಲದ ಆದೇಶ್ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯರಾತ್ರಿಯಲ್ಲಿ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ಅರ್ಚನಾ ಸಾವನ್ನಪ್ಪಿದ್ದರು. ಕೆಲ ವರ್ಷಗಳಿಂದ ಅರ್ಚನಾ ಮತ್ತು ಆದೇಶ್ ಪರಸ್ಪರ ಪ್ರೀತಿ ಮಾಡಿತ್ತಿದ್ದರು. ಬೆಂಗಳೂರಿಗೆ ಸ್ನೇಹಿತನನ್ನು ಭೇಟಿ ಮಾಡಲು ಬಂದಾಗ ಈ ಘಟನೆ ನಡೆದಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ಮಂಗಳೂರು ಕದ್ರಿ ದೇಗುಲದ ಬಳಿ ರಾತ್ರಿ ಅನುಮಾನಾಸ್ಪದ ತಿರುಗಾಟ: ಮೂವರು ಪೊಲೀಸರ ವಶಕ್ಕೆ
ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ತೆಗೆದು ಬೆಂಕಿ ಹಚ್ಚಿದ ಮಹಿಳೆ: ವಿಡಿಯೋ