ಬೆಂಗಳೂರು: ರಮೇಶ್ ಒಳ್ಳೆಯ, ಪ್ರಮಾಣಿಕ ಹುಡುಗ. ಅವನ ಸಾವಿನಿಂದ ನನಗೆ ಬಹಳ ನೋವಾಗ್ತಿದೆ. ಅವನು ಒಬ್ಬ ಪಿಎ. ನನ್ನ ವ್ಯವಹಾರವನ್ನು ಹೇಗೆ ನೋಡಿಕೊಳ್ಳೊಕ್ಕಾಗುತ್ತೆ? ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಜಿ. ಪರಮೇಶ್ವರ್, ಐಟಿ ವಿಚಾರಣೆ ನಮ್ಮ ಮನೇಲೂ ಆಗ್ತಿತ್ತು. ಅದ್ರಲ್ಲಿ ನಾವು ಬ್ಯುಸಿ ಆಗಿದ್ವಿ. ತೆರಿಗೆ ಅಧಿಕಾರಿಗಳು ರಮೇಶ್ನನ್ನು ಕರೆದುಕೊಂಡು ಹೋಗಿರುವ ವಿಚಾರ ನನಗೆ ಗೊತ್ತಿರಲಿಲ್ಲ ಎಂದರು.
ರಮೇಶ್ ಅವರನ್ನು ಕರೆದುಕೊಂಡು ಹೋಗಿ, ಸಂಜೆ ಕಳುಹಿಸಿದ್ದಾರೆ. ಆದ್ರೆ ಎಲ್ಲಿಗೆ ಕರ್ಕೊಂಡು ಹೋಗಿದ್ರು ಅನ್ನೋದು ಗೊತ್ತಿಲ್ಲ. ರಮೇಶ್ ನನ್ನ ಬಳಿ ಐಟಿ ಅಧಿಕಾರಿಗಳು ನನ್ನ ಮನೆಗೆ ಕರೆದೊಯ್ದಿದ್ದರು ಅಂತ ಹೇಳಿದ್ರು. ಆ ವೇಳೆ ಧೈರ್ಯವಾಗಿರು, ಇದೆಲ್ಲ ಏನೂ ಆಗಲ್ಲ ಥ್ಯಾಂಕ್ಸ್ ಹೇಳಿ ಕಳುಹಿಸಿದ್ದೆ ಎಂದರು.
ಇನ್ನು ರಮೇಶ್ ನನ್ನ ವ್ಯವಾಹಾರ ನೊಡ್ತಿದ್ದ ಅನ್ನೋ ಸುದ್ದಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ರಮೇಶ್ ಒಬ್ಬ ಪಿಎ, ನನ್ನ ವ್ಯವಹಾರ ಅವನಿಗೆ ಹೇಗೆ ಕೊಡಲಿ? ಅವನು ನೋಡಿಕೊಳ್ಳುತ್ತಾನೆ ಅಂದ್ರೆ ನಂಬೋಕೆ ಆಗುತ್ತಾ? ನನ್ನ ವ್ಯವಹಾರ ರಮೇಶ್ ನೋಡಿಕೊಳ್ಳುತ್ತಿರಲಿಲ್ಲ ಎಂದು ಸ್ಪಷ್ಟನೆ ಕೊಟ್ಟರು.