ಬೆಂಗಳೂರು: 38ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಗುರುವಾರ ರಾತ್ರಿ 08:40ಕ್ಕೆ ಬೆಂಗಳೂರಿನ ವೈಟ್ ಫೀಲ್ಡ್, ಒಳನಾಡಿನ ಕಂಟೇನರ್ ಡಿಪೋ ತಲುಪಿದೆ. ಇದು ಜೂ.16 ರಂದು ಸಂಜೆ 04:51ಕ್ಕೆ ಒಡಿಶಾದ ರೂರ್ಕೆಲಾದಿಂದ ಲೋಡ್ ಮಾಡಿಕೊಂಡು ಪ್ರಯಾಣ ಬೆಳೆಸಿತ್ತು.
ಈ ರೈಲು ನಾಲ್ಕು ಕ್ರಯೋಜೆನಿಕ್ ಕಂಟೇನರ್‌ಗಳಿಂದ 77.39 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಗಿಸಿದೆ. ಭಾರತೀಯ ರೈಲ್ವೆ ಈವರೆಗೆ 443 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ನಡೆಸಿದೆ. 1830 ಟ್ಯಾಂಕರ್‌ಗಳಲ್ಲಿ 32,000 ಟನ್‌ಗಳಿಗಿಂತ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ಸಾಗಿಸಿದೆ. ಅಲ್ಲದೇ ಕೋವಿಡ್-19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ಪರಿಹಾರ ನೀಡಿದೆ.
ಇಲ್ಲಿಯವರೆಗೆ ಕರ್ನಾಟಕ ರಾಜ್ಯವು ರೈಲಿನ ಮೂಲಕ 4,226.2 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಪಡೆದಿದೆ.