ETV Bharat / state

ಭೂಸುಧಾರಣೆ ಸುಗ್ರೀವಾಜ್ಞೆ ಸಂವಿಧಾನ ವಿರೋಧಿ : ರೈತ ಸಂಘಗಳಿಂದ ಪ್ರತಿಭಟನೆ ಎಚ್ಚರಿಕೆ - ರೈತ ಮುಖಂಡ ಕುರುಬೂರು ಶಾಂತಕುಮಾರ್

ಬಂಡವಾಳಶಾಹಿಗಳಿಗೆ, ಭೂಮಾಫಿಯಾದ ಕುಳಗಳಿಗೆ ರೈತರ ಭೂಮಿ ಕಿತ್ತುಕೊಡಲು ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ಇಷ್ಟು ಸಾಲದೆಂಬಂತೆ ಅಕ್ರಮವಾಗಿ ಭೂಮಿ ಖರೀದಿ ಮಾಡಿದ್ದವರ ವಿರುದ್ಧ ದಾಖಲಿಸಿದ್ದ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಕೈಬಿಡಲು ಸರ್ಕಾರ ಆದೇಶಿಸಿದೆ. ಇವೆಲ್ಲವೂ ಜನಪರ ಸರ್ಕಾರದ ನೀತಿಗಳಲ್ಲ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

outrage-against-land-reform-act-amendment-ordinance
ಭೂಸುಧಾರಣೆ ಸುಗ್ರೀವಾಜ್ಞೆ
author img

By

Published : Jul 17, 2020, 4:42 AM IST

ಬೆಂಗಳೂರು : ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಬಡ ರೈತರ ಮತ್ತು ಗೇಣಿದಾರರ ಹಿತ ಕಾಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಭುಸುಧಾರಣಾ ಕಾಯ್ದೆ 1964ರ ಸೆಕ್ಷನ್ 79(ಎ), 79 (ಬಿ) ನಿಯಮಗಳನ್ನು ಕೈಬಿಟ್ಟು ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವ ಸರ್ಕಾರದ ವಿರುದ್ಧ ರೈತರು ಹಾಗೂ ಕಾನೂನು ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರದ ಕ್ರಮ ರೈತರ ಕತ್ತು ಕೊಯ್ಯುವ ರೀತಿಯಲ್ಲಿದೆ. ಕೊರೊನಾ ಸಂಕಷ್ಟದಂತಹ ಕಾಲದಲ್ಲಿ ಜನರ ಸಮಸ್ಯೆಗಳೇ ನೂರಾರಿವೆ. ಅವೆಲ್ಲವನ್ನೂ ಬದಿಗಿಟ್ಟು ಬಂಡವಾಳಶಾಹಿಗಳಿಗೆ, ಭೂಮಾಫಿಯಾದ ಕುಳಗಳಿಗೆ ರೈತರ ಭೂಮಿ ಕಿತ್ತುಕೊಡಲು ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ಇಷ್ಟು ಸಾಲದೆಂಬಂತೆ ಅಕ್ರಮವಾಗಿ ಭೂಮಿ ಖರೀದಿ ಮಾಡಿದ್ದವರ ವಿರುದ್ಧ ದಾಖಲಿಸಿದ್ದ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಕೈಬಿಡಲು ಸರ್ಕಾರ ಆದೇಶಿಸಿದೆ. ಇವೆಲ್ಲವೂ ಜನಪರ ಸರ್ಕಾರದ ನೀತಿಗಳಲ್ಲ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಗ್ರೀವಾಜ್ಞೆ ಕುರಿತು ಕಾನೂನು ತಜ್ಞರು, ರಾಜ್ಯ ಹೈಕೋರ್ಟ್​ನ ಹಿರಿಯ ನ್ಯಾಯವಾದಿಗಳೂ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರು ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಸಂವಿಧಾನ ವಿರೋಧಿ ಎಂದಿದ್ದಾರೆ. ಜನಪರವಲ್ಲದ ಕಾನೂನನ್ನು ಕೊರೊನಾ ತುರ್ತು ಪರಿಸ್ಥಿತಿಯಂತ ಸಂದರ್ಭದಲ್ಲಿ ಯಾವುದೇ ಚರ್ಚೆ ನಡೆಸದೆ ಏಕಾಏಕಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ ಎಂದಿದ್ದಾರೆ.

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್

ಪೊನ್ನಣ್ಣ ಅವರು ಹೇಳುವಂತೆ, ಸಂವಿಧಾನದ ವಿಧಿಗಳ ಪ್ರಕಾರ ಯಾವುದೇ ಒಂದು ಸರ್ಕಾರ ಕಾನೂನು ರೂಪಿಸಬೇಕಾದರೆ ಅಥವಾ ತಿದ್ದುಪಡಿ ಮಾಡಬೇಕಿದ್ದರೆ ಅದನ್ನು ವಿಧಾನಸಭೆಗಳಲ್ಲಿ ಅಥವಾ ಸಂಸತ್ತಿನಲ್ಲಿ ಚರ್ಚಿಸಿಯೇ ಜಾರಿ ಮಾಡಬೇಕು. ಒಂದು ವೇಳೆ ವಿಧಾನಸಭೆ ಅಥವಾ ಸಂಸತ್ತು ಅಧಿವೇಶನ ಇಲ್ಲದಿದ್ದ ಸಂದರ್ಭದಲ್ಲಿ ಕಾನೂನು ಜಾರಿ ಮಾಡುವ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಅಂಕಿತದ ಮೇರೆಗೆ ಸುಗ್ರೀವಾಜ್ಞೆ ಜಾರಿ ಮಾಡಬಹುದು.

ಪ್ರಸ್ತುತ ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಿಸಿದ್ದು, ದಿನ ಕಳೆದಂತೆ ಉಲ್ಬಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜನರ ಆರೋಗ್ಯ ಮತ್ತಿತರ ತುರ್ತು ಸಮಸ್ಯೆಗಳ ಕಡೆ ಗಮನ ಹರಿಸಬೇಕಿತ್ತು. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವಂತಹ ಯಾವುದೇ ತುರ್ತು ಪರಿಸ್ಥಿತಿ ರಾಜ್ಯದಲ್ಲಿ ಇರಲಿಲ್ಲ. ಹೀಗೆ ಕಾಯ್ದೆ ಸಂಬಂಧ ಯಾವುದೇ ತುರ್ತು ಪರಿಸ್ಥಿತಿ ಎದುರಾಗದಿದ್ದರೂ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾನೂನು ತಿದ್ದುಪಡಿ ಮಾಡುವುದು ಸಂವಿಧಾನ ವಿರೋಧಿ ಕ್ರಮ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ ಎನ್ನುತ್ತಾರೆ ಎ.ಎಸ್. ಪೊನ್ನಣ್ಣ.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೇಕೆ ಅಸಮಾಧಾನ?:

ದೇಶದಲ್ಲಿ ಶೇ. 70ಕ್ಕೂ ಅಧಿಕ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ ಎಂಬ ಕಾರಣಕ್ಕೆ ಭೂ ಸುಧಾರಣಾ ಕಾಯ್ದೆ ಜಾರಿ ಮಾಡಲಾಗಿತ್ತು. ಬಡ ರೈತರು ಮತ್ತು ಗೇಣಿದಾರರು ಮತ್ತು ಕೃಷಿ ಕಾರ್ಮಿಕರು ತಮ್ಮ ಭೂಮಿಯನ್ನು ಬಂಡವಾಳಶಾಹಿಗಳ ದಾಹಕ್ಕೆ ಕಳೆದುಕೊಳ್ಳಬಾರದು. ಕೃಷಿ ಉತ್ಪನ್ನ ಕಡಿಮೆಯಾಗಬಾರದು ಮತ್ತು ಬೇರೆಲ್ಲ ಉದ್ಯಮಗಳಂತೆ ವಾಣಿಜ್ಯ ಚಟುವಟಿಕೆಯಾಗದೆ ದೇಶದ ಜನರ ಹಸಿವು ನೀಗಿಸುವ ಕ್ಷೇತ್ರವಾಗಬೇಕು ಎಂಬ ಕಾರಣಕ್ಕಾಗಿ ಕಾಯ್ದೆಯಲ್ಲಿ 79 (ಎ) (ಬಿ) (ಸಿ) 80 ನಿಯಮಗಳನ್ನು ಸೇರಿಸಲಾಗಿತ್ತು.

ಅದರಂತೆ, ಸೆಕ್ಷನ್ 79 ಎ ಪ್ರಕಾರ ಕೃಷಿ ಭೂಮಿಯನ್ನು ಕೃಷಿಕರು ಮಾತ್ರ ಖರೀದಿಸಬೇಕಿತ್ತು. 79 ಬಿ ಪ್ರಕಾರ ಕೃಷಿಕರಲ್ಲದವರು ವ್ಯವಸಾಯದ ಭೂಮಿ ಖರೀದಿಸುವಂತಿರಲಿಲ್ಲ. 79 ಸಿ ಪ್ರಕಾರ ಭೂಮಿ ಖರೀದಿಸುವ ವ್ಯಕ್ತಿ ತಾನು ಕೃಷಿಕ ಎಂಬುದನ್ನು ದಾಖಲೆಗಳಲ್ಲಿ ಸ್ಪಷ್ಟಪಡಿಸಬೇಕಿತ್ತು. ಇನ್ನು ಸೆಕ್ಷನ್ 80ರ ಪ್ರಕಾರ ಕೃಷಿಕರಲ್ಲದವರಿಗೆ ಕೃಷಿ ಭೂಮಿ ಮಾರುವಂತಿರಲಿಲ್ಲ.

ಆದರೆ, ಸರ್ಕಾರ ಇದೀಗ ಕಾಯ್ದೆಗೆ ಸುಗ್ರೀವಾಜ್ಞೆ ತರುವ ಮೂಲಕ ತಿದ್ದುಪಡಿ ತಂದು 79 (ಎ) (ಬಿ)(ಸಿ), 80 ನಿಯಮಗಳನ್ನು ರದ್ದುಗೊಳಿಸಿದೆ. ಜತೆಗೆ ಭೂಮಿ ಖರೀದಿಯ ಮಿತಿಯನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಇದರ ಪರಿಣಾಮವಾಗಿ ಬಂಡವಾಳಶಾಹಿಗಳು ಯಾರು ಬೇಕಿದ್ದರೂ ಸುಲಭವಾಗಿ ನೂರಾರು ಎಕರೆ ಭೂಮಿ ಖರೀದಿಸಬಹುದಾಗಿದ್ದು, ಬಡ ರೈತರಿಗೆ, ಗೇಣಿದಾರರಿಗೆ ಕಂಟಕ ಎದುರಾಗಿದೆ. ಹೀಗಾಗಿಯೇ ರೈತ ಮುಖಂಡರು ಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.