ಆನೇಕಲ್: ಕೊರೊನಾ ಸೋಂಕಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿಯಿಂದ ಪಟ್ಟು ಹಿಡಿದು ತಾಲೂಕು ಆಡಳಿತ ಕೂಡಲೇ ಸೋಂಕಿತರ ಅಳಲನ್ನು ಆಲಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ.
ನೂರಾರು ಸೊಂಕಿತರು ಆಸ್ಪತ್ರೆಯಿಂದ ಹೊರಬಂದು ಆಸ್ಪತ್ರೆ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಮೊಬೈಲ್ನಲ್ಲಿ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ.
ಕುಡಿಯುವ ನೀರು, ಶೌಚಾಲಯ ಹಾಗೂ ಸ್ವಚ್ಛತೆ ಇಲ್ಲದ ಆಕ್ಸ್‌ಫರ್ಡ್ ಆಸ್ಪತ್ರೆಯ ಕುರಿತು ವಾರಕ್ಕೊಮ್ಮೆಯಾದರೂ ಮಾಧ್ಯಮಗಳಲ್ಲಿ ಸುದ್ದಿ ವರದಿಯಾಗುತ್ತಿದೆ. ಆದರೆ ಈ ಬಗ್ಗೆ ಆಡಳಿತ ಮಂಡಳಿ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದೆ. ಪ್ರತಿ ವ್ಯಕ್ತಿಯ ಆರೈಕೆಗೆ ಸರ್ಕಾರದಿಂದ ಶುಲ್ಕ ಪಡೆಯುತ್ತಿರುವ ಆಸ್ಪತ್ರೆ, ಕೇವಲ ನಾಲ್ಕಾರು ಮಾತ್ರೆ ನೀಡಿ ಸೋಂಕಿತರನ್ನ ಕಡೆಗಣಿಸುತ್ತಿದೆ ಎಂದು ಅರೋಪಿಸಿದರು.