ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿಗಳಿಗೆ ಇನ್ಮುಂದೆ ಹೊರಗಿನ ಆಹಾರವನ್ನ ತರುವುದು, ಕೊಡುವುದನ್ನ ನಿಷೇಧಿಸಲಾಗಿದೆ.. ಈ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದು, ಆರೋಗ್ಯದ ದೃಷ್ಟಿಯಿಂದ ಅನಧಿಕೃತ ಆಹಾರ ವಿತರಣೆ ನಿಷೇಧಿಸಲಾಗಿದೆ..
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವ್ಯಾಪ್ತಿಯಲ್ಲಿ ಅನೇಕ ಜಿಲ್ಲಾ ಆಸ್ಪತ್ರೆಗಳು, ಬೆಂಗಳೂರು ನಗರದಲ್ಲಿರುವ ಜಿಲ್ಲಾ ಮಟ್ಟ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಕೆಲಸ ನಿರ್ವಹಿಸುತ್ತಿದೆ.. ಈ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ 50-100 ಕ್ಕಿಂತ ಹೆಚ್ಚು ಒಳರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಅಲ್ಪಾವಧಿಯ ದೀರ್ಘಾವಧಿ ಅನಾರೋಗ್ಯ ಪೀಡಿತರು ಇರುತ್ತಾರೆ. ಇಂತಹವರಿಗೆ ಸರ್ಕಾರದಿಂದಲ್ಲೇ ಉಚಿತವಾಗಿ ಆಹಾರ ಲಭ್ಯವಿರುತ್ತದೆ.
ಸರ್ಕಾರಿ ಆಸ್ಪತ್ರೆಗಳಲ್ಲಿನ ಒಳರೋಗಿಗಳಿಗೆ ಇನ್ಮುಂದೆ ಹೊರಗಿನ ಆಹಾರ ನಿಷೇಧ - corona lock down
ರೋಗಿಗಳಿಗೆ ಅವರಿಗೆ ಭಾದಿಸುತ್ತಿರುವ ಅನಾರೋಗ್ಯದ ಲಕ್ಷಣಗಳನ್ನು ಅವಲಂಬಿಸಿ ಕೂಡ ಪಥ್ಯಾಹಾರವನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ರೋಗಿಗಳಿಗೂ ಬೆಳಗ್ಗೆ ಹಾಲು ಬೆಡ್, ನೀಡಲಾಗುತ್ತದೆ. ದಿನಕ್ಕೆ 2 ಬಾರಿ, ಅನ್ನ-ತರಕಾರಿ ಸಾಂಬಾರ್ ನೀಡಲಾಗುತ್ತದೆ. ಈ ಸೌಲಭ್ಯ ಸಾಮಾನ್ಯ ವಾರ್ಡ್- ವಿಶೇಷ ವಾರ್ಡ್ ಗಳಲ್ಲಿ ಇರುವ ರೋಗಿಗಳಿಗೂ ಅನ್ವಯಿಸುತ್ತದೆ.