ETV Bharat / state

ಆಸ್ಪತ್ರೆಯ ನೋಂದಣಿ ರದ್ದುಪಡಿಸಲು ಮೂಲ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ: ಹೈಕೋರ್ಟ್ - ಗುರುಶ್ರೀ ಆಸ್ಪತ್ರೆ ರಾಜರಾಜೇಶ್ವರಿ ನಗರ

ಗುರುಶ್ರೀ ಹೈಟೆಕ್ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯ ನೋಂದಣಿಯನ್ನು ರದ್ದುಪಡಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶವನ್ನು ಹೈಕೋರ್ಟ್ ಅನೂರ್ಜಿತಗೊಳಿಸಿದೆ.

High Court
ಹೈಕೋರ್ಟ್
author img

By

Published : Jun 1, 2023, 8:17 AM IST

ಬೆಂಗಳೂರು: ಕೋವಿಡ್ 19 ಸಂದರ್ಭದಲ್ಲಿ ರೋಗಿಗಳಿಂದ ಹೆಚ್ಚುವರಿ ಶುಲ್ಕ ಪಡೆದಿದ್ದ ರಾಜರಾಜೇಶ್ವರಿ ನಗರದ ಗುರುಶ್ರೀ ಹೈಟೆಕ್ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯ ನೋಂದಣಿಯನ್ನು ರದ್ದುಪಡಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶವನ್ನು ಹೈಕೋರ್ಟ್ ಅನೂರ್ಜಿತಗೊಳಿಸಿದೆ. ಆಸ್ಪತ್ರೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ ತಿದ್ದುಪಡಿ ಪ್ರಕಾರ ಆಸ್ಪತ್ರೆಗಳ ನೋಂದಣಿ ವಿಚಾರದಲ್ಲಿ ಬಿಬಿಎಂಪಿ ಆಯುಕ್ತರು ಮೂಲ ಪ್ರಾಧಿಕಾರವಾಗಿದ್ದಾರೆ. ಆದರೆ ಅವರ ಅಧಿಕಾರ ವ್ಯಾಪ್ತಿ ಇಲ್ಲದೆ ಇದ್ದರೂ ಇಲಾಖೆ ನೋಂದಣಿಯನ್ನು ರದ್ದುಪಡಿಸಿದೆ. ಬಿಬಿಎಂಪಿ ಮೂಲ ಪ್ರಾಧಿಕಾರವಾಗಿದ್ದು ಅದಕ್ಕೆ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅರ್ಜಿದಾರ ಆಸ್ಪತ್ರೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿರುವುದು ಮತ್ತು ಸರ್ಕಾರದಿಂದ ನಿಗದಿಪಡಿಸಿದ್ದ ಹಣಕ್ಕಿಂತ ಹೆಚ್ಚು ಶುಲ್ಕ ಪಡೆದುಕೊಂಡಿದ್ದ ಆರೋಪ ಎದುರಾಗಿತ್ತು. ಈ ಸಂಬಂಧ ಸ್ಥಳೀಯ ಶಾಸಕ ಹಾಗೂ ಅಂದಿನ ತೋಟಗಾರಿಕಾ ಸಚಿವರಾಗಿದ್ದ ಎನ್.ಮುನಿರತ್ನ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಸ್ಪತ್ರೆಯ ಪರವಾನಿಗೆ ರದ್ದು ಮಾಡುವಂತೆ ಸೂಚನೆ ನೀಡಿದ್ದರು.

ಈ ಪತ್ರವನ್ನು ಆಧರಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನೋಂದಣಾಧಿಕಾರಿ (ಮೂಲ ಪ್ರಾಧಿಕಾರ) ಪ್ರಕ್ರಿಯೆ ನಡೆಸಿ 2022 ರ ಆ.20 ರಂದು ಆಸ್ಪತ್ರೆಯ ನೋಂದಣಿಯನ್ನು ರದ್ದುಪಡಿಸಿದ್ದರು. ಅದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಂದೆ ಪ್ರಶ್ನಿಸಿದ್ದಾಗ ಇಲಾಖೆ ಜಿಲ್ಲಾಧಿಕಾರಿ ಆದೇಶವನ್ನು ಖಚಿತಪಡಿಸಿತ್ತು. ಅದನ್ನು ಪ್ರಶ್ನಿಸಿ ಆಸ್ಪತ್ರೆ ಹೈಕೋರ್ಟ್ ಮೊರೆ ಹೋಗಿತ್ತು.

ಆನ್‌ಲೈನ್ ದಿನಸಿ ವಿತರಣಾ ಬ್ಲಿಂಕಿಟ್ ವಿರುದ್ಧದ ತಾತ್ಕಾಲಿಕ ನಿರ್ಬಂಧ ಆದೇಶ ರದ್ದು: ವ್ಯವಹಾರ ಮಾಡದೆ ಕೇವಲ ವಾಣಿಜ್ಯ ಚಿನ್ಹೆ ತನ್ನದೆಂದು ಹೇಳಿದರೆ ಅದನ್ನು ನಿರ್ಣಾಯಕ ಸಾಕ್ಷ್ಯ ಎಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬ್ಲಿಂಕಿಟ್ ಹೆಸರಿನ ಸಾಫ್ಟ್‌ವೇರ್ ಸೇವಾ ಸಂಸ್ಥೆಯ ವ್ಯಾಪಾರಿಯ ಚಿನ್ಹೆ ಉಲ್ಲಂಘಿಸಿದ ಪ್ರಕರಣದಲ್ಲಿ (ಜೊಮ್ಯಾಟೊ ಮಾಲಿಕತ್ವದ) ಆನ್‌ಲೈನ್ ದಿನಸಿ ವಿತರಣಾ ವೇದಿಕೆಯಾದ ಬ್ಲಿಂಕಿಟ್ ವಾಣಿಜ್ಯ ಚಿನ್ಹೆಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿದೆ.

ದಿನಸಿ ವಿತರಣಾ ವೇದಿಕೆ ಬ್ಲಿಂಕಿಟ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ, ಸಾಫ್ಟ್‌ವೇರ್ ಸಂಸ್ಥೆಯಾಗಿರುವ ಬ್ಲಿಂಕಿಟ್ ಪಡೆದಿರುವ ವಾಣಿಜ್ಯ ಚಿಹ್ನೆಯ ಹೆಸರಿನಲ್ಲಿ ಯಾವುದೇ ವ್ಯವಹಾರ ನಡೆದಿಲ್ಲ ಮತ್ತು ಯಾವುದೇ ಬಗೆಯ ಆದಾಯ ಸೃಷ್ಟಿಯಾಗಿಲ್ಲ ಎಂದು ಆದೇಶದಲ್ಲಿ ತಿಳಿಸಿತು.

ಎರಡೂ ಕಂಪನಿಗಳ ವ್ಯವಹಾರ ಸಂಪೂರ್ಣ ಭಿನ್ನವಾಗಿದ್ದು ಅನುಕೂಲದ ಸಮತೋಲನ ಎಂಬುದು ದಿನಸಿ ವಿತರಣಾ ವೇದಿಕೆಯಾದ ಬ್ಲಿಂಕಿಟ್ ಪರವಾಗಿ ನಿಲ್ಲುತ್ತದೆ ಎಂದು ನ್ಯಾಯಾಲಯ ಹೇಳಿತು. ಅಲ್ಲದೆ, ತನ್ನ ವ್ಯವಹಾರಕ್ಕಾಗಿ ವಾಣಿಜ್ಯ ಚಿನ್ಹೆಯಾದ ಬ್ಲಿಂಕಿಟ್ ಪದವನ್ನು ಬಳಸುವ ಮೊದಲೇ ಬ್ಲಿಂಕ್‌ಹಿಟ್ ನೋಂದಾಯಿತ ವಾಣಿಜ್ಯ ಚಿನ್ಹೆಯನ್ನು ಪಡೆದುಕೊಂಡಿತ್ತು.

ಆದರೂ ಬ್ಲಿಂಕಿಟ್‌ನ ಹಣಕಾಸಿನ ದಾಖಲೆಗಳು ಅದು ಯಾವುದೇ ವ್ಯಾಪಾರ ಚಟುವಟಿಕೆ ನಡೆಸಿಲ್ಲ ಇಲ್ಲವೇ ವಾಣಿಜ್ಯ ಚಿನ್ಹೆಯನ್ನು ಆಧರಿಸಿ ಆದಾಯ ಗಳಿಸಿಲ್ಲ ಎಂಬುದನ್ನು ಬಹಿರಂಗಪಡಿಸಿವೆ ಎಂಬುದಾಗಿ ತಿಳಿಸಿರು ನ್ಯಾಯಪೀಠ, ಪ್ರಕರಣದ ಆದೇಶ ಪ್ರತಿ ಸಿಕ್ಕ ಒಂದು ವರ್ಷದ ಅವಧಿಯೊಳಗೆ ಅರ್ಜಿಯನ್ನು ವಿಲೇವಾರಿ ಮಾಡಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ತಾನು 2016 ನೇ ಇಸವಿಯಲ್ಲೇ ಬ್ಲಿಂಕಿಟ್ ಮತ್ತು ಐಬ್ಲಿಂಕಿಟ್ ಹೆಸರುಗಳನ್ನು ವಾಣಿಜ್ಯ ಚಿನ್ಹೆಯಾಗಿ ನೋಂದಾಯಿಸಿಕೊಂಡಿದೆ. ಆದರೆ ತನ್ನ ವಾಣಿಜ್ಯ ಚಿನ್ಹೆಯನ್ನೇ ಹೋಲುವ ವಾಣಿಜ್ಯ ಚಿನ್ಹೆಯನ್ನು ದಿನಸಿ ವಿತರಣಾ ವೇದಿಕೆ ಬ್ಲಿಂಕಿಟ್ ಬಳಸುತ್ತಿದೆ ಎಂದು ಸಾಫ್ಟ್‌ವೇರ್ ಕಂಪನಿ ಬ್ಲಿಂಕಿಟ್ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ದಿನಸಿ ವಿತರಣಾ ವೇದಿಕೆ ಬ್ಲಿಂಕಿಟ್ ಬಳಸದಂತೆ ನಿರ್ಬಂಧ ವಿಧಿಸಿತ್ತು. ಇದನ್ನು ಪ್ರಶ್ನಿಸಿ ದಿನಸಿ ವಿತರಣಾ ವೇದಿಕೆ ಬ್ಲಿಂಕಿಟ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದನ್ನೂ ಓದಿ: ಲೋಕಾಯುಕ್ತ ಅಧಿಕಾರ ಪುನರ್ ಸ್ಥಾಪಿಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ನಿವೃತ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.