ETV Bharat / state

'ಕೃಷಿ ಯಂತ್ರೋಪಕರಣ ಮಾರಾಟ ಮಾಡುವ ಡೀಲರ್​ಗಳು ಕಡ್ಡಾಯ ಎಂಆರ್​​ಪಿ ಪ್ರದರ್ಶಿಸಬೇಕು'

ಕೃಷಿ ಯಂತ್ರೋಪಕರಣ ಖರೀದಿಸುವ ರೈತರಿಗೆ ಉತ್ತೇಜನದ ರೂಪದಲ್ಲಿ ನೀಡಲಾಗುವ ಸಹಾಯಧನ ಸೌಲಭ್ಯದ ಕುರಿತು ಸಮರ್ಪಕ ಮಾಹಿತಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆಯೆಂದು ಶೋಭಾ ಕರಂದ್ಲಾಜೆ ಮಾಧ್ಯಮಗಳಿಗೆ ತಿಳಿಸಿದರು.

ಕೇಂದ್ರ ಕೃಷಿ ಮತ್ತು ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ

author img

By

Published : Aug 6, 2021, 10:48 AM IST

ನವದಹೆಲಿ/ ಬೆಂಗಳೂರು: ರೈತರು ಖರೀದಿಸುವ ಕೃಷಿ ಯಂತ್ರೋಪಕರಣ ಮಾರಾಟ ಮಾಡುವ ಡೀಲರ್​​ಗಳು ಕಡ್ಡಾಯವಾಗಿ ಗರಿಷ್ಟ ಮಾರಾಟ ದರ (ಎಂಆರ್​​ಪಿ) ಯನ್ನು ಪ್ರದರ್ಶಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ.

ಕೇಂದ್ರ ಕೃಷಿ ಮತ್ತು ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಈ ಬಗ್ಗೆ ಮಾಹಿತಿ ನೀಡಿದ್ದು, ಟ್ರ್ಯಾಕ್ಟರ್, ಟಿಲ್ಲರ್ ಸೇರಿದಂತೆ ರೈತರು ಖರೀದಿಸುವ ಕೃಷಿ ಯಂತ್ರೋಪಕರಣ ಮಾರಾಟ ಮಾಡುವ ಡೀಲರ್​ಗಳು ಕಡ್ಡಾಯವಾಗಿ ಗರಿಷ್ಠ ಮಾರಾಟ ದರ (ಎಂಆರ್ ಪಿ) ಯನ್ನು ಪ್ರದರ್ಶಿಸುವಂತೆ ಆದೇಶ ಹೊರಡಿಸಲಾಗಿದೆ. ಕೃಷಿ ಯಂತ್ರೋಪಕರಣ ಉತ್ಪಾದನಾ ಕಂಪನಿಗಳು, ಮಾರಾಟ ಮಾಡುವ ಡೀಲರ್‌ಗಳು ಹಾಗೂ ಆಯಾ ರಾಜ್ಯ ಸರ್ಕಾರಗಳ ಕೃಷಿ ಇಲಾಖೆಗಳ ಅಧಿಕೃತ ವೆಬ್‌ಸೈಟ್‍ಗಳಲ್ಲೂ ಕಡ್ಡಾಯವಾಗಿ ದರ ಪ್ರಕಟಿಸುವಂತೆ ಸೂಚಿಸಲಾಗಿದೆ.

ಕೃಷಿ ಯಂತ್ರೋಪಕರಣ ಖರೀದಿಸುವ ರೈತರಿಗೆ ಉತ್ತೇಜನದ ರೂಪದಲ್ಲಿ ನೀಡಲಾಗುವ ಸಹಾಯಧನ ಸೌಲಭ್ಯದ ಕುರಿತು ಸಮರ್ಪಕ ಮಾಹಿತಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆಯೆಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದರು.

ಈ ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ರಷ್ಟು ಮತ್ತು ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ ಶೇ.90 ರಷ್ಟು ಗರಿಷ್ಠ 1.00 ಲಕ್ಷ ರೂ. ಗಳ ಮಿತಿಗೊಳಪಟ್ಟು ಉಪಕರಣಗಳ ಸಹಾಯಧನವನ್ನು ನಿಗಧಿಪಡಿಸಲಾಗಿದೆ.

ದೇಶದ ನಾನಾ ಭಾಗದಲ್ಲಿ ಯಂತ್ರೋಪಕರಣಗಳ ಮಾರಾಟಗಾರರು ಮನಬಂದಂತೆ ದರ ವಿಧಿಸಿ ರೈತರಿಗೆ ವಂಚಿಸುವ ಆರೋಪ ಕೇಳಿ ಬರುತ್ತಿದ್ದರಿಂದ, ಕೆಲವು ಮಾನದಂಡಗಳನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ರಾಜ್ಯಸರ್ಕಾರಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆಯೆಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಿಕ್ಕೆ ಬಂದ ನಂತರ 2014 ರಿಂದ 2022 ರವರೆಗೆ ಒಟ್ಟು 5,490 ಕೋಟಿ ರೂ.ಅನುದಾನವನ್ನು ಈ ಯೋಜನೆಯಡಿಯಲ್ಲಿ ಒದಗಿಸಿದ್ದು, ಕರ್ನಾಟಕ ರಾಜ್ಯಕ್ಕೆ ಒಟ್ಟು 560.67 ಕೋಟಿ ರೂ. ಅನುದಾನ ರೈತರ ಯಂತ್ರೋಪಕರಣಗಳ ಖರೀದಿಗಾಗಿ ಮಂಜೂರಾಗಿರುವುದಾಗಿ ಶೋಭಾ ಕರಂದ್ಲಾಜೆ ತಿಳಿಸಿದರು.

ಈ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 13,23,773 ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸಲಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಒಟ್ಟು 1,58,725 ಯಂತ್ರೋಪಕರಣಗಳನ್ನು ರೈತರಿಗೆ ಪೂರೈಸಲಾಗಿದೆ ಎಂದರು.

ಇದನ್ನೂ ಓದಿ : 'ಐ ಡೋಂಟ್​​ ಕೇರ್​​'... ಅಣ್ಣಾಮಲೈ ಮೇಕೆದಾಟು ಸತ್ಯಾಗ್ರಹಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಒಟ್ಟು 7 ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ 362 ಹೈಟೆಕ್ ಹಬ್ಸ್ ನಿರ್ಮಿಸಲಾಗಿದ್ದು, ಕರ್ನಾಟಕದಲ್ಲಿ ಒಟ್ಟು 213 ಹೈಟೆಕ್ ಹಬ್ಸ್​​ಗಳನ್ನು ನಿರ್ಮಿಸಲಾಗಿದ್ದು, ಕರ್ನಾಟಕ ರಾಜ್ಯ ಈ ಸಾಧನೆಯಲ್ಲಿ ಮುಂಚೂಣಿಯಲ್ಲಿದೆ. ಗ್ರಾಮ ಪಂಚಾಯತಿ ಹಾಗೂ ಕೃಷಿ ವಿಜ್ಞಾನಗಳ ಕೇಂದ್ರಗಳ ಮೂಲಕವೂ ರೈತರಿಗೆ ಕೃಷಿ ಯಂತ್ರೋಪಕರಣಗ ಬಾಡಿಗೆ ರೂಪದಲ್ಲಿ ದೊರೆಯುವಂತೆಯೂ ಕ್ರಮ ಕೈಗೊಳ್ಳಲಾಗಿದೆ ಎಂದರು.

ಆಧುನಿಕ ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳು ಕೃಷಿ ಬೆಳವಣಿಗೆಗೆ ಉತ್ತೇಜನ ನೀಡುವುದಲ್ಲದೆ ರೈತರಿಗೆ ಆರ್ಥಿಕ ಬಲವನ್ನು ನೀಡುತ್ತವೆ. ಇಂದಿನ ಕಾಲದಲ್ಲಿ ರೈತರಿಗೆ ಸರಿಯಾದ ಬಿತ್ತನೆ, ನೀರಾವರಿ, ಕೊಯ್ಲು ಮತ್ತು ಸಂಗ್ರಹಣೆ ಮಾಡಲು ಸಹಾಯ ಮಾಡುವ ಆಧುನಿಕ ಕೃಷಿ ಉಪಕರಣಗಳೊಂದಿಗೆ ಕೃಷಿ ಕೆಲಸವನ್ನು ಮಾಡಲು ಮಾತ್ರ ಸಾಧ್ಯವಿದೆ ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆಯೆಂದು ಶೋಭಾ ಕರಂದ್ಲಾಜೆ ತಿಳಿಸಿದರು.

ವಿವಿಧ ಕೃಷಿ ಯಂತ್ರೋಪಕರಣಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಪರಿಶೀಲಿಸಿ ಕೃಷಿ ಇಲಾಖೆಯು ಕೃಷಿಯಂತ್ರೋಪಕರಣಗಳ ಸರಬರಾಜುದಾರರನ್ನು ಎಂಪ್ಯಾನಲ್ ಮಾಡಲಾಗುತ್ತಿದೆ. ಮಾದರಿವಾರು ಸರಬರಾಜುದಾರರು ನೀಡಿದ ದರವನ್ನು ದರಕದಾರು ಪಟ್ಟಿಯಲ್ಲಿ ನೀಡಲಾಗಿರುತ್ತದೆ. ಸದರಿ ದರಗಳು ಪ್ರಸ್ತುತ ಚಾಲ್ತಿಯಲ್ಲಿರುವ ತೆರಿಗೆಯನ್ನು ಒಳಗೊಂಡಂತೆ ಗರಿಷ್ಠ ದರಗಳಾಗಿದ್ದು ಇಲಾಖೆಯು ನಿಗಧಿಪಡಿಸಿದ ದರಗಳಾಗಿರುವುದಿಲ್ಲ. ಆದ್ದರಿಂದ ರೈತರು ಗರಿಷ್ಠ ದರಕ್ಕಿಂತ ಕಡಿಮೆ ದರಕ್ಕೆ ಚೌಕಾಸಿ ಮಾಡಿ ಉಪಕರಣಗಳನ್ನು ಖರೀದಿ ಮಾಡಲು ಸಹ ಅವಕಾಶವಿರುವುದಾಗಿ ಕೇಂದ್ರ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಒಟ್ಟಾರೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಾಗೂ ಭಾರತ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಹತ್ತಾರು ರೈತ ಪರ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ಸಾಫಲ್ಯತೆ ಕಂಡುಕೊಂಡಿದೆಯೆಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.