ಬೊಮ್ಮನಹಳ್ಳಿ(ಬೆಂಗಳೂರು): ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ಇಂಧನ ಬೆಲೆಗೆ ಮಧ್ಯಮ ವರ್ಗದ ಜನ ತತ್ತರಿಸಿರುವುದನ್ನು ಮನಗಂಡು ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆದ್ದಾರಿ ವೃತ್ತದ ಬಳಿ ಪ್ರತಿಭಟಿಸಿದರು.
ಬೈಕ್ ಶವಯಾತ್ರೆ ನಡೆಸುವ ಮುಖಾಂತರ ಬೆಲೆ ಏರಿಕೆಗಳಿಗೆ ಕಡಿವಾಣ ಹಾಕದ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಡಿವೈಡರ್ಗೆ ಮರಳು ತುಂಬಿದ ಟ್ರಕ್ ಡಿಕ್ಕಿ: ಬೆಂಗಳೂರು-ಹೆಬ್ಬಾಳ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಾಸುದೇವ ರೆಡ್ಡಿ ಮತ್ತು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ರೆಡ್ಡಿ ಇನ್ನಿತರೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.