ಬೆಂಗಳೂರು: ನಾಳೆ ನಗರದಲ್ಲಿ ನಡೆಯಲಿರುವ ಕೇಂದ್ರದ ಪ್ರತಿಪಕ್ಷ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಮುಖಂಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಆಯೋಜಿಸಿರುವ ಔತಣಕೂಟ ಶುರುವಾಗಿದೆ. ಔತಣಕೂಟದಲ್ಲಿ ಭಾಗವಹಿಸಲು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಡ್ ಹೋಟೆಲ್ಗೆ ಬಹುತೇಕ ಗಣ್ಯರು ಆಗಮಿಸಿದ್ದಾರೆ.
-
#WATCH | AAP MP Raghav Chadha arrives at the venue of the Opposition meeting in Bengaluru, received by Karnataka CM & Congress leader Siddaramaiah, deputy CM DK Shivakumar and party leader KC Venugopal, in Bengaluru pic.twitter.com/sJ8l0GppqO
— ANI (@ANI) July 17, 2023 " class="align-text-top noRightClick twitterSection" data="
">#WATCH | AAP MP Raghav Chadha arrives at the venue of the Opposition meeting in Bengaluru, received by Karnataka CM & Congress leader Siddaramaiah, deputy CM DK Shivakumar and party leader KC Venugopal, in Bengaluru pic.twitter.com/sJ8l0GppqO
— ANI (@ANI) July 17, 2023#WATCH | AAP MP Raghav Chadha arrives at the venue of the Opposition meeting in Bengaluru, received by Karnataka CM & Congress leader Siddaramaiah, deputy CM DK Shivakumar and party leader KC Venugopal, in Bengaluru pic.twitter.com/sJ8l0GppqO
— ANI (@ANI) July 17, 2023
ಇಂದು ಹಮ್ಮಿಕೊಂಡಿರುವ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಿದ್ದರಾಮಯ್ಯ ಹೋಟೆಲ್ಗೆ ಆಗಮಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಇಂದು ಸಂಜೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಳ್ಳಲು ತೆರಳಿದ್ದರು. ಆಗಮಿಸಿದ ರಾಷ್ಟ್ರೀಯ ನಾಯಕರ ಜೊತೆ ತಾಜ್ ವೆಸ್ಟೆಂಡ್ ಹೋಟೆಲ್ ಆಗಮಿಸಿ ಕೆಲಕಾಲ ಇದ್ದು ವಿಧಾನಸೌಧಕ್ಕೆ ತೆರಳಿದ್ದ ಸಿದ್ದರಾಮಯ್ಯ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಸಂಜೆ ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ವಿಧಾನಸೌಧದಿಂದ ಹೊರಟು ನೇರವಾಗಿ ತಾಜ್ ವೆಸ್ಟ್ ಎಂಡ್ ಹೋಟೆಲ್ ತಲುಪಿದ್ದಾರೆ.
-
#WATCH | JD(U) leader and Bihar CM Nitish Kumar arrives for Opposition dinner meeting in Bengaluru, Karnataka pic.twitter.com/Fag2a6OK8a
— ANI (@ANI) July 17, 2023 " class="align-text-top noRightClick twitterSection" data="
">#WATCH | JD(U) leader and Bihar CM Nitish Kumar arrives for Opposition dinner meeting in Bengaluru, Karnataka pic.twitter.com/Fag2a6OK8a
— ANI (@ANI) July 17, 2023#WATCH | JD(U) leader and Bihar CM Nitish Kumar arrives for Opposition dinner meeting in Bengaluru, Karnataka pic.twitter.com/Fag2a6OK8a
— ANI (@ANI) July 17, 2023
ಬಹುತೇಕ ನಾಯಕರು ಔತಣಕೂಟದಲ್ಲಿ ಭಾಗಿ: ನಾಳಿನ ಮಹಾಘಟಬಂಧನ್ ಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಬಹುತೇಕ ಎಲ್ಲ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಔತಣಕೂಟದಲ್ಲಿ ಭಾಗಿಯಾಗಲು ತಾಜ್ ವೆಸ್ಟೆಂಡ್ ಹೋಟೆಲಿಗೆ ಆಗಮಿಸಿದ್ದಾರೆ. ಜಾರ್ಖಂಡ್ ಸಿಎಂ ಜೆಎಂಎಂನ ಹೇಮಂತ್ ಸೊರೇನ್, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ನ ಓಮರ್ ಅಬ್ದುಲ್ಲಾ, ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಶಿವಸೇನೆಯ ಉದ್ದವ್ ಠಾಕ್ರೆ, ಆದಿತ್ಯ ಠಾಕ್ರೆ ಮುಂತಾದ ನಾಯಕರು ತಾಜ್ ಹೊಟೇಲ್ಗೆ ಈಗಾಗಲೇ ತಲುಪಿದ್ದಾರೆ.
ಎಐಸಿಸಿ ಕರೆದಿರುವ ಪ್ರತಿಪಕ್ಷಗಳ ಮುಖಂಡರ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದ ಸಮಾಜವಾದಿ ಪಕ್ಷದ ಅಧ್ಯಕ್ಷರೂ ಆದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಷ್ ಯಾದವ್, ಶಿವಸೇನಾ ಮುಖ್ಯಸ್ಥರೂ ಆದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ, ಜೆಡಿಯು ಮುಖಂಡರೂ ಆದ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಹಾಗೂ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರನ್ನು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಇಂದು ಸಂಜೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಇದ್ದರು.
ಕೆಲ ನಾಯಕರು ನಾಳಿನ ಸಭೆಗೆ ಹಾಜರಾಗಲಿದ್ದಾರೆ; ಇನ್ನುಳಿದ ನಾಯಕರು ನಾಳೆ ಬೆಳಗ್ಗೆ ಬಂದು ಸೇರಿಕೊಳ್ಳಲಿದ್ದಾರೆ. ಮಧ್ಯಾಹ್ನ 11 ಗಂಟೆಗೆ ಮಹಾಘಟಬಂಧನ್ ಸಭೆ ನಡೆಯಲಿದೆ. ಇದರ ಬಳಿಕ ಸಂಜೆ ಸೋನಿಯಾ ಗಾಂಧಿ ಕರೆದಿರುವ ಔತಣಕೂಟದಲ್ಲಿ ಭಾಗಿಯಾಗುವ ನಾಯಕರು ರಾತ್ರಿ ತಮ್ಮ ರಾಜ್ಯಗಳಿಗೆ ಹಿಂದಿರುಗಲಿದ್ದಾರೆ. ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಹ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಜುಲೈ 19ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಾಜ್ಯದ ಸಚಿವರ ಜೊತೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಭೆ ಕರೆದಿರುವ ಹಿನ್ನೆಲೆ ರಾಹುಲ್ ಗಾಂಧಿ ನಾಳೆ ನಗರದಲ್ಲಿಯೇ ತಂಗಲಿದ್ದಾರೆ.
ಔತಣಕೂಟಕ್ಕೂ ಮುನ್ನ ಔಪಚಾರಿಕ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಔತಣಕೂಟ ಆರಂಭಕ್ಕೂ ಮುನ್ನ ಪ್ರತಿಪಕ್ಷಗಳ ಔತಟಕೂಟದ ಸಭೆ ಪ್ರಾರಂಭವಾಗಿದ್ದು, ಸಭೆಯ ಹಾಲ್ ಆಗಮಿಸಿದ 40ಕ್ಕೂ ಹೆಚ್ಚು ನಾಯಕರನ್ನು ಕಾಂಗ್ರೆಸ್ ನಾಯಕರು ಅತ್ಯಂತ ವಿಶೇಷ ಕಾಳಜಿಯಿಂದ ಬರಮಾಡಿಕೊಂಡಿದ್ದಾರೆ. ಎಂಕೆ ಸ್ಟಾಲಿನ್, ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್, ಹೇಮಂತ್ ಸೊರೇನ್, ಭಗವಂತ ಮಾನ್, ಲಾಲೂ ಪ್ರಸಾದ್ ಯಾದವ್ ಸಭೆಗೆ ಹಾಜರಾಗಿದ್ದಾರೆ. ಪ್ರತಿ ಪಕ್ಷಗಳ ನಾಯಕರನ್ನು ಒಬ್ಬೊಬ್ಬರಾಗಿ ಸ್ವಾಗತಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಜತೆ ಸಿಎಂ ಸಿದ್ದರಾಮಯ್ಯ ಕೂಡ ಹೊಟೇಲ್ ನಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: Opposition parties meeting: ರಾಹುಲ್ ಗಾಂಧಿ 'ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ'.. ಬೆಂಗಳೂರು ಸಭೆ ನಡುವೆ ಹೀಗೊಂದು ಚರ್ಚೆ