ETV Bharat / state

ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಎಸ್​ಆರ್​​ಪಿ: ಇನ್ನೆರಡು ದಿನವೂ ಪರಿಷತ್ ಕಲಾಪಕ್ಕೆ ಗೈರು

author img

By

Published : Feb 9, 2021, 11:55 AM IST

ಶುಕ್ರವಾರ ತವರು ಜಿಲ್ಲೆ ಬಾಗಲಕೋಟೆಗೆ ತೆರಳಿದ್ದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಅಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಮುಂದಿನ ಎರಡು ದಿನ ವಿಧಾನಪರಿಷತ್ ಕಲಾಪದಲ್ಲಿ ಗೈರು ಹಾಜರಾಗಲಿದ್ದಾರೆ.

SR Patil
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್

ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಮುಂದಿನ ಎರಡು ದಿನ ವಿಧಾನಪರಿಷತ್ ಕಲಾಪದಲ್ಲಿ ಗೈರು ಹಾಜರಾಗಲಿದ್ದಾರೆ.

ಶುಕ್ರವಾರ ಮುಕ್ತಾಯವಾಗಬೇಕಿದ್ದ ವಿಧಾನ ಪರಿಷತ್ ಕಲಾಪ ಸಭಾಪತಿಗಳ ಆಯ್ಕೆ ಹಾಗೂ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ವಿಧೇಯಕ ಜಾರಿಗೆ ತರುವ ಉದ್ದೇಶದಿಂದ ಮೂರು ದಿನ ವಿಸ್ತರಿಸಿದ್ದು, ಕಲಾಪ ಬುಧವಾರದವರೆಗೂ ನಡೆಯಲಿದೆ. ಕಲಾಪ ಸೋಮವಾರಕ್ಕೆ ಮುಂದೂಡಿಕೆ ಆದ ಹಿನ್ನೆಲೆ ಶುಕ್ರವಾರ ತವರು ಜಿಲ್ಲೆ ಬಾಗಲಕೋಟೆಗೆ ತೆರಳಿದ್ದ ಎಸ್ಆರ್ ಪಾಟೀಲ್ ಅಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಸೋಮವಾರ ಕೂಡ ಕಲಾಪದಲ್ಲಿ ಭಾಗಿಯಾಗಿರಲಿಲ್ಲ. ಇನ್ನೆರಡು ದಿನ ಕೂಡ ಅವರು ಪರಿಷತ್ ಕಲಾಪದಲ್ಲಿ ಅಲಭ್ಯರಾಗಿದ್ದು ಮುಂದಿನ ಬಜೆಟ್ ಅಧಿವೇಶನಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಇದೆ.

  • ಸಣ್ಣ ಪ್ರಮಾಣದ ಅನಾರೋಗ್ಯದ ಕಾರಣ ಮತ್ತು 1 ವಾರ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದರಿಂದ ನನಗೆ ಸದನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.ವೈದ್ಯರ ಚಿಕಿತ್ಸೆಯಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಮಾಧ್ಯಮದವರು,ಅಭಿಮಾನಿಗಳು, ಸ್ನೇಹಿತರು ಆತಂಕದಿಂದ ಫೋನ್ ಮಾಡುತ್ತಿದ್ದಾರೆ.ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ, ಶೀಘ್ರದಲ್ಲೇ ಗುಣಮುಖನಾಗಲಿದ್ದೇನೆ.

    — S R Patil (@srpatilbagalkot) February 8, 2021 " class="align-text-top noRightClick twitterSection" data=" ">

ಓದಿ: ಪರಿಷತ್​ ಕಲಾಪದಲ್ಲಿ ಶೃಂಗೇರಿ ಅತ್ಯಾಚಾರ ಪ್ರಕರಣ ಚರ್ಚೆ: ಕ್ರಮದ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವ

ತಮ್ಮ ಅನಾರೋಗ್ಯದ ವಿಚಾರವನ್ನು ವಿಧಾನಪರಿಷತ್ ಸಭಾಪತಿಗಳಿಗೆ ಪತ್ರ ಬರೆದು ವಿವರಿಸಿರುವ ಅವರು ಟ್ವೀಟ್ ಕೂಡ ಮಾಡಿದ್ದು, ಸಣ್ಣ ಪ್ರಮಾಣದ ಅನಾರೋಗ್ಯದ ಕಾರಣ ಮತ್ತು 1 ವಾರ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದರಿಂದ ನನಗೆ ಸದನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ವೈದ್ಯರ ಚಿಕಿತ್ಸೆಯಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಮಾಧ್ಯಮದವರು, ಅಭಿಮಾನಿಗಳು, ಸ್ನೇಹಿತರು ಆತಂಕದಿಂದ ಕರೆ ಮಾಡುತ್ತಿದ್ದಾರೆ. ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ, ಶೀಘ್ರದಲ್ಲೇ ಗುಣಮುಖನಾಗಲಿದ್ದೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.