ETV Bharat / state

ರಾಜ್ಯದ ಎಲ್ಲ ಕೋರ್ಟ್​ಗಳಲ್ಲೂ ಆನ್ ಲೈನ್ ಮೂಲಕವೇ ವಿಚಾರಣೆ - ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ

ಕೋವಿಡ್​ ಹಿನ್ನೆಲೆಯಲ್ಲಿ ಹೈಕೋರ್ಟ್​​​​ನ ಪ್ರಧಾನ ಪೀಠದ 20ಕ್ಕೂ ಅಧಿಕ ಕೋರ್ಟ್ ಹಾಲ್​​ಗಳಲ್ಲಿ ಆನ್ಲೈನ್​ ಮೂಲಕವೇ ಕಲಾಪಗಳು ನಡೆದವು.

ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲೂ ಆನ್ ಲೈನ್ ಮೂಲಕವೇ ವಿಚಾರಣೆ

author img

By

Published : May 24, 2021, 10:16 PM IST

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ನಡೆಸಲಾಗುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಎಸ್ಒಪಿ ಅನುಸಾರ ಕೋರ್ಟ್​​​​​ಗಳ ನಿಯಮಿತ ಕಲಾಪಗಳನ್ನು ನಡೆಸಲಾಗುತ್ತಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವಾಗ ಎದುರಾಗುವ ಕಾನೂನಾತ್ಮಕ ಹಾಗೂ ತಾಂತ್ರಿಕ ತೊಡಕುಗಳಿಗೆ ಪರಿಹಾರ ಹುಡುಕಲು ಹೈಕೋರ್ಟ್ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡಿದೆ.

ಇಂದು ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ವಕೀಲ ಸಮುದಾಯ ಹಾಗೂ ಕೋರ್ಟ್ ಸಿಬ್ಬಂದಿ ರಕ್ಷಣೆಗಾಗಿ ಹೈಕೋರ್ಟ್ ಹಾಗೂ ಎಲ್ಲ ವಿಚಾರಣಾ ನ್ಯಾಯಾಲಯಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಸಂರ್ಪೂಣವಾಗಿ ಆನ್​​​ಲೈನ್​​​ ಮೂಲಕವೇ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇಂದಿನ ಹೈಕೋರ್ಟ್ ಪ್ರಧಾನ ಪೀಠದ 20ಕ್ಕೂ ಅಧಿಕ ಕೋರ್ಟ್ ಹಾಲ್​​ಗಳಲ್ಲಿ ಆನ್ಲೈನ್​ ಮೂಲಕವೇ ಕಲಾಪಗಳು ನಡೆದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.