ರಾಜಸ್ಥಾನ (ಭರತ್ಪುರ್ /ಬೆಂಗಳೂರು): ರಾಜಸ್ಥಾನ ಮೂಲದ ಹ್ಯಾಕರ್ಸ್ ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ಆನ್ಲೈನ್ನಲ್ಲಿ ವಂಚನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಆರೋಪಿಗಳು ರಾಜಸ್ಥಾನದ ಭರತ್ಪುರ್ ಮೂಲದವರು ಎಂದು ತಿಳಿದು ಬರುತ್ತಿದ್ದಂತೆ, ಬೆಂಗಳೂರು ಕ್ರೈಂ ಬ್ರಾಂಚ್ ಮತ್ತು ಸೈಬರ್ ಸೆಲ್ನ 12 ಅಧಿಕಾರಿಗಳ ತಂಡ ಭಾನುವಾರ ಭರತ್ಪುರದ ಕಮಾನ್ಗೆ ತೆರಳಿದೆ. ಭರತ್ಪುರ ವ್ಯಾಪ್ತಿಯ ಐಜಿ ಲಕ್ಷ್ಮಣ್ ಗೌರ್ ನೇತೃತ್ವದಲ್ಲಿ ಸುಮಾರು 12 ಗ್ರಾಮಗಳಲ್ಲಿ ತಂಡವು ಕಾರ್ಯಾಚರಣೆ ನಡೆಸಿ 4 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಈವರೆಗೂ ಸುಮಾರು 11,000 ಸೈಬರ್ ಕ್ರೈಂ ಪ್ರಕರಣಗಳು ಬೆಂಗಳೂರು ನಗರದಲ್ಲಿ ದಾಖಲಾಗಿದ್ದು, ಅದರಲ್ಲಿ 800ಕ್ಕೂ ಹೆಚ್ಚು ಪ್ರಕರಣಗಳು ರಾಜಸ್ಥಾನದ ಕಮಾನ್ ಪ್ರದೇಶದೊಂದಿಗೆ ಸಂಬಂಧ ಹೊಂದಿವೆ ಎಂದು ಬೆಂಗಳೂರು ಪೊಲೀಸರು ತಿಳಿಸಿದರು.
ಆರೋಪಿಗಳು ಬೆಂಗಳೂರು ಆಯುಕ್ತರ ಹೆಸರಲ್ಲಿ ಹಲವಾರು ಮಂದಿಯನ್ನು ವಂಚಿಸಿದ್ದಾರೆ. ತದನಂತರ ಪೊಲೀಸರ ತಂಡ ಬೆಂಗಳೂರಿಗೆ ಬಂದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಕಮಾನ್ ಪೊಲೀಸ್ ಠಾಣೆಯ ಅಧಿಕಾರಿ ಧರ್ಮೇಶ್ ದೈಮಾ ತಿಳಿಸಿದರು.